ETV Bharat / bharat

ಜೆಇಇ ಫಲಿತಾಂಶ: 20 ಅಭ್ಯರ್ಥಿಗಳಿಗೆ 100ಕ್ಕೆ 100, ಟಾಪರ್‌ ಪಟ್ಟಿಯಲ್ಲಿಲ್ಲ ಹೆಣ್ಣು ಮಕ್ಕಳು!

ಜನವರಿಯಲ್ಲಿ ನಡೆದ ಮೊದಲ ಆವೃತ್ತಿಯ ಜೆಇಇ ಮೇನ್ಸ್ ಫಲಿತಾಂಶದಲ್ಲಿ 20 ವಿದ್ಯಾರ್ಥಿಗಳು 100 ಅಂಕಗಳನ್ನು ಪಡೆದಿದ್ದಾರೆ. ಎಲ್ಲ ಟಾಪರ್​ಗಳು ಕೂಡ ಪುರುಷ ವಿದ್ಯಾರ್ಥಿಗಳೇ ಅನ್ನೋದು ವಿಶೇಷ.

jee-main-january-edition-20-candidates-score-perfect-100
ಜೆಇಇ ಫಲಿತಾಂಶ: 20 ಪುರುಷ ವಿದ್ಯಾರ್ಥಿಗಳಿಗೆ ಟಾಪರ್​ ಪಟ್ಟ!
author img

By

Published : Feb 7, 2023, 5:34 PM IST

Updated : Feb 7, 2023, 5:48 PM IST

ನವದೆಹಲಿ/ಕೋಟಾ (ರಾಜಸ್ಥಾನ): ಭಾರತ ತಂತ್ರಜ್ಞಾನ ಸಂಸ್ಥೆ (ಐಐಟಿ)ಗೆ ಪ್ರವೇಶ ಪಡೆಯುವ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ಸ್​ ಫಲಿತಾಂಶ ಇಂದು ಪ್ರಕಟವಾಗಿದೆ. ಅತ್ಯಂತ ಕಠಿಣ ಎಂದೇ ಪರಿಗಣಿಸಲಾದ ಪರೀಕ್ಷೆಯಲ್ಲಿ 20 ಮಂದಿ 100ಕ್ಕೆ 100 ಅಂಕ ಪಡೆದಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಶೇ.100ರಷ್ಟು ಅಂಕ ಪಡೆದ ಎಲ್ಲರೂ ಕೂಡ ಪುರುಷ ಅಭ್ಯರ್ಥಿಗಳೇ ಆಗಿದ್ದಾರೆ. 20 ಟಾಪರ್​ಗಳಲ್ಲಿ 14 ಮಂದಿ ಸಾಮಾನ್ಯ, ನಾಲ್ವರು ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್​) ಮತ್ತು ಪರಿಶಿಷ್ಟ ಜಾತಿ ಕೋಟಾದಲ್ಲಿ ತಲಾ ಒಬ್ಬರು ಉತ್ತೀರ್ಣರಾಗಿದ್ದಾರೆ. 50 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ಜನವರಿಯಲ್ಲಿ ನಡೆದ ಮೊದಲ ಆವೃತ್ತಿಯ ಜೆಇಇ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬಿಡುಗಡೆ ಮಾಡಿದೆ. ಈ ಪರೀಕ್ಷೆಯನ್ನು ದಾಖಲೆಯ 8.23 ಲಕ್ಷ ಜನ ವಿದ್ಯಾರ್ಥಿಗಳು ಬರೆದಿದ್ದರು. ಕನ್ನಡ, ಹಿಂದಿ, ಇಂಗ್ಲಿಷ್​, ತೆಲುಗು, ಮರಾಠಿ, ಉರ್ದು ಸೇರಿ 13 ಭಾಷೆಗಳಲ್ಲಿ ಪರೀಕ್ಷೆ ನಡೆದಿತ್ತು. ಭಾರತ ಮಾತ್ರವಲ್ಲ ಅಮೆರಿಕ, ಸಿಂಗಾಪುರ ಸೇರಿದಂತೆ 17 ಹೊರ ದೇಶಗಳಲ್ಲೂ ಪರೀಕ್ಷೆ ಆಯೋಜಿಸಲಾಗಿತ್ತು. ಎರಡನೇ ಆವತ್ತಿಯ ಜೆಇಇ ಪರೀಕ್ಷೆ ಏಪ್ರಿಲ್​ನಲ್ಲಿ ನಡೆಯಲಿದೆ.

20 ಟಾಪರ್ ವಿದ್ಯಾರ್ಥಿಗಳಿವರು..: ಫಲಿತಾಂಶದ 20 ಟಾಪರ್​ಗಳ​ ಮಾಹಿತಿ ಹೀಗಿದೆ... ಅಭಿನೀತ್ ಮೆಜೆಟಿ, ಅಮೋಘ ಜಲನ್​, ಅಪೂರ್ವ ಸಮೋತಾ, ಆಶಿಕ್ ಸ್ಟೆನ್ನಿ, ಡಿ.ಅಭಿನವ್ ಚೌಧರಿ, ದೇಶಂಕ್ ಪ್ರತಾಪ್ ಸಿಂಗ್, ಧ್ರುವ ಸಂಜಯ್ ಜೈನ್, ಜ್ಞಾನೇಶ್ ಹೇಮೇಂದ್ರ ಶಿಂಧೆ, ದುಗ್ಗಿನೇನಿ ವೆಂಕಟ್ ಯುಗೇಶ್, ಗುಲ್ಶನ್ ಕುಮಾರ್, ಗುತ್ತಿಕೊಂಡ ಅಭಿರಾಮ್, ಕೌಶಲ್ ವಿಜಯ್​ವರ್ಗಿಯ, ಕ್ರಿಷ್ ಗುಪ್ತಾ, ಮಯಾಂಕ್ ಸನ್, ಎನ್.ಕೆ.ವಿಶ್ವಜಿತ್, ನಿಪುನ್ ಗೋಯೆಲ್, ರಿಷಿ ಕಲ್ರಾ, ಸೋಹಂ ದಾಸ್, ಸುತಾರ್ ಹರ್ಷುಲ್ ಸಂಜಯ್​ಭಾಯ್ ಹಾಗೂ ಡಿ.ಸಿ.ರೆಡ್ಡಿ.

ಸಂತಸ ಹಂಚಿಕೊಂಡ ಜ್ಞಾನೇಶ್: 20 ಟಾಪರ್​ಗಳಲ್ಲಿ ಒಬ್ಬರಾದ ಮಹಾರಾಷ್ಟ್ರ ಮೂಲದ ಜ್ಞಾನೇಶ್ ಹೇಮೇಂದ್ರ ಶಿಂಧೆ ಸಂತಸ ಹಂಚಿಕೊಂಡಿದ್ದಾರೆ. ಇವರು ಕಳೆದ ಐದು ವರ್ಷಗಳಿಂದ ಕೋಟಾದಲ್ಲಿ ಕೋಚಿಂಗ್ ಪಡೆಯುತ್ತಿದ್ದರು. "ನಾನು 8ನೇ ತರಗತಿ ಓದುತ್ತಿರುವಾಗಲೇ ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಮಾಡಬೇಕೆಂದು ನಿರ್ಧರಿಸಿದ್ದೆ. ಬಾಂಬೆಯ ಐಐಟಿ ಸೇರುವುದು ನನ್ನ ಉದ್ದೇಶವಾಗಿತ್ತು. ಹಾಗಾಗಿ ಕೋಟಾಕ್ಕೆ ಬಂದು ಪರೀಕ್ಷೆಗೆ ತಯಾರಿ ಆರಂಭಿಸಿದೆ. ನನಗೆ ಪರೀಕ್ಷೆ ತಯಾರಿಗಾಗಿ ಆಂಡ್ರಾಯ್ಡ್ ಫೋನ್,​ ಇಂಟರ್‌ನೆಟ್​ ಬಳಸುವುದು ಗೊಂದಲವಾಗಿತ್ತು. ಕೋಚಿಂಗ್ ಸೆಂಟರ್​​ ನನ್ನ ಗುರಿ ಈಡೇರಿಸಲು ನೆರವಾಯಿತು" ಎಂದು ಹೇಳಿದರು.

ಭವಿಷ್ಯದಲ್ಲಿ ಜೆಇಇ ಬರೆಯುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಜ್ಞಾನೇಶ್, "ಕೇವಲ ಪುಸ್ತಕಗಳನ್ನು ಓದಿದರೆ ಸಾಲದು. ಅಧ್ಯಾಯಗಳ ಪುನರ್‌ಮನನ ಮಾಡಬೇಕು. ಸಮಯ ಸಿಕ್ಕಾಗ ಪ್ರಶ್ನೆ ಪತ್ರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಬೇಕಾಗುತ್ತದೆ. ಇದರಿಂದ ಸಕಾರಾತ್ಮಕ ಫಲಿತಾಂಶ ಪಡೆಯಲು ಸಾಧ್ಯ. ಈಗ ಸ್ಪರ್ಧೆ ಹೆಚ್ಚಾಗಿದೆ. ಒಂದೇ ಒಂದು ಅಂಕ ಕಡಿಮೆ ಗಳಿಸಿದರೂ ನಾವು ಹಿಂದೆ ಬೀಳುತ್ತೇವೆ. ನಮ್ಮ ಶ್ರೇಣಿಗಳು ಏರಿಳಿತವಾಗುತ್ತವೆ. ಆದ್ದರಿಂದ ನಾನು ಪ್ರತಿ ಬಾರಿಯೂ ನೂರರಷ್ಟು ಅಂಕ ಪಡೆಯಬೇಕೆಂಬ ಛಲದೊಂದಿಗೆ ಅಭ್ಯಾಸ ಮಾಡುತ್ತಿದ್ದೆ" ಎಂದು ವಿವರಿಸಿದರು.

ಇದನ್ನೂ ಓದಿ: ಜೆಇಇ ಪರೀಕ್ಷೆ ಸೆಷನ್​ 1ರ ಫಲಿತಾಂಶ ಪ್ರಕಟ: ಹೀಗೆ ಫಲಿತಾಂಶ ಚೆಕ್​ ಮಾಡಿ

Last Updated : Feb 7, 2023, 5:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.