ETV Bharat / bharat

ವಿಶೇಷ ಸ್ಥಾನಮಾನ ರದ್ಧತಿ ಎಫೆಕ್ಟ್: ಕಾಶ್ಮೀರದಲ್ಲಿ ಗಲಭೆ ಪ್ರಕರಣ ಶೇ 88ರಷ್ಟು ಇಳಿಕೆ - Article 370 abrogation

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿಯ ನಂತರ ಗಲಭೆ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ. ಅಲ್ಲದೆ ಗಲಭೆಗಳಲ್ಲಿ ಯೋಧರು ಹಾಗೂ ನಾಗರಿಕರ ಸಾವಿನ ಸಂಖ್ಯೆಯಲ್ಲೂ ಇಳಿಕೆಯಾಗಿದೆ.

ಕಾಶ್ಮೀರದಲ್ಲಿ ಗಲಭೆ ಪ್ರಕರಣಗಳು ಶೇ 88ರಷ್ಟು ಇಳಿಕೆ
Kashmir: Cases of breach of peace reduced by 88%
author img

By

Published : Aug 5, 2022, 5:31 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರದ ಮೂರು ವರ್ಷಗಳಲ್ಲಿ, ಅದಕ್ಕೂ ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳು ಶೇಕಡಾ 88ರಷ್ಟು ಕಡಿಮೆಯಾಗಿವೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ- ಆಗಸ್ಟ್ 5, 2016 ರಿಂದ ಆಗಸ್ಟ್ 4, 2019 ರವರೆಗೆ ಕಾಶ್ಮೀರವು 3,686 ಕಾನೂನು ಮತ್ತು ಸುವ್ಯವಸ್ಥೆ ಭಂಗದ ಘಟನೆಗಳಿಗೆ ಸಾಕ್ಷಿಯಾಗಿದೆ. ಆದರೆ, ಆಗಸ್ಟ್ 5, 2019ರ ನಂತರ, ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರದ ಮೂರು ವರ್ಷಗಳಲ್ಲಿ ಕಣಿವೆ ರಾಜ್ಯದಲ್ಲಿ ಅಂಥ 438 ಘಟನೆಗಳು ಮಾತ್ರ ನಡೆದಿವೆ.

ಆಗಸ್ಟ್ 5, 2019 ರ ಹಿಂದಿನ ಮೂರು ವರ್ಷಗಳಲ್ಲಿ ಕಾಶ್ಮೀರದಲ್ಲಿ ಶಾಂತಿಭಂಗದ ಪ್ರಕರಣಗಳಲ್ಲಿ 124 ನಾಗರಿಕರು ಸಾವನ್ನಪ್ಪಿದ್ದರೆ, ನಂತರ ಯಾವುದೇ ನಾಗರಿಕರು ಸಾವನ್ನಪ್ಪಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ, 2016 ರ ಆಗಸ್ಟ್ 5 ರಿಂದ ಆಗಸ್ಟ್ 4, 2019 ರವರೆಗೆ ಆರು ಜನ ಪೊಲೀಸ್ ಮತ್ತು ಭದ್ರತಾ ಪಡೆಗಳ ಸಿಬ್ಬಂದಿ ಶಾಂತಿಭಂಗದ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಅದರ ನಂತರ ಅಂಥ ಯಾವುದೇ ಪ್ರಕರಣ ಸಂಭವಿಸಿಲ್ಲ.

ಆಗಸ್ಟ್ 5, 2019ರ ಹಿಂದಿನ ಮೂರು ವರ್ಷಗಳಲ್ಲಿ 930 ಭಯೋತ್ಪಾದಕ ಘಟನೆಗಳು ದಾಖಲಾಗಿದ್ದವು. ಆದರೆ, ಮುಂದಿನ ಮೂರು ವರ್ಷಗಳಲ್ಲಿ ಈ ಸಂಖ್ಯೆ 617ಕ್ಕೆ ಇಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಟಿಕಲ್ 370 ರದ್ದತಿಯ ಮೂರು ವರ್ಷಗಳ ಮೊದಲು, ಕಣಿವೆಯಲ್ಲಿ ನಡೆದ ಭಯೋತ್ಪಾದಕ ಘಟನೆಗಳಲ್ಲಿ 290 ಜನ ಯೋಧರು ಮೃತಪಟ್ಟಿದ್ದರು. ಆದರೆ ಈ ಸಂಖ್ಯೆ ಮುಂದಿನ ಮೂರು ವರ್ಷಗಳಲ್ಲಿ 174 ಕ್ಕೆ ಇಳಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.