ಚೆನ್ನೈ: ಮಕ್ಕಳ್ ನೀದಿ ಮೈಯಂ(ಎಂಎನ್ಎಂ) ಪಕ್ಷದ ಮುಖ್ಯಸ್ಥ ಹಾಗೂ ಚಿತ್ರನಟ ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ನಾಮಪತ್ರ ಸಲ್ಲಿಸಿದರು.
-
Tamil Nadu: Makkal Needhi Maiam chief Kamal Haasan files his nomination for Coimbatore South assembly constituency. #TamilNaduElections2021 pic.twitter.com/DdupI37sqz
— ANI (@ANI) March 15, 2021 " class="align-text-top noRightClick twitterSection" data="
">Tamil Nadu: Makkal Needhi Maiam chief Kamal Haasan files his nomination for Coimbatore South assembly constituency. #TamilNaduElections2021 pic.twitter.com/DdupI37sqz
— ANI (@ANI) March 15, 2021Tamil Nadu: Makkal Needhi Maiam chief Kamal Haasan files his nomination for Coimbatore South assembly constituency. #TamilNaduElections2021 pic.twitter.com/DdupI37sqz
— ANI (@ANI) March 15, 2021
ಇದೇ ಮೊದಲ ರಾಜಕೀಯ ಅದೃಷ್ಟ ಪರೀಕ್ಷೆಗೆ ಮುಂದಾಗಿ ಕಣಕ್ಕಿಳಿದಿರುವ ಕಮಲ್ ಹಾಸನ್ ಈಗಾಗಲೇ ಚುನಾವಣಾ ಪ್ರಚಾರ ಕೂಡ ಆರಂಭಿಸಿದ್ದಾರೆ.
ಇದನ್ನೂ ಓದಿ: ಧರ್ಮದಂ ಕೇತ್ರದಿಂದ ನಾಮಪತ್ರ ಸಲ್ಲಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳ ಪೈಕಿ 154 ಕ್ಷೇತ್ರಗಳಲ್ಲಿ ಕಮಲ್ ಹಾಸನ್ ಪಕ್ಷ ಸ್ಪರ್ಧೆ ಮಾಡಲಿದ್ದು, 80 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟು ಕೊಡಲಾಗಿದೆ. ಕಾಂಚೀಪುರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಕಮಲ್ ಹಾಸನ್ ಮೇಲೆ ದಾಳಿ ಸಹ ನಡೆದಿದ್ದು, ಕಾರಿನ ಗಾಜು ಪುಡಿಗೈಯಲಾಗಿದೆ.
ತಮಿಳುನಾಡಿನ 234 ಸ್ಥಾನಗಳಿಗೂ ಒಂದೇ ಹಂತದಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಎಐಎಡಿಎಂಕೆ, ಡಿಎಂಕೆ ಸೇರಿದಂತೆ ಸ್ಥಳೀಯ ಪಕ್ಷಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ.