ಗುಮ್ಲ( ಜಾರ್ಖಂಡ್): ನವೆಂಬರ್ 16 ರಂದು ಜಾರ್ಖಂಡ್‌ನ ರೈದಿಹ್‌ನಲ್ಲಿ ಮೂವರು ಯುವಕರು ನಾಪತ್ತೆಯಾಗಿದ್ದು, ಅವರ ಮೃತದೇಹಗಳು ಪತ್ತೆಯಾಗದ ಹಿನ್ನೆಲೆ ಮೃತ ಸುಮಿತ್ ಭಗತ್ ಅವರ ಕುಟುಂಬ ಸದಸ್ಯರು ಮಗನ ರೀತಿಯ ಗೊಂಬೆ ನಿರ್ಮಿಸಿ ಅದರ ಅಂತ್ಯಕ್ರಿಯೆ ನಡೆಸಿದ್ದಾರೆ.
ಮಗನ ಶವ ಸಿಗದ ಕಾರಣ ಮಗ ಸುಮಿತ್ ನಂತೆಯೇ ಒಂದು ಗೊಂಬೆ ನಿರ್ಮಿಸಿ ಅದಕ್ಕೆ ಅಂತಿಮ ವಿಧಿವಿಧಾನಗಳನ್ನು ಮಾಡಿದ್ದಾರೆ.
ಗುಮ್ಲ ಪಟ್ಟಣದ ಆರು ಯುವಕರ ಗುಂಪು ಪಿಕ್ನಿಕ್ಗೆಂದು ರೈದಿಹ್ ಬ್ಲಾಕ್ ಪ್ರದೇಶದ ಪ್ರವಾಸಿ ತಾಣವಾದ ಹಿರಾಡಾಕ್ಕೆ ಹೋಗಿತ್ತು. ಈ ಸಮಯದಲ್ಲಿ, ಎಲ್ಲ ಸ್ನೇಹಿತರು ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದು, ಸ್ವಲ್ಪ ಸಮಯದ ನಂತರ, ಅವರಲ್ಲಿ ಒಬ್ಬ ನದಿ ನೀರಿನ ಸುಳಿಗೆ ಸಿಲುಕಿ ಮುಳುಗಲು ಪ್ರಾರಂಭಿಸಿದ ಅವನನ್ನು ಕಾಪಾಡಲು ಹೋದ ಮತ್ತಿಬ್ಬರು ಸಹ ನೀರಿನಲ್ಲಿ ತೇಲಿ ಹೋದರು.
ಅಭಿಷೇಕ್ ಗುಪ್ತಾ, ಸುನಿಲ್ ಭಗತ್ ಮತ್ತು ಸುಮಿತ್ ಗಿರಿ ನದಿಯಲ್ಲಿ ಕೊಚ್ಚಿ ಹೋದವರು ಎಂದು ಗುರುತಿಸಲಾಗಿದೆ. ಇವರಲ್ಲಿ ಅಭಿಷೇಕ್ ಗುಪ್ತಾ ಶವವನ್ನು ಸ್ಥಳೀಯ ಮೀನುಗಾರರು ಮೇಲೆತ್ತಿದ್ದಾರೆ, ಇದುವರೆಗೂ ಎಷ್ಟೇ ಶೋಧ ನಡೆಸಿದರೂ ಸುಮಿತ್ ಗಿರಿ ಮತ್ತು ಸುನಿಲ್ ಭಗತ್ ಮೃತದೇಹಗಳು ಸಿಕ್ಕಿಲ್ಲ. ಎನ್‌ಡಿಆರ್‌ಎಫ್ ತಂಡವು ಸತತ 3 ದಿನಗಳ ಕಾಲ ಶವಗಳ ಹುಡುಕಾಟ ನಡೆಸಿದ್ರೂ ಆ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿಲ್ಲ.