ಕಡಪಾ(ಆಂಧ್ರಪ್ರದೇಶ): ಆಯಾತಪ್ಪಿ ಆಕಸ್ಮಿಕವಾಗಿ 30 ಅಡಿ ಆಳದ ಬಾವಿಗೆ ಬಿದ್ಧ ವೃದ್ಧೆಯೊಬ್ಬಳನ್ನು ಕಡಪಾ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಆಂಧ್ರಪ್ರದೇಶದ ದುವೂರು ಮಂಡಲದ ಇಂದಿರಾಮ್ಮ ಕಾಲೋನಿಯಲ್ಲಿ ಕೃಷಿ ಉದ್ದೇಶಕ್ಕಾಗಿ 30 ಅಡಿ ಆಳದ ಬಾವಿ ಅಗೆಯಲಾಗಿತ್ತು. ಅದರಲ್ಲಿ 70 ವರ್ಷದ ವೃದ್ಧ ಮಹಿಳೆ ವೆಂಕಟಮ್ಮ ಬಿದ್ದು, ಸಹಾಯಕ್ಕಾಗಿ ಕೂಗಿದ್ದಾರೆ.
ಆಕೆಯ ಕೂಗು ಕೇಳಿರುವ ವ್ಯಕ್ತಿಯೊಬ್ಬರು ಗ್ರಾಮಸ್ಥರ ಗಮನಕ್ಕೆ ತಂದಿದ್ದಾರೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ಸಬ್ ಇನ್ಸ್ಪೆಕ್ಟರ್ ಕುಲಾಯಪ್ಪ ಸಿಬ್ಬಂದಿ ವರ್ಗದೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಹಗ್ಗದ ಸಹಾಯದಿಂದ ಪೊಲೀಸರು ಮಹಿಳೆಯ ಪ್ರಾಣ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಹಲೋ, ಲಾಕ್ಡೌನ್ ಇದೆ, ಎಲ್ಲಿಗೆ ಹೋಗ್ತಿದ್ದೀರಿ, ಜಿಲ್ಲಾಧಿಕಾರಿಯನ್ನೇ ನಿಲ್ಲಿಸಿ ಪ್ರಶ್ನಿಸಿದ ಪೇದೆ!
ಇದಕ್ಕೆ ಗ್ರಾಮಸ್ಥರು ಕೂಡ ಸಹಾಯ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯನ್ನ 108 ಆ್ಯಂಬುಲೆನ್ಸ್ನಲ್ಲಿ ವೈದ್ಯಕೀಯ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.