ಹೈದರಾಬಾದ್: ಪೆಗಾಸಸ್ ಸ್ಪೈವೇರ್ ದೇಶದ ಕೆಲವು ಪ್ರಮುಖ ಪ್ರತಿಪಕ್ಷದ ನಾಯಕರು, ಪತ್ರಕರ್ತರು ಮತ್ತು ಉದ್ಯಮಿಗಳ ಮೇಲೆ ಮಾತ್ರ ಬೇಹುಗಾರಿಕೆ ನಡೆಸುತ್ತಿತ್ತು ಎಂದು ನೀವು ಭಾವಿಸಿದರೆ ಬಹುಷಃ ನಮ್ಮ ಊಹೆ ತಪ್ಪಾಗಬಹುದು. ಏಕೆಂದರೆ ಇದೀಗ ಹೊರಬಿದ್ದಿರುವ ಮಾಹಿತಿಗಳು ಸುಪ್ರೀಂಕೋರ್ಟ್‌ನ ಉನ್ನತ ನ್ಯಾಯಮೂರ್ತಿಗಳು ಮತ್ತು ಹಿರಿಯ ಅಧಿಕಾರಿಗಳೂ ಸಹ ಪೆಗಾಸಸ್ ಬಲೆಯಲ್ಲಿ ಸಿಲುಕಿರುವ ಅನುಮಾನಗಳು ಹುಟ್ಟಿಕೊಂಡಿವೆ.
ಹೌದು.., ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಹಿಂದೊಮ್ಮೆ ಬಳಸಿದ್ದ ಮೊಬೈಲ್ ಸಂಖ್ಯೆ ಹಾಗೂ ಈಗ ನಿವೃತ್ತರಾಗಿರುವ ಸುಪ್ರೀಂಕೋರ್ಟ್ ರಿಜಿಸ್ಟ್ರಿ ಅಧಿಕಾರಿಗಳಾದ ಎನ್ ಕೆ ಗಾಂಧಿ ಮತ್ತು ಟಿಐ ರಜಪೂತ್ ಅವರ ಮೊಬೈಲ್ ಸಂಖ್ಯೆಗಳು ಇಸ್ರೇಲಿ ಸ್ಪೈವೇರ್ನಿಂದ ಟ್ರ್ಯಾಪ್ ಆಗಿರುವ ದೂರವಾಣಿ ಸಂಖ್ಯೆಗಳ ಪಟ್ಟಿಯಲ್ಲಿರುವುದು ತಿಳಿದು ಬಂದಿದೆ.
ಇದನ್ನೂ ಓದಿ: ಗೂಢಚರ್ಯೆ ಬಗ್ಗೆ ಮಾಧ್ಯಮಗಳ ವರದಿ ನಿಜವಾದರೆ ಇದೊಂದು ಗಂಭೀರ ಪ್ರಕರಣ: ಸುಪ್ರೀಂಕೋರ್ಟ್
"2019 ರ ವಸಂತ ಮಾಸದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯ ಇಬ್ಬರು ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ನೂರಾರು ಸಂಖ್ಯೆಗಳನ್ನು ಒಳಗೊಂಡ ರಹಸ್ಯ ಪಟ್ಟಿಯಲ್ಲಿವೆ. ಇದು ಪೆಗಾಸಸ್ ಸ್ಪೈವೇರ್‌ಗಳಿಗೆ ಗುರಿಯಾದ ಸ್ಪಷ್ಟ ಪುರಾವೆಗಳನ್ನು ತೋರಿಸುತ್ತವೆ" ಪೆಗಾಸಸ್ ಸ್ಪೈವೇರ್ ಪ್ರಕರಣವನ್ನು ಬೆಳಕಿಗೆ ತಂದಿರುವ ಪ್ರಮುಖ ನ್ಯೂಸ್ ವೆಬ್ ಪೋರ್ಟಲ್ ವರದಿ ಮಾಡಿದೆ.
ಮತ್ತೊಂದು ಗಂಭೀರ ವಿಚಾರವೆಂದರೆ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿ 1,000 ಕ್ಕಿಂತ ಹೆಚ್ಚು ರಿಟ್ ಅರ್ಜಿಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ವರ್ಷವೇ ಗೂಢಚರ್ಯೆ ನಡೆದಿರುವುದಾಗಿ ಹೇಳಲಾಗಿದೆ.