ETV Bharat / bharat

ಮುನ್ನೆಲೆಗೆ ಬಂದ ಕಾಮಾಟಿಪುರದ ಬಗ್ಗೆ ನಿಮಗೆಷ್ಟು ಗೊತ್ತು: 200 ವರ್ಷಗಳ ಇತಿಹಾಸದ ದಾಖಲೆಯಲ್ಲಿ ಏನೆಲ್ಲಾ ಜರುಗಿದೆ? - ಫೆಬ್ರವರಿ 25 ರಂದು ಸಂಜಯ್ ಲೀಲಾ ಬನ್ಸಾಲಿಯವರ ಬಹು ನಿರೀಕ್ಷಿತ ಚಿತ್ರ ಗಂಗೂಬಾಯಿ ಕಾಥಿಯಾವಾಡಿ ಬಿಡುಗಡೆ

ಇಂದು ಗೌರವಯುತ ಜೀವನ ನಡೆಸುತ್ತಿರುವ ಅಲ್ಲಿನ ವಾಸಿಗಳು ಈ ಚಿತ್ರದಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ತಮ್ಮ ಸಾಮಾಜಿಕ ಸ್ಥಿತಿಗೆ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಪ್ರದೇಶದ ನಿವಾಸಿಗಳು, ಸಿನಿಮಾ ಪ್ರಸಾರವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

ಮುನ್ನೆಲೆಗೆ ಬಂದ ಕಾಮಾಟಿಪುರದ ಬಗ್ಗೆ ಮಾಹಿತಿ
ಮುನ್ನೆಲೆಗೆ ಬಂದ ಕಾಮಾಟಿಪುರದ ಬಗ್ಗೆ ಮಾಹಿತಿ
author img

By

Published : Feb 25, 2022, 8:21 PM IST

ಮುಂಬೈ: ಫೆಬ್ರವರಿ 25 ರಂದು ಸಂಜಯ್ ಲೀಲಾ ಬನ್ಸಾಲಿಯವರ ಬಹು ನಿರೀಕ್ಷಿತ ಚಿತ್ರ ಗಂಗೂಬಾಯಿ ಕಾಥಿಯಾವಾಡಿ ಬಿಡುಗಡೆಯಾದ ನಂತರ ಪ್ರಸಿದ್ಧ ಕಾಮಾಟಿಪುರ ತನ್ನದೇ ಆದ ರೀತಿಯಲ್ಲಿ ಹೆಚ್ಚು ಬೆಳಕಿಗೆ ಬರುತ್ತಿದ್ದು, ಇದು ಬಹಳ ವಿಶಿಷ್ಟವಾದ ಇತಿಹಾಸವನ್ನು ಹೊಂದಿದೆ.

ಹಲವು ವರ್ಷಗಳಿಂದಲೂ ಕತ್ತಲಲ್ಲಿದ್ದ ಹಾಗೂ ಕುಖ್ಯಾತ ಹಿನ್ನೆಲೆ ಹೊಂದಿದ್ದ ಈ ಪ್ರದೇಶವು ಕೆಲವು ವರ್ಷಗಳಲ್ಲಿ ವ್ಯಾಪಕವಾಗಿ ಅಭಿವೃದ್ಧಿಕಂಡಿದೆ. ಇಂದು ಗೌರವಯುತ ಜೀವನ ನಡೆಸುತ್ತಿರುವ ಅಲ್ಲಿನ ವಾಸಿಗಳು ಈ ಚಿತ್ರದಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ತಮ್ಮ ಸಾಮಾಜಿಕ ಸ್ಥಿತಿಗೆ ಧಕ್ಕೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಪ್ರದೇಶದ ನಿವಾಸಿಗಳು, ಸಿನಿಮಾ ಪ್ರಸಾರವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.

200 ವರ್ಷಗಳ ಇತಿಹಾಸ: ಕಾಮಟಿಪುರದ ಇತಿಹಾಸ ಕೆದಕಿದರೆ ಸುಮಾರು 200 ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಈ ಹಿಂದೆ ಆಂಧ್ರಪ್ರದೇಶ ಕ್ಷಾಮದಿಂದ ತತ್ತರಿಸಿತ್ತು. ಕ್ಷಾಮದಿಂದ ಬಳಲುತ್ತಿರುವ ಜನರು ಕೆಲಸ ಹುಡುಕಿಕೊಂಡು ಮುಂಬೈಗೆ ಹೋಗಿ ನೆಲೆಸಿದ್ದರು. ಅವರು ಅಂದು ನೆಲಸಿದ್ದ ಪ್ರದೇಶಕ್ಕೆ ಕಾಮಾಟಿಪುರ ಎಂಬ ಹೆಸರು ಹೆಚ್ಚು ಜನಜನಿತವಾಯಿತು. ಇದು ಅಂದು ಅಕ್ಷರಶಃ ಕಷ್ಟಪಟ್ಟು ದುಡಿಯುವ ಜನರ ವಸಾಹತು ಎಂದು ಸಹ ಕರೆಯಲಾಗುತ್ತಿತ್ತು.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕನನ್ನು ರಕ್ಷಿಸಿದ ಪೊಲೀಸ್​ ಸಿಬ್ಬಂದಿ

ನಾವು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದೆವು ಹಾಗೆ ತುಂಬಾ ಶ್ರಮವಹಿಸುವ ಸಮುದಾಯವನ್ನು ಹೊಂದಿದ್ದೇವೆ. ಕಾರ್ಮಿಕರನ್ನು ಕಾಮಾಟಿ ಎಂದು ಕರೆಯಲಾಗುತ್ತಿತ್ತು. ಕಾಮಾಟಿ ಅಂದರೆ ದುಡಿಯುವ ಜನರು ಎಂದರ್ಥ. ಆದ್ದರಿಂದ ಈ ಪ್ರದೇಶವನ್ನು 'ಕಾಮಾಟಿಪುರ' ಎಂದು ಕರೆಯಲಾಯಿತು ಎಂದು ಅಖಿಲ ಪದ್ಮಶಾಲಿ ಸಮಾಜದ ಮುಂಬೈ ಅಧ್ಯಕ್ಷ ಬಾಲನ್ಸಾರಾಯ ಡೊನಾಟುಲಾ ಮಾಹಿತಿ ನೀಡಿದ್ದಾರೆ.

ತೆಲಂಗಾಣದಿಂದ ಈ ಕಾರ್ಮಿಕರು ವಲಸೆ ಬಂದ ಕಾರಣ ಇಲ್ಲಿ ಹೆಚ್ಚು ತೆಲುಗು ಮಾತನಾಡುವವರು ಇದ್ದಾರೆ. ಇನ್ನು ಕೆಲವು ವರ್ಷಗಳಲ್ಲಿ ಜನರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದರೂ, ಆ ಸಮಯದಲ್ಲಿ ಮಾತ್ರ ಈ ಪ್ರದೇಶವು ವೇಶ್ಯಾವಾಟಿಕೆಯ ಸ್ಥಳವಾಗಿತ್ತು. ಈ ಪ್ರದೇಶದಲ್ಲಿನ ಸುಮಾರು 7-8 ಲೇನ್‌ಗಳನ್ನು ವೇಶ್ಯೆಯರೇ ಆಕ್ರಮಿಸಿಕೊಂಡಿದ್ದರು. ಕಾಲಾನಂತರದಲ್ಲಿ ಸಕ್ರಿಯ ವೇಶ್ಯಾವಾಟಿಕೆ ಪ್ರದೇಶವು ಕೆಲವು ಲೇನ್‌ಗಳಿಗೆ ಕುಗ್ಗಿತು ಮತ್ತು ಕಾಮಾಟಿಪುರ ಶೀಘ್ರದಲ್ಲೇ ಸಾಮಾಜಿಕವಾಗಿ ಸ್ವೀಕಾರಾರ್ಹ ಉದ್ಯೋಗಗಳೊಂದಿಗೆ ಜನರಿಂದ ತುಂಬಿತು.

ಮುಂಬೈಗೆ ದೊಡ್ಡ ಕೊಡುಗೆ: ಮುಂಬೈಯನ್ನು ರೂಪಿಸುವಲ್ಲಿ ತೆಲುಗು ಸಮುದಾಯವು ನಿರ್ಣಾಯಕ ಪಾತ್ರ ವಹಿಸಿದೆ ಎಂದು ಡೊನಾಟುಲಾ ಮಾಹಿತಿ ನೀಡಿದ್ದಾರೆ. ಹಿಂದಿನ ವಿಟಿ ಸ್ಟೇಷನ್ ಈಗ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಸ್ಟೇಷನ್ ಆಗಿದೆ. ಅಲ್ಲಿ ಕೆಲಸ ಮಾಡಿದ ಎಲ್ಲ ಕಾರ್ಮಿಕರು ತೆಲುಗು ಮಾತನಾಡುವ ಕಾರ್ಮಿಕರೇ ಆಗಿದ್ದರು. ಅದರ ಪಕ್ಕದಲ್ಲೆ ಮುಂಬೈ ಮಹಾನಗರ ಪಾಲಿಕೆ ಕಟ್ಟಡವಿದೆ. ಇದನ್ನು ತೆಲುಗು ಮಾತನಾಡುವ ಕಾರ್ಮಿಕರೇ ನಿರ್ಮಿಸಿದ್ದಾರೆ. ಮುಂಬೈನ ಶ್ರೀಮಂತ ವಾಸ್ತುಶಿಲ್ಪವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ಇದೆ ಎಂದಿದ್ದಾರೆ.

ಕಾಮಾಟಿಪುರ ಪದ್ಮಶಾಲಿನಗರ ಆಗಲಿದೆ: ಈ ಭಾಗದಲ್ಲಿ ಈ ಹಿಂದೆ ವೇಶ್ಯಾವಾಟಿಕೆ ದಂಧೆ ಇತ್ತು. ಆದರೆ, ಈಗ ಅದು ಬಹುತೇಕ ಮುಗಿದಿದೆ. ಕಾಮಾಟಿಪುರ ಇಂದು ಸಂಪೂರ್ಣ ಬದಲಾಗಿದೆ, ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಶಿಕ್ಷಣದಿಂದ ಜನರು ಪ್ರಗತಿ ಪರರಾಗುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ವಿಜಯ್ ಗೋವಿಂದ ಚೌಕಿ ಹೇಳಿದ್ದಾರೆ.

ಈ ಸಿನಿಮಾ ಇಲ್ಲಿನ ಜನರ ಮಾನ ಹಾಳು ಮಾಡುತ್ತಿದೆ. ಸಿನಿಮಾ ನೋಡಿದ ಮೇಲೆ ಈ ಏರಿಯಾದಲ್ಲಿ ವಾಸ ಮಾಡಲು ಯಾರು ತಾನೆ ಬರುತ್ತಾರೆ. ಮತ್ತೆ ಇಲ್ಲಿ ಅಭಿವೃದ್ಧಿ ಕಾರ್ಯ ನಿಲ್ಲುತ್ತೆ. ನಮ್ಮ ಮಾನ ಮಂಕಾಗುತ್ತೆ. ಈಗ ಕಾಮಾಟಿಪುರ ಹೆಸರನ್ನು ಪದ್ಮಶಾಲಿನಗರ ಎಂದು ಬದಲಾಯಿಸಲು ಹೊರಟಿದ್ದೇವೆ. ತೆಲುಗು ಜನ ಶೀಘ್ರದಲ್ಲೇ ಈ ಬದಲಾವಣೆಯನ್ನು ಸಾಧಿಸುವ ಭರವಸೆ ಇದೆ. ಆದರೆ ಅಲ್ಲಿಯವರೆಗೆ ನಾವು ಈ ಚಲನಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತೇವೆ ಎಂದಿದ್ದಾರೆ.

ಆ ಪ್ರದೇಶದಲ್ಲಿ ಹುಟ್ಟಿ ಬೆಳೆದ 21 ವರ್ಷದ ಕವಿತಾ ಖಕೋಡಿಯಾ ಮಾತನಾಡಿ, ಈ ಚಿತ್ರದಿಂದ ನಮ್ಮ ಕಾಮಾಟಿಪುರ ಹೆಸರು ಹಾಳಾಗುತ್ತಿದೆ. ಗಂಗೂಬಾಯಿ ಇಲ್ಲಿ ನೆಲೆಸಿದ್ದಾರೆ ಎಂಬ ಕಲ್ಪನೆಯೂ ನನ್ನ ಪೀಳಿಗೆಗೆ ಇರಲಿಲ್ಲ. ಅವಳು ವೇಶ್ಯೆಯಾಗಿದ್ದಳು, ಈಗ ಚಿತ್ರದ ಕಾರಣದಿಂದಾಗಿ, ನಾವು ಕೆಲವು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಆದರೆ, ಅವೆಲ್ಲವೂ ವೈಭವಯುತವಾಗಿಲ್ಲ ಅಥವಾ ಸಂಪೂರ್ಣವಾಗಿ ನಿಜವಲ್ಲ. ಈ ಚಲನಚಿತ್ರದ ಮೂಲಕ ತಪ್ಪಾದ ಇತಿಹಾಸವನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.