ETV Bharat / bharat

ಒಂದು ತಿಂಗಳ ಅವಧಿಯಲ್ಲಿ ಐದು ಕಾಂಗರೂಗಳ ರಕ್ಷಣೆ: ಇವು ಇಲ್ಲಿಗೆ ಬಂದಿದ್ದು ಹೇಗೆಂಬುದೇ ನಿಗೂಢ - ಉತ್ತರ ಬಂಗಾಳದ ಜಲ್ಪೈಗುರಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಐದು ಕಾಂಗರೂಗಳ ರಕ್ಷಣೆ

ಅಲಿಪುರ್ದೌರ್ ಜಿಲ್ಲೆಯ ಅಸ್ಸೋಂ-ಬಾಂಗ್ಲಾ ಗಡಿ ಪ್ರದೇಶದ ಬರೋಬಿಶಾದಲ್ಲಿ ವಯಸ್ಕ ಕಾಂಗರೂಗಳು ಪತ್ತೆಯಾಗಿವೆ. ಹಾಗೆ ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ.

ಒಂದು ತಿಂಗಳ ಅವಧಿಯಲ್ಲಿ ಐದು ಕಾಂಗರೂಗಳ ರಕ್ಷಣೆ

author img

By

Published : Apr 4, 2022, 8:41 PM IST

ಜಲ್ಪೈಗುರಿ (ಪಶ್ಚಿಮ ಬಂಗಾಳ) : ಆಸ್ಟ್ರೇಲಿಯಾದಲ್ಲಿ ಕಂಡುಬರುವ ಕಾಂಗರೂಗಳು, ಭಾರತದಲ್ಲೂ ಕಾಣಿಸಿಕೊಂಡಿವೆ. ಆದ್ರೆ ಅಧಿಕೃತವಾಗಿ ಅಥವಾ ಪ್ರಾಣಿ ವಿನಿಮಯ ಪ್ರಕ್ರಿಯೆಯಿಂದ ಇವು ಬಂದಿರಬಹದು ಅಂದುಕೊಂಡ್ರೆ ನಿಮ್ಮ ಊಹೆ ತಪ್ಪಾಗುತ್ತೆ. ಉತ್ತರ ಬಂಗಾಳದ ಜಲ್ಪೈಗುರಿ ಮತ್ತು ಸಿಲಿಗುರಿಯಿಂದ ಒಂದು ತಿಂಗಳ ಅವಧಿಯಲ್ಲಿ ಇದುವರೆಗೆ ಐದು ಕಾಂಗರೂಗಳನ್ನು ರಕ್ಷಿಸಲಾಗಿದೆ. ಆದರೆ ಈ ಕಾಂಗರೂಗಳು ಎಲ್ಲಿಂದ ಬರುತ್ತಿವೆ ಎಂಬುದು ಈಗ ಉದ್ಭವಿಸಿರುವ ಪ್ರಶ್ನೆಯಾಗಿದೆ.

ಅಲಿಪುರ್ದೌರ್ ಜಿಲ್ಲೆಯ ಅಸ್ಸೋಂ-ಬಾಂಗ್ಲಾ ಗಡಿ ಪ್ರದೇಶದ ಬರೋಬಿಶಾದಲ್ಲಿ ವಯಸ್ಕ ಕಾಂಗರೂಗಳು ಪತ್ತೆಯಾಗಿವೆ. ಹಾಗೆ ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ಈ ಕುರಿತು ರಾಜ್ಯ ಅರಣ್ಯ ಇಲಾಖೆ ಈಗಾಗಲೇ ಉನ್ನತ ಮಟ್ಟದ ತನಿಖೆ ಆರಂಭಿಸಿದೆ. ಜಲ್ಪೈಗುರಿ ಸೈನ್ಸ್ ಮತ್ತು ನೇಚರ್ ಕ್ಲಬ್ ಕಾರ್ಯದರ್ಶಿ ರಾಜಾ ರಾವುತ್​ ಪ್ರತಿಕ್ರಿಯೆ ನೀಡಿ, ಕಾಂಗರೂಗಳ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಬಗ್ಗೆ ತಿಳಿದುಬಂದಿದೆ ಎಂದಿದ್ದಾರೆ.

ಇದನ್ನೂ ಓದಿ: ಯುವ ಇತಿಹಾಸಕಾರರೊಂದಿಗೆ ವಿಶೇಷ ಸಂಭಾಷಣೆ : ಈ ವಯಸ್ಸಲ್ಲೇ ಚಂದ್ರನೆತ್ತರದ ಸಾಧನೆ!

ಅವುಗಳನ್ನು ಈಶಾನ್ಯ ಭಾರತದಿಂದ ತಂದಿರಬಹುದು ಎಂದು ಹೇಳಿರುವ ಅವರು, ಈ ಆಸ್ಟ್ರೇಲಿಯಾದ ಪ್ರಾಣಿಗಳನ್ನು ಮಿಜೋರಾಂನಲ್ಲಿ ಅಕ್ರಮವಾಗಿ ಸಾಕಲಾಗುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮ್ಯಾನ್ಮಾರ್ ಮೂಲಕ ಈಶಾನ್ಯ ಭಾರತದ ವಿವಿಧ ಭಾಗಗಳಿಗೆ ಪ್ರಾಣಿಗಳನ್ನು ತರಲಾಗುತ್ತಿದೆಯೇ ಎಂದು ತಿಳಿಯಬೇಕಿದೆ. ಈ ಅಂತಾರಾಷ್ಟ್ರೀಯ ಕಳ್ಳಸಾಗಣೆ ದಂಧೆಯ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.