ಭರತಪುರ (ರಾಜಸ್ಥಾನ) : ಕಳೆದ 25 ವರ್ಷಗಳಿಂದ ಇಲ್ಲಿನ ಜಾಟ್ ಸಮುದಾಯದ ಬೇಡಿಕೆಯಾದ ಒಬಿಸಿ ಮೀಸಲಾತಿಯ ಕೂಗು ಮತ್ತೆ ಶುರುವಾಗಿದೆ. ಭರತ್‌ಪುರ ಮತ್ತು ಧೋಲ್‌ಪುರದಲ್ಲಿ ಜಾಟರು ಮೀಸಲಾತಿಗೆ ಒತ್ತಾಯಿಸಿ ಚಳವಳಿ ಆರಂಭಿಸಿದ್ದಾರೆ. ಬುಧವಾರದಿಂದ ಜೈಚೋಳಿ ಗ್ರಾಮದಲ್ಲಿ ಜಾಟರ ಮಹಾ ಪ್ರತಿಭಟನೆ ಶುರುವಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಪಡೆಯನ್ನೂ ಭದ್ರತೆಗೆ ನಿಯೋಜಿಸಲಾಗಿದೆ.
ಹಲವು ವರ್ಷಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಫಲ ಸಿಕ್ಕಿಲ್ಲ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ನೂತನ ಸರ್ಕಾರ ರಚನೆಯಾಗಿದೆ. ಜೈಚೋಳಿ ಗ್ರಾಮದಲ್ಲಿ ಇಂದಿನಿಂದ ಶಾಂತಿಯುತವಾಗಿ ಚಳವಳಿ ಆರಂಭಿಸಲಾಗುವುದು ಎಂದು ಆರಕ್ಷಣ ಸಂಘರ್ಷ ಸಮಿತಿಯ ಸಂಚಾಲಕ ನೇಮ್ ಸಿಂಗ್ ಫೌಜ್ದಾರ್ ತಿಳಿಸಿದರು.
ಸರ್ಕಾರದ ನಿರ್ಧಾರವನ್ನು ಕಾಯಲಾಗುವುದು. ನಮ್ಮ ಶಾಂತಿಯುತ ಹೋರಾಟಕ್ಕೆ ಮನ್ನಣೆ ನೀಡದೇ ಹೋದಲ್ಲಿ, ಸರ್ವಾಂಗೀಣ ಹೋರಾಟ ನಡೆಸಬೇಕಾಗುತ್ತದೆ. ಈ ಬಾರಿ ಕೇಂದ್ರ ಸರ್ಕಾರ ನಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಭಾವಿಸುತ್ತೇವೆ. ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳದಿದ್ದರೆ ರಸ್ತೆಗಿಳಿದು ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಇತ್ತ ಜಾಟರು ಮೀಸಲಾತಿ ಪ್ರತಿಭಟನೆ ಆರಂಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಿಗಿಭದ್ರತೆ ಕೈಗೊಂಡಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಖಾಕಿ ಮತ್ತು ಅಧಿಕಾರಿಗಳು ಪ್ರತಿಭಟನಾಕಾರರ ಮೇಲೆ ನಿರಂತರ ನಿಗಾ ಇರಿಸಿದ್ದಾರೆ. ಒಂದು ವೇಳೆ ಆಂದೋಲನ ಹಿಂಸಾತ್ಮಕ ಸ್ವರೂಪ ಪಡೆದರೆ ಭರತ್‌ಪುರ- ಕೋಟಾ- ಮುಂಬೈ ರೈಲು ಮಾರ್ಗಗಳಲ್ಲಿ ಬದಲಾವಣೆ ಆಗಲಿದೆ ಎಂದು ತಿಳಿದುಬಂದಿದೆ.
ಹೋರಾಟದ ಹಾದಿ: ಭರತ್‌ಪುರ ಮತ್ತು ಧೋಲ್‌ಪುರ ವಲಯದಲ್ಲಿ ಹೆಚ್ಚಾಗಿ ವಾಸಿಸುವ ಜಾಟ್ ಸಮುದಾಯ ಮೊದಲು ಮೀಸಲಾತಿಯ ಬೇಡಿಕೆ ಇಟ್ಟಿದ್ದು 1998. ಅಂದಿನಿಂದ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ದೀರ್ಘ ಹೋರಾಟದ ಬಳಿಕ 2013 ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಭರತ್‌ಪುರ, ಧೋಲ್‌ಪುರ ಸೇರಿ 9 ರಾಜ್ಯಗಳಲ್ಲಿನ ಜಾಟ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡಿತ್ತು.
ಆದರೆ, 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ, ಸುಪ್ರೀಂಕೋರ್ಟ್ ಆದೇಶದಂತೆ 2015ರ ಆಗಸ್ಟ್ 10 ರಂದು ಒಬಿಸಿ ಮೀಸಲಾತಿಯನ್ನು ರದ್ದುಗೊಳಿಸಲಾಯಿತು. ಭರತ್‌ಪುರ ಮತ್ತು ಧೋಲ್‌ಪುರದ ಜಾಟ್ ಸಮುದಾಯ ಬೇರೆ ರಾಜ್ಯಗಳಂತೆ ಹಿಂದುಳಿದಿಲ್ಲ. ಅವರು ರಾಜಮನೆತನಕ್ಕೆ ಸೇರಿದವರು ಎಂಬ ವಾದ ಕೇಳಿಬಂದಿತ್ತು. ಇದಾದ ನಂತರ 2017 ರಲ್ಲಿ ರಾಜ್ಯದ ಎರಡೂ ಜಿಲ್ಲೆಗಳ ಜಾಟ್ ಸಮುದಾಯ ಮತ್ತೆ ಒಬಿಸಿ ಮೀಸಲಾತಿ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಆರಂಭಿಸಿದ್ದವು.
ಇದನ್ನೂ ಓದಿ: ಶಿವಸೈನಿಕರ ಕಾದಾಟ: ಸ್ಪೀಕರ್ಗೆ ಬಾಂಬೆ ಹೈಕೋರ್ಟ್ ನೋಟಿಸ್ - ಜ.22ಕ್ಕೆ ಸುಪ್ರೀಂನಲ್ಲಿ ಠಾಕ್ರೆ ಬಣದ ಅರ್ಜಿ ವಿಚಾರಣೆ