ಜೋಧ್ಪುರ(ರಾಜಸ್ತಾನ): ದೇಶದಲ್ಲಿ 7 ಕೋಟಿಗೂ ಹೆಚ್ಚು ಮಧುಮೇಹಿಗಳಿದ್ದಾರೆ. ಇದಲ್ಲದೇ, ಭಾರತ ಮಧುಮೇಹದ ರಾಜಧಾನಿ ಎಂಬ ಕುಖ್ಯಾತಿ ಪಡೆದಿದೆ. ಈ ರೋಗಕ್ಕೆ ತುತ್ತಾದವರು ಅವರ ಆಹಾರ ಮತ್ತು ದಿನಚರಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಕ್ಕರೆಯ ಮಟ್ಟವು ಎಷ್ಟಿದೆ ಎಂಬ ಬಗ್ಗೆ ಆಗಾಗ್ಗೆ ಮೇಲ್ವಿಚಾರಣೆ ಮಾಡಿಕೊಳ್ಳುತ್ತಿರಬೇಕು.
ಪ್ರತಿ ಬಾರಿ ವೈದ್ಯರ ಬಳಿಗೆ ಹೋಗಿ ತಪಾಸಿಸಿದರೆ ವೆಚ್ಚ ವಿಪರೀತ. ಇದಕ್ಕೆ ಪರಿಹಾರವಾಗಿ ಜೋಧ್‌ಪುರದ ಎಂಬಿಎಂ ವಿಶ್ವವಿದ್ಯಾನಿಲಯದ ಎಂಜಿನಿಯರ್ ವಿದ್ಯಾರ್ಥಿಗಳಿಬ್ಬರು ಕಡಿಮೆ ದರದ, ನಿಖರ ಮಾಹಿತಿ ನೀಡುವ ಸಾಧನವನ್ನು ಕಂಡು ಹಿಡಿದಿದ್ದಾರೆ. ಇದು 24 ಗಂಟೆಯೂ ಮಧುಮೇಹಿಗಳ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ.
ಪ್ರಯಾಗರಾಜ್‌ನ ಸೌರಭ್ ಪಾಂಡೆ ಮತ್ತು ನಾಗೌರ್‌ನ ಯೋಗೇಶ್ ಚೌಧರಿ ಜೋಧಪುರದ ಎಂಬಿಎಂ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ಶಿಕ್ಷಣ ಪಡೆದ ಇವರೇ ಮಧುಮೇಹವನ್ನು ಮಾನಿಟರ್ ಮಾಡುವ ಸಾಧನವನ್ನು ಕಂಡು ಹಿಡಿದವರು. ಇದಕ್ಕೆ DietOSure Device ಎಂದು ಹೆಸರಿಸಿದ್ದಾರೆ. ಇದನ್ನು ರೋಗಿಯ ಕೈಯಲ್ಲಿ ಧರಿಸಿ ಸಕ್ಕರೆ ಮಟ್ಟವನ್ನು ಪತ್ತೆ ಮಾಡಬಹುದಾಗಿದೆ.
ಸಾಧನ ಹೇಗೆ ಕೆಲಸ ಮಾಡುತ್ತೆ?
CGMS (ಕಂಟಿನಿವ್ ಗ್ಲೂಕೋಸ್ ಮಾನಿಟರಿಂಗ್ ಸಿಸ್ಟಮ್) ಸಂವೇದಕ ಆಧಾರಿತವಾಗಿ ಈ ಸಾಧನವನ್ನು ವಿನ್ಯಾಸ ಮಾಡಲಾಗಿದೆ. ಇದನ್ನು ರೋಗಿಯ ಕೈಯಲ್ಲಿ ಇರಿಸಲಾಗುತ್ತದೆ. ಇದರಲ್ಲಿ ಚಿಪ್ ಅಳವಡಿಸಲಾಗಿದ್ದು, ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಖರವಾಗಿ ಮಾನಿಟರ್ ಮಾಡಿ ಡೇಟಾವನ್ನು ಸಂಗ್ರಹಿಸುತ್ತದೆ. ಸಾಧನದಲ್ಲಿನ ಚಿಪ್ ಅನ್ನು ಮೊಬೈಲ್ ಮೂಲಕ ನಿಯಂತ್ರಿಸಬಹುದು. ಸಕ್ಕರೆ ಮಟ್ಟವನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ನೋಡಬಹುದಾಗಿದೆ.
ಡಯಾಬಿಟಿಸ್ ಪ್ರತಿಯೊಂದು ಮನೆಯ ಸಮಸ್ಯೆಯಾಗಿದೆ. ಆಹಾರ ಸೇವನೆ ವೇಳೆ ಯಾವ ವಿಧದ ಆಹಾರದಿಂದ ಎಷ್ಟು ಪ್ರಮಾಣದ ಸಕ್ಕರೆ ಮಟ್ಟ ಹೆಚ್ಚಿದೆ ಎಂಬುದನ್ನು ಈ ಸಾಧನ ನಿಖರವಾಗಿ ತಿಳಿಯಬಹುದು. ಇದರಿಂದ ರೋಗಿಯು ಯಾವ ಆಹಾರವನ್ನು ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬಹುದು ಎಂದು ಹೇಳುತ್ತಾರೆ ಸಾಧನ ತಯಾರಕ ಸೌರಭ್.
ಇನ್ನೋವೇಶನ್ ಟಾಪ್ 7 ಸ್ಟಾರ್ಟಪ್‌ಗಳಲ್ಲಿ ಸ್ಥಾನ
ಇನ್ನು ಈ ಸಕ್ಕರೆ ಮಟ್ಟ ಪತ್ತೆ ಹಚ್ಚುವ ಸಾಧನ ಕೇಂದ್ರ ಸರ್ಕಾರದ ಮೆಡ್‌ಟೆಕ್ ಉದ್ಯಮಶೀಲತಾ ಕಾರ್ಯಕ್ರಮದ ಅಡಿ ಟಾಪ್ 7 ಸ್ಟಾರ್ಟಪ್‌ಗಳಲ್ಲಿ ಸ್ಥಾನ ಪಡೆದಿದೆ. ಇಬ್ಬರೂ ಯುವಕರು ತಮ್ಮ ವೆಬ್‌ಸೈಟ್ ಮೂಲಕ ಅನೇಕ ಜನರಿಗೆ ಇದರ ಸೇವೆಯನ್ನು ನೀಡುತ್ತಿದ್ದಾರೆ. ಇಬ್ಬರೂ ನೂರಕ್ಕೂ ಹೆಚ್ಚು ಜನರ ಮೇಲೆ 14 ದಿನಗಳ ಪ್ರಯೋಗವನ್ನು ಮಾಡಿದ್ದಾರೆ. ಇದೀಗ ಈ ಉತ್ಪನ್ನವನ್ನು ದೇಶಾದ್ಯಂತ ಮಾರುಕಟ್ಟೆಗಳಲ್ಲಿ ತರಲು ಯೋಜಿಸಿದ್ದಾರೆ.
ಇದನ್ನೂ ಓದಿ: ತುಂಡು ಭೂಮಿಗಾಗಿ ಗಲಾಟೆ: ಮಹಿಳಾ ಸಾಫ್ಟ್ವೇರ್ ಉದ್ಯೋಗಿ ಬರ್ಬರ ಹತ್ಯೆ!`