ETV Bharat / bharat

ಜಾರ್ಖಂಡ್​ನಲ್ಲೊಬ್ಬ ಮಹಾತಾಯಿ: ಏಕಕಾಲಕ್ಕೆ ಐದು ಹೆಣ್ಣು ಶಿಶುಗಳಿಗೆ ಜನ್ಮ! - mother gave life of five babys

ಜಾರ್ಖಂಡ್‌ನ ರಾಂಚಿಯ ರಿಮ್ಸ್​ ಆಸ್ಪತ್ರೆಯಲ್ಲಿ ಮಹಿಳೆಗೆ ಐದು ಹೆಣ್ಣು ಶಿಶುಗಳು ಜನಿಸಿವೆ.

ಜಾರ್ಖಂಡ್​ನಲ್ಲೊಬ್ಬ ಮಹಾತಾಯಿ
ಜಾರ್ಖಂಡ್​ನಲ್ಲೊಬ್ಬ ಮಹಾತಾಯಿ
author img

By

Published : May 23, 2023, 11:12 AM IST

ರಾಂಚಿ (ಜಾರ್ಖಂಡ್): ಒತ್ತಡ, ಆಹಾರ ಅಸಮತೋಲನ, ಹೊಂದಾಣಿಕೆಯ ಕೊರತೆ ಸೇರಿ ನಾನಾ ಕಾರಣಕ್ಕಾಗಿ ಮಕ್ಕಳಾಗುತ್ತಿಲ್ಲ ಎಂಬ ಕೊರಗು ಹಲವು ದಂಪತಿಗಳನ್ನು ಕಾಡುತ್ತಿದೆ. ಆದ್ರೆ, ಇಲ್ಲೊಬ್ಬ ಮಹಾತಾಯಿ ಏಕಕಾಲಕ್ಕೆ ಐದು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಅಚ್ಚರಿ ಅಂದ್ರೆ 7 ತಿಂಗಳಲ್ಲಿಯೇ ಮಕ್ಕಳು ಜನ್ಮ ತಾಳಿವೆ. ನವಜಾತ ಶಿಶುಗಳು ಕಡಿಮೆ ತೂಕ ಹೊಂದಿರುವ ಕಾರಣ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಜಾರ್ಖಂಡ್‌ನ ರಿಮ್ಸ್‌ ಆಸ್ಪತ್ರೆ ಈ ಸಂತೋಷದ ಗಳಿಗೆಗೆ ಸಾಕ್ಷಿಯಾಗಿದೆ. ಚತ್ರಾ ಜಿಲ್ಲೆಯ ಇತ್ಖೋರಿ ನಿವಾಸಿಯಾದ ಮಹಿಳೆ ಗರ್ಭಿಣಿಯಾದ ಏಳು ತಿಂಗಳೊಳಗೆ ಎಲ್ಲ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು ಸಂಬಂಧಿಕರಲ್ಲಿ ಆಶ್ಚರ್ಯ ತಂದರೆ, ರಿಮ್ಸ್​ ಆಸ್ಪತ್ರೆಯಲ್ಲಿ ಇದು ದೊಡ್ಡ ಚರ್ಚಾ ವಿಷಯವಾಗಿದೆ.

ಮಕ್ಕಳಾಗದ ಕೊರಗಲ್ಲಿ ಉಕ್ಕಿದ ಸಂತೋಷ: ಮಹಿಳೆಗೆ ವಿವಾಹದ ಬಳಿಕ ಹಲವು ವರ್ಷ ಮಕ್ಕಳಾಗದ ಕಾರಣ ಕುಟುಂಬಸ್ಥರು ಚಿಂತಿತರಾಗಿದ್ದರು. ಮಹಿಳೆ ಕೆಲವು ದೈಹಿಕ ನ್ಯೂನತೆಗಳಿಂದ ಬಳಲುತ್ತಿದ್ದರು. ಇದರಿಂದ ಗರ್ಭ ಧರಿಸಲು ತೊಂದರೆಯಾಗಿತ್ತು. ಇದಕ್ಕಾಗಿ ಆಕೆ ನಿರಂತರ ಚಿಕಿತ್ಸೆ ಪಡೆಯುತ್ತಿದ್ದರು. ಇದಾದ ಬಳಿಕ ಆಕೆಗೆ ಸೆರಗು ನಿಂತಿತ್ತು. ಗರ್ಭಿಣಿಯಾಗಿ 7 ತಿಂಗಳಾಗಿದ್ದು, ಸೋಮವಾರದಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಕುಟುಂಬಸ್ಥರು ಆಕೆಯನ್ನು ರಿಮ್ಸ್​ ಆಸ್ಪತ್ರೆಗೆ ಕರೆ ತಂದಿದ್ದರು.

ರಿಮ್ಸ್‌ ಆಸ್ಪತ್ರೆಯ ಡಾ.ಶಶಿಬಾಲಾ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಸಾಮಾನ್ಯ ಹೆರಿಗೆಯಾಗಿ ಐದು ಮಕ್ಕಳು ಜನಿಸಿದ್ದಾರೆ. ಇದು ಆಸ್ಪತ್ರೆಯ ವೈದ್ಯರು ಮತ್ತು ಕುಟುಂಬಸ್ಥರಿಗೆ ಅಚ್ಚರಿಯ ಜೊತೆಗೆ ಸಂತೋಷ ತಂದಿದೆ. ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಐದು ಮಕ್ಕಳು ಏಕಕಾಲದಲ್ಲಿ ಜನಿಸಿದ್ದರೆ, ಅಷ್ಟು ಮಕ್ಕಳ ಪಡೆದ ಕುಟುಂಬದ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ವೈದ್ಯರ ಪ್ರಕಾರ, ತಾಯಿಯ ಸ್ಥಿತಿ ಸಾಮಾನ್ಯವಾಗಿದೆ. ಆದರೆ, ಮಕ್ಕಳು ಸಾಮಾನ್ಯಕ್ಕಿಂತ ತುಸು ಕಡಿಮೆ ಗಾತ್ರ ಹೊಂದಿದ್ದು, ಪ್ರಸ್ತುತ ವೈದ್ಯರ ಮೇಲ್ವಿಚಾರಣೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

ಜಾರ್ಖಂಡ್​ನ ರಿಮ್ಸ್​ನಲ್ಲಿ ತಾಯಿಯೊಬ್ಬರು ಏಕಕಾಲಕ್ಕೆ ಐದು ಮಕ್ಕಳಿಗೆ ಜನ್ಮ ನೀಡಿರುವುದು ಇದೇ ಮೊದಲು ಎಂದು ಆಡಳಿತ ಮಂಡಳಿ ಹೇಳಿದರೆ, ಜಾರ್ಖಂಡ್​ನಲ್ಲಿಯೇ ತಾಯಿಯೊಬ್ಬರು ಇಷ್ಟು ಶಿಶುಗಳಿಗೆ ಜನ್ಮ ನೀಡಿದ್ದು, ಇದೇ ಮೊದಲಾಗಿದೆ. ನೆರೆಯ ಬಿಹಾರದಲ್ಲಿ ಮಹಿಳೆಯೊಬ್ಬರು ಏಕಕಾಲದಲ್ಲಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನದಲ್ಲಿ ಜನಿಸಿದ್ದ ಐದು ಮಕ್ಕಳು: ರಾಜಸ್ಥಾನದ ಕರೌಲಿಯಲ್ಲಿ ಕಳೆದ ವರ್ಷ ಮದುವೆಯಾಗಿ 7 ವರ್ಷದ ಬಳಿಕ ಮಹಿಳೆ ಐದು ಮಕ್ಕಳಿಗೆ ಜನ್ಮ ನೀಡಿದ್ದರು. ದುರಾದೃಷ್ಟವಶಾತ್​ ಇದರಲ್ಲಿ ಮೂರು ನವಜಾತ ಶಿಶುಗಳು ಸಾವನ್ನಪ್ಪಿದ್ದವು. ಇಬ್ಬರು ಮಕ್ಕಳು ಹಾಗೂ ತಾಯಿಗೆ ಜೈಪುರ್ ಮಕ್ಕಳ ಘಟಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಉಳಿದ ಎರಡು ಮಕ್ಕಳ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ಹೇಳಲಾಗಿತ್ತು. ಕಳೆದ ಏಳು ವರ್ಷದಿಂದ ಮಕ್ಕಳು ಇಲ್ಲ ಎಂದು ಕೊರಗುತ್ತಿದ್ದ ಮಹಿಳೆಯ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, ಅದಾಗಲೇ ಮೂವರು ಮಕ್ಕಳು ಸಾವನ್ನಪ್ಪಿದ್ದು ದುಖಃ ತಂದಿತ್ತು.

ಇದನ್ನೂ ಓದಿ: ಅಬ್ಬಾಬ್ಬಾ..! ಶಿವಮೊಗ್ಗದಲ್ಲಿ ಬರೋಬ್ಬರಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.