ETV Bharat / bharat

23 ವರ್ಷದ ಸಂಗಾತಿಗೆ ಕ್ಯಾಬ್‌ನಲ್ಲಿ ಹಲವು ಬಾರಿ ಇರಿದ ಪ್ರೇಮಿ.. ಮಹಿಳೆ ಸ್ಥಿತಿ ಗಂಭೀರ

author img

By ETV Bharat Karnataka Team

Published : Oct 13, 2023, 7:58 AM IST

ನನ್ನ ಮಗಳು ಸಂದರ್ಶನಕ್ಕೆ ಹೋಗುತ್ತಿದ್ದಾಗ ಕ್ಯಾಬ್‌ನಲ್ಲಿ ವ್ಯಕ್ತಿಯೊಬ್ಬರು ಚಾಕುವಿನಿಂದ ಇರಿದಿದ್ದಾರೆ. ಆಕೆಯ ತಲೆಗೆ ಹಲವು ಬಾರಿ ಪೆಟ್ಟು ಬಿದ್ದಿದೆ ಮತ್ತು ಆಕೆಯ ಸ್ಥಿತಿ ಗಂಭೀರವಾಗಿದೆ. ನನ್ನ ಮಗಳಿಗೆ ನ್ಯಾಯ ಸಿಗಬೇಕು ಎಂದು ಚಾಕು ಇರಿತಕ್ಕೆ ಒಳಗಾಗಿರುವ ತಾಯಿ ಒತ್ತಾಯಿಸಿದ್ದಾರೆ.

Etv Bharat23 ವರ್ಷದ ಸಂಗಾತಿಗೆ ಕ್ಯಾಬ್‌ನಲ್ಲಿ ಹಲವು ಬಾರಿ ಇರಿದ ಪ್ರೇಮಿ
Etv Bhara23 ವರ್ಷದ ಸಂಗಾತಿಗೆ ಕ್ಯಾಬ್‌ನಲ್ಲಿ ಹಲವು ಬಾರಿ ಇರಿದ ಪ್ರೇಮಿt

ನವದೆಹಲಿ: ನೈಋತ್ಯ ದೆಹಲಿಯಲ್ಲಿ ಮಹಿಳೆಯೊಬ್ಬಳು ದಿನಗಟ್ಟಲೆ ಕಡೆಗಣಿಸಿದ್ದರಿಂದ ಕೋಪಗೊಂಡ 27 ವರ್ಷದ ಪ್ರೇಮಿಯೊಬ್ಬ ತನ್ನ ಸಂಗಾತಿಗೆ ಹಲವು ಬಾರಿ ಇರಿದಿದ್ದಾನೆ. ಇದರಿಂದ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಏನಿದು ಘಟನೆ- ಪೊಲೀಸರು ಹೇಳಿದ್ದೇನು?: "ಗುರುವಾರ 6.20 ಕ್ಕೆ ಘಟನೆಯ ಬಗ್ಗೆ ಲಾಡೋ ಸರೈ ಫಿರ್ನಿ ರಸ್ತೆಯಿಂದ ಪಿಸಿಆರ್ ಕರೆ ಬಂದಿತ್ತು. ಈ ಕರೆ ಸ್ವೀಕರಿಸಿದಾಗ ಇಂತಹದೊಂದು ಘಟನೆ ನಡೆದಿರುವುದರ ಬಗ್ಗೆ ಮಾಹಿತಿ ಗೊತ್ತಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಹೇಳಿಕೆ ಪ್ರಕಾರ, 23 ವರ್ಷದ ಮಹಿಳೆಯನ್ನು ಸಾಕೇತ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಗಾಜಿಯಾಬಾದ್ ನಿವಾಸಿ ಗೌರವ್ ಪಾಲ್ ಎಂಬಾತ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಕ್ಯಾಬ್​ನಲ್ಲಿ ಈ ಘಟನೆ ನಡೆದಿದ್ದರಿಂದ ಕೃತ್ಯ ನೋಡಿ ಕ್ಯಾಬ್​ ಡ್ರೈವರ್ , ಅಲ್ಲಿನ ಸ್ಥಳೀಯರ ನೆರವು ಪಡೆದು ಆತನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಬಗ್ಗೆ ಸಂತ್ರಸ್ತೆಯ ತಾಯಿ ಹೇಳುವುದಿಷ್ಟು: ಈ ಕೃತ್ಯದ ವಿಡಿಯೋ ಪೊಲೀಸರಿಗೆ ಲಭ್ಯವಾಗಿದ್ದು, ವಿಡಿಯೋದಲ್ಲಿ ಮಹಿಳೆ ಮೇಲೆ ವ್ಯಕ್ತಿ ಚೂರಿ ಇರಿದಿದ್ದು, ಮಹಿಳೆ ದೇಹದ ಮೇಲ್ಬಾಗದಲ್ಲಿ ರಕ್ತಸಿಕ್ತವಾಗಿರುವುದು ಕಂಡು ಬರುತ್ತದೆ. ಇನ್ನು ಈ ಬಗ್ಗೆ ಮಾತನಾಡಿರುವ ಸಂತ್ರಸ್ತೆ ತಾಯಿ, ಮಗಳ ಸ್ಥಿತಿ ಚಿಂತಾಜನಕವಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರನ್ನು ಒತ್ತಾಯಿಸಿದ್ದಾರೆ.

"ನನ್ನ ಮಗಳು ಸಂದರ್ಶನಕ್ಕೆ ಹೋಗುತ್ತಿದ್ದಾಗ ಕ್ಯಾಬ್‌ನಲ್ಲಿ ವ್ಯಕ್ತಿಯೊಬ್ಬರು ಚಾಕುವಿನಿಂದ ಇರಿದಿದ್ದಾರೆ. ಆಕೆಯ ತಲೆಗೆ ಹಲವು ಬಾರಿ ಪೆಟ್ಟು ಬಿದ್ದಿದೆ ಮತ್ತು ಆಕೆಯ ಸ್ಥಿತಿ ಗಂಭೀರವಾಗಿದೆ. ನನ್ನ ಮಗಳಿಗೆ ನ್ಯಾಯ ಸಿಗಬೇಕು. ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚಾಕು ಇರಿತಕ್ಕೆ ಒಳಗಾಗಿರುವ ತಾಯಿಯ ಆಗ್ರಹಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು: ಇನ್ನು ಚೂರಿ ಇರಿತಕ್ಕೆ ಒಳಗಾದ 23 ವರ್ಷದ ಮಹಿಳೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಈಗಾಗಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೊಲೆ ಯತ್ನ ಮಾಡಿರುವ ಹಿಂದಿನ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಇನ್ನೂಈ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ. (ANI)

ಇದನ್ನು ಓದಿ: ಬೆಂಗಳೂರು: ಹಿಂದಿನಿಂದ ಕಾರಿಗೆ ಡಿಕ್ಕಿ ಹೊಡೆದು ಹಣ ಸುಲಿಗೆ‌, ನಾಲ್ವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.