ಕರ್ನೂಲ್: ಯುಗಾದಿಯ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಂದ ಅಪಾರ ಸಂಖ್ಯೆಯ ಭಕ್ತರು ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆಗೆ ತೆರಳುತ್ತಾರೆ. ಇವರಿಗೆ ನಾಗಲೂಟಿ ಕ್ಷೇತ್ರ ಬಳಿ ಉಚಿತ ದತ್ತಿ ಶಿಬರ ಏರ್ಪಡಿಸುತ್ತಾರೆ. ಆದರೆ ಈ ಬಾರಿ ಅನುಮತಿ ನೀಡದ ಕಾರಣ ಭಕ್ತಾದಿಗಳು ಧರಣಿ ನಡೆಸಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಓದಿ: ತಲೆಗೆ ಕಲ್ಲು ಬಡಿದು ವ್ಯಕ್ತಿ ಸಾವು.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಏನಿದು ಘಟನೆ: ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಂದ ಸಾವಿರಾರೂ ಭಕ್ತರು ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕಾಗಿ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ಬರುತ್ತಾರೆ. ಮಾರ್ಗ ಮಧ್ಯೆ ನಾಗಲೂಟಿ ಕ್ಷೇತ್ರದಲ್ಲಿ ಪ್ರತಿ ವರ್ಷ ಅರಣ್ಯ ಇಲಾಖೆ ಉಚಿತ ದತ್ತಿ ಶಿಬರ ನಡೆಸಲು ಅನುಮತಿ ನೀಡುತ್ತಿದ್ದರು. ಆದರೆ ಈ ಬಾರಿ ಅರಣ್ಯಾಧಿಕಾರಿಗಳು ಕೊಲ್ಲಾಪುರದ ಶ್ರೀ ಗುರುದೇವ ಭ್ರಮರಾಂಬ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ಗೆ ಈ ಬಾರಿ ಅನುಮತಿ ನೀಡಿಲ್ಲ. ಹೀಗಾಗಿ ನೂರಾರು ಭಕ್ತಾದಿಗಳು ಆತ್ಮಕೂರು ಡಿಎಫ್‌ಒ ಕಚೇರಿ ಮುಂಭಾಗ ಧರಣಿ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಓದಿ: ‘ಯಾರಿಗೇಳೋಣಾ ನಮ್ಮ ಪ್ರಾಬ್ಲಂ’..ಸಚಿವ ಸ್ಥಾನದ ಆಫರ್..? ಕಾಂಗ್ರೆಸ್ ತೊರೆಯುವ ವಿಚಾರದಲ್ಲಿ ಇಬ್ರಾಹಿಂ ಗೊಂದಲ!
ಈ ಸ್ಥಳದಲ್ಲಿ ಬೇರೆ ಟ್ರಸ್ಟ್ಗೆ ಅನುಮತಿ ನೀಡಲಾಗಿದೆ. ಹೀಗಾಗಿ ಶ್ರೀ ಗುರುದೇವ ಭ್ರಮರಾಂಬ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ಗೆ ಅನುಮತಿ ನೀಡಿಲ್ಲ. ಒಂದೇ ಸ್ಥಳದಲ್ಲಿ ಇಬ್ಬರಿಗೆ ಅನುಮತಿಸಲಾಗದು. ಶ್ರೀ ಗುರುದೇವ ಭ್ರಮರಾಂಬ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಬೇರೆ ಸ್ಥಳದಲ್ಲಿ ಉಚಿತ ದತ್ತಿ ಶಿಬಿರ ಆಯೋಜಿಸಲು ಅರ್ಜಿ ಹಾಕಿದ್ರೆ ಪರಿಶೀಲಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಮಾರ್ಗವಾಗಿ ಪಾದಯಾತ್ರೆಗೆ ತೆರಳುತ್ತಿದ್ದ ಕರ್ನಾಟಕ ಭಕ್ತರೊಬ್ಬರು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.