ETV Bharat / bharat

ಜೋಶಿಮಠದ ಮಾಹಿತಿ ಹಂಚಿಕೆಗೆ ನಿರ್ಬಂಧ: ಗೊಂದಲ ತಪ್ಪಿಸಲು ಕೇಂದ್ರ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ - Restriction on Joshimath information sharing

ದೇಶದ ಭವ್ಯ ಸುಕ್ಷೇತ್ರಗಳಲ್ಲಿ ಒಂದಾದ ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತ ಮುಂದುವರಿದಿದೆ. ಅಲ್ಲಿನ ಜನರ ರಕ್ಷಣೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಅನಗತ್ಯ ಗೊಂದಲ ತಪ್ಪಿಸಲು ಜೋಶಿಮಠದ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಳ್ಳದಂತೆ ಕೇಂದ್ರ ಸರ್ಕಾರ ತನ್ನ ವಿವಿಧ ಇಲಾಖೆ, ಸಂಸ್ಥೆಗಳಿಗೆ ನಿರ್ಬಂಧ ಹೇರಿದೆ.

Restriction on Joshimath information sharing
ಜೋಶಿಮಠದ ಮಾಹಿತಿ ಹಂಚಿಕೆಗೆ ನಿರ್ಬಂಧ
author img

By

Published : Jan 15, 2023, 7:10 AM IST

ನವದೆಹಲಿ: ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಶಕ್ತಿಪೀಠಗಳಲ್ಲಿ ಒಂದಾದ ಜೋಶಿಮಠವು ದಿನದಿನಕ್ಕೆ ಕುಸಿಯುತ್ತಿರುವ ಬಗ್ಗೆ ಅವ್ಯಾಹತ ವರದಿಗಳು ಬಿತ್ತರವಾಗುತ್ತಿವೆ. ಈ ಮೂಲಕ ಜನರಲ್ಲಿ ಅನಗತ್ಯ ಗೊಂದಲ ಉಂಟಾಗುವುದನ್ನು ತಪ್ಪಿಸಲು ಸರ್ಕಾರಿ ಸಂಸ್ಥೆಗಳು ಮಾಧ್ಯಮಗಳಿಗೆ ಮಾಹಿತಿ ನೀಡುವುದಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಜೋಶಿಮಠದ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನು ಮುಂದೆ ಹಂಚಿಕೊಳ್ಳದಂತೆ ತಾಕೀತು ಮಾಡಿದೆ.

ಜೋಶಿಮಠ ಕುಸಿದ ಬಗ್ಗೆ ಇಸ್ರೋ ವರದಿ: ಉತ್ತರಾಖಂಡದ ಜೋಶಿಮಠವು 5.4 ಸೆಂ.ಮೀ ಕುಸಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಉಪಗ್ರಹ ಚಿತ್ರ ಹಂಚಿಕೊಂಡಿತ್ತು. ಈ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಆದೇಶ ಹೊರಬಿದ್ದಿದೆ. ಈ ಬಗ್ಗೆ ಸೂಚನೆ ನೀಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ), ಗುಡ್ಡಗಾಡು ಪಟ್ಟಣವಾದ ಜೋಶಿಮಠದ ಭೂಕುಸಿತದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡದಂತೆ ಸರ್ಕಾರಿ ಸಂಸ್ಥೆಗಳು ಮತ್ತು ಅಧಿಕಾರಿಗಳು, ತಜ್ಞರನ್ನು ನಿರ್ಬಂಧಿಸಿದೆ.

ಜೋಶಿಮಠದ ಕುರಿತಾಗಿ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರ ಮೇಲೆ ತರಹೇವಾರಿ ಚರ್ಚೆಗಳು ನಡೆಯುತ್ತಿವೆ. ಇದು ಮಠ ಮತ್ತು ದೇಶದ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಹೀಗಾಗಿ ಸರ್ಕಾರಿ ಅಧಿಕಾರಿಗಳು, ಸಂಸ್ಥೆಗಳು ಜೋಶಿಮಠದಲ್ಲಾಗುತ್ತಿರುವ ಕುಸಿತದ ಬಗ್ಗೆ ಮಾಧ್ಯಮಗಳೊಂದಿಗೆ ಸಂವಹನ ನಡೆಸಬಾರದು. ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಳ್ಳಬಾರದು ಎಂದು ಹೇಳಿದೆ.

ಇದನ್ನೂ ಓದಿ: ಜೋಶಿಮಠದಲ್ಲಿ ಶಿಥಿಲ ಕಟ್ಟಡ ನೆಲಸಮ ಶುರು:1000 ವರ್ಷಗಳ ಹಿಂದೆಯೂ ಭೂ ಕುಸಿತದ ದುರಂತ ಸಂಭವಿಸಿದ್ದವು

ವಿವಿಧ ಸರ್ಕಾರಿ ಸಂಸ್ಥೆಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜೋಶಿಮಠಕ್ಕೆ ಸಂಬಂಧಿಸಿದಂತೆ ದಾಖಲೆ, ಪರಿಸ್ಥಿತಿಯ ತಮ್ಮದೇ ಆದ ವ್ಯಾಖ್ಯಾನದೊಂದಿಗೆ ಮಾಧ್ಯಮಗಳಿಗೆ ಹೇಳಿಕೆ ನೀಡಲಾಗುತ್ತಿದೆ. ಇದು ಪ್ರಕೃತಿ ವಿಕೋಪಪೀಡಿತ ಜನರಲ್ಲಿ ಭಾರಿ ಆತಂಕ ಉಂಟು ಮಾಡುತ್ತಿದೆ. ಹೀಗಾಗಿ ಮಾಹಿತಿ ವಿನಿಮಯದ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದು, ವಿಷಯ ಹಂಚಿಕೆಗೆ ನಿರ್ಬಂಧ ಹೇರಲಾಗಿದೆ.

ಉಪಗ್ರಹ ಆಧಾರಿತ ಚಿತ್ರ ಡಿಲೀಟ್ ಮಾಡಿದ ಇಸ್ರೋ​: ಇಸ್ರೋದ ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಉಪಗ್ರಹ ಆಧಾರಿತ ಜೋಶಿಮಠದ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಜೋಶಿಮಠ ಕೇವಲ 12 ದಿನಗಳ ಅವಧಿಯಲ್ಲಿ 5.4 ಸೆಂ.ಮೀ ಕುಸಿದಿದೆ ಎಂದು ತನ್ನ ವೆಬ್​ಸೈಟ್​ನಲ್ಲಿ ತೋರಿಸಿತ್ತು. ಇದು ಹೆಚ್ಚು ಆತಂಕ ಮತ್ತು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಇದನ್ನು ತಡೆಯಲು ಕೇಂದ್ರ ಸರ್ಕಾರ ತಕ್ಷಣವೇ ನಿರ್ಧಾರ ಕೈಗೊಂಡ ಬಳಿಕ ವೆಬ್‌ಸೈಟ್‌ನಿಂದ ಈ ಮಾಹಿತಿಯನ್ನು ತೆಗೆದು ಹಾಕಲಾಗಿದೆ.

'ಮಾಹಿತಿ ನಿರಾಕರಿಸಿಲ್ಲ, ಗೊಂದಲ ತಪ್ಪಿಸಲು ಕ್ರಮ': ಕೇಂದ್ರ ಸರ್ಕಾರದ ಈ ನಿರ್ಧಾರ ಮಾಧ್ಯಮಗಳಿಗೆ ಮಾಹಿತಿಯನ್ನು ನಿರಾಕರಿಸುವುದು ಅಲ್ಲ. ಇದರಿಂದ ಜನರಲ್ಲಿ ಉಂಟಾಗುವ ಗೊಂದಲವನ್ನು ತಪ್ಪಿಸುವುದಾಗಿದೆ. ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು ನೀಡಿದ ಮಾಹಿತಿ ಆಧಾರದ ಮೇಲೆ ವಿಧವಿಧದ ವ್ಯಾಖ್ಯಾನ ನೀಡಲಾಗುತ್ತಿದೆ. ಪರಿಸ್ಥಿತಿಯ ಬಗ್ಗೆ ತಮ್ಮದೇ ನಿರ್ಧಾರಕ್ಕೆ ಬರಲಾಗುತ್ತಿದೆ. ಇದನ್ನು ತಡೆದು ಸಂಕಷ್ಟದಲ್ಲಿರುವ ಜನರಿಗೆ ಆತ್ಮಸ್ಥೈರ್ಯ ತುಂಬಬೇಕಿದೆ ಎಂದು ಎನ್‌ಡಿಎಂಎ ಹೇಳಿದೆ.

ಉತ್ತರಾಖಂಡದ ಜೋಶಿಮಠದ ಭೂಕುಸಿತದ ಅಧ್ಯಯನಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಅದರ ವರದಿಯ ಬಳಿಕ ಎಲ್ಲ ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗುವುದು. ಜೋಶಿಮಠದ ಸುತ್ತಲಿನ ಭೂಕುಸಿತ ಉಲ್ಬಣಗೊಂಡಿದೆ. ಅಲ್ಲಿನ ಜನರ ಸುರಕ್ಷತೆಗಾಗಿ ಅಧಿಕಾರಿಗಳು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜನರಿಗೆ ಪರ್ಯಾಯ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ತಜ್ಞರ ತಂಡವನ್ನು ನಿಯೋಜಿಸಿದೆ.

ಇದನ್ನೂ ಓದಿ: ಜೋಶಿಮಠ ಭೂಕುಸಿತ: ಹಳಿ ತಪ್ಪಿದ ಜನಜೀವನ, ಮದುವೆ ಮಾಡಲೂ ಹಿಂದೇಟು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.