ETV Bharat / bharat

ಭಾರತ- ಬಾಂಗ್ಲಾದೇಶದ 'ಸಂಪ್ರೀತಿ' 10ನೇ ಆವೃತ್ತಿಯ ಜಂಟಿ ಸಮರಾಭ್ಯಾಸ ಮುಕ್ತಾಯ - ಉಗ್ರ ದಮನಕ್ಕಾಗಿ ಭಾರತ ಬಾಂಗ್ಲಾ ಜಂಟಿ ಸೇನಾಭ್ಯಾಸ

ಬಾಂಗ್ಲಾದೇಶದ ಜಶೋರ್​ನಲ್ಲಿ 12 ದಿನಗಳಿಂದ ನಡೆಯುತ್ತಿದ್ದ ಸಂಪ್ರೀತಿ ಸಮರಾಭ್ಯಾಸ ಇಂದು ಕೊನೆಗೊಂಡಿದೆ. ಭಯೋತ್ಪಾದನೆ ನಿಗ್ರಹ ಮತ್ತು ವಿಪತ್ತು ಕಾರ್ಯಾಚರಣೆಗಳ ಭಾಗವಾಗಿ ಈ ಸಮರಾಭ್ಯಾಸ ಆಯೋಜಿಸಲಾಗಿತ್ತು.

ಭಾರತ- ಬಾಂಗ್ಲಾದೇಶದ ಸಂಪ್ರೀತಿ 10ನೇ ಆವೃತ್ತಿಯ ಜಂಟಿ ಸಮರಾಭ್ಯಾಸ ಮುಕ್ತಾಯ

author img

By

Published : Jun 16, 2022, 7:17 PM IST

ನವದೆಹಲಿ: ಭಯೋತ್ಪಾದನೆ ನಿಗ್ರಹ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳ ಭಾಗವಾಗಿ ಭಾರತೀಯ ಸೇನೆ ಮತ್ತು ಬಾಂಗ್ಲಾದೇಶ ಸೇನೆಯ ನಡುವಿನ ಜಂಟಿ ಮಿಲಿಟರಿ ಅಭ್ಯಾಸದ 10ನೇ ಆವೃತ್ತಿಯು ಬಾಂಗ್ಲಾದೇಶದ ಜಶೋರ್‌ನಲ್ಲಿ ಇಂದು ಮುಕ್ತಾಯಗೊಂಡಿತು.

ಭಾರತ- ಬಾಂಗ್ಲಾದೇಶದ ಸಂಪ್ರೀತಿ 10ನೇ ಆವೃತ್ತಿಯ ಜಂಟಿ ಸಮರಾಭ್ಯಾಸ ಮುಕ್ತಾಯ

ಜೂನ್​ 5 ರಿಂದ 16 ರವರೆಗೆ ನಡೆದ ಸಂಪ್ರೀತಿ ಸಮರಾಭ್ಯಾಸ ಕೊನೆಗೊಂಡಿದ್ದು, 12 ದಿನಗಳ ಕಾಲ ನಡೆದ ಈ ಜಂಟಿ ಅಭ್ಯಾಸವು ಎರಡೂ ಸೇನೆಗಳ ನಡುವೆ ಯಾವುದೇ ಕಾರ್ಯಾಚರಣೆಯಲ್ಲಿ ಭಾಗಿಯಾಗುವಾಗ ನೀಡುವ ಸಹಕಾರ ಮತ್ತು ತಂತ್ರಗಳನ್ನು ಇದು ಹೆಚ್ಚಿಸಿದೆ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ.

ಈ ಹಿಂದೆ ಅಂದರೆ 2020ರಲ್ಲಿ ಎರಡೂ ದೇಶಗಳ ಸೇನಾಪಡೆಗಳ ಸಮರಾಭ್ಯಾಸವಾದ ಸಂಪ್ರೀತಿ 9 ಆವೃತ್ತಿಯನ್ನು ಮೇಘಾಲಯದಲ್ಲಿ ನಡೆಸಲಾಗಿತ್ತು.

ಏನಿದು ಸಂಪ್ರೀತಿ ಸಮರಾಭ್ಯಾಸ?: ಸಂಪ್ರೀತಿ ಹೆಸರಿನಲ್ಲಿ ನಡೆಯುವ ಸೇನಾಭ್ಯಾಸವು ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಒಳಗೊಂಡಿದೆ. ಮೊದಲ ಬಾರಿಗೆ 2009 ರಲ್ಲಿ ಜಂಟಿ ಸೇನಾಭ್ಯಾಸವನ್ನು ನಡೆಸಲಾಯಿತು. ಇದನ್ನು ಪ್ರತಿ ವರ್ಷ ಅಥವಾ 2 ವರ್ಷಕ್ಕೊಮ್ಮೆ ಉಭಯ ರಾಷ್ಟ್ರಗಳಲ್ಲಿ ಆಯೋಜಿಸಲಾಗುತ್ತದೆ.

1971ರಲ್ಲಿ ನಡೆದ ಬಾಂಗ್ಲಾದೇಶಕ್ಕಾಗಿ ನಡೆದ ಯುದ್ಧ ವಿಜಯದ ಸಂಭ್ರಮ ಮತ್ತು ಬಾಂಗ್ಲಾ ವಿಮೋಚನಾ ದಿನಾಚರಣೆಯ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ 2021 ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಾಂಗ್ಲಾದೇಶ ಸೇನೆ ಭಾರತದ ಸೇನೆಯ ಜೊತೆಗೆ ಪರೇಡ್​ನಲ್ಲಿ ಭಾಗವಹಿಸಿತ್ತು.

ಇದನ್ನೂ ಓದಿ: ಅಗ್ನಿಪಥ್ ಯೋಜನೆ ಕುರಿತು ಸ್ಪಷ್ಟೀಕರಣ: ಯುವಕರಿಗೆ ಅನ್ಯಾಯವಾಗಲ್ಲ ಎಂದ ಕೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.