ಮುಜಾಫರ್ ಪುರ್ (ಬಿಹಾರ): ಕನ್ಹಯ್ಯ ಕುಮಾರ್ ಅವರು ಕಾಂಗ್ರೆಸ್ ಸೇರಿಕೊಂಡಿರುವ ಬಗ್ಗೆ ಬಿಹಾರದ ಪ್ರಮುಖ ವಿರೋಧ ಪಕ್ಷ ಆರ್‌ಜೆಡಿ ವ್ಯಂಗ್ಯವಾಡಿದೆ. ಜೆಎನ್‌ಯು ಸಂಸ್ಥೆಯ ಮಾಜಿ ವಿದ್ಯಾರ್ಥಿ ಇನ್ನೊಬ್ಬ ನವಜೋತ್ ಸಿಂಗ್ ಸಿಧುನಂತೆ ಇದ್ದಾರೆ. ಆವರು ಪಕ್ಷವನ್ನು ನಾಶ ಮಾಡುತ್ತಾರೆ ಎಂದು ಅಣಕಿಸಿದೆ.
ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದಿರುವ ಹಿರಿಯ ಆರ್‌ಜೆಡಿ ನಾಯಕ ಶಿವಾನಂದ್ ತಿವಾರಿ, ಕುಮಾರ್ ಅವರ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಳುಗುತ್ತಿರುವ ದೊಡ್ಡ ಹಡಗು, ಪಕ್ಷವನ್ನು ಮತ್ತಷ್ಟು ನಾಶ ಮಾಡುವ ಇನ್ನೊಬ್ಬ ನವಜೋತ್ ಸಿಂಗ್ ಸಿಧುವಿನಂತಿ ಕನ್ನಯ್ಯ ಇದ್ದಾರೆ. ತೇಜಸ್ವಿ ಯಾದವ್ ನೇತೃತ್ವದ ಪಕ್ಷಕ್ಕೆ ಈ ಬಗ್ಗೆ ಮಾಹಿತಿ ನೀಡದೆ ಕನ್ನಯ್ಯ ಅವರು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಕ್ಕೆ ಪಕ್ಷ ಅತೃಪ್ತಿ ಹೊಂದಿದೆ ಎಂದು ಆರ್‌ಜೆಡಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್- ಆರ್‌ಜೆಡಿ ನೇತೃತ್ವದ ವಿಪಕ್ಷ ಮೈತ್ರಿಕೂಟ ಮಹಾಘಟಬಂಧನ್ ಭಾಗವಾಗಿದ್ದು 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ಹೋರಾಡಿತ್ತು.