ETV Bharat / bharat

ಕಾಶ್ಮೀರದ ಅರಣ್ಯ ಪ್ರದೇಶದಲ್ಲಿ ಮೂವರು ಉಗ್ರರ ಎನ್‌ಕೌಂಟರ್ ಮಾಡಿದ ಸೇನೆ - ಯೋಧರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ

ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್​ನ ಶ್ರೀಚಂದ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.

Pahalgam Encounter
ಮೂವರು ಉಗ್ರರ ಎನ್‌ಕೌಂಟರ್ ಮಾಡಿದ ಸೇನೆ
author img

By

Published : May 6, 2022, 3:50 PM IST

Updated : May 6, 2022, 10:57 PM IST

ಅನಂತನಾಗ್‌( ಜಮ್ಮು-ಕಾಶ್ಮೀರ): ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಯೋಧರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸೈನಿಕರು ಯಶಸ್ವಿಯಾಗಿದ್ಧಾರೆ.

ಅನಂತನಾಗ್‌ ಜಿಲ್ಲೆಯ ಪಹಲ್ಗಾಮ್​ನ ಶ್ರೀಚಂದ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಸ್ಥಳಕ್ಕೆ ಹೆಚ್ಚಿನ ಭದ್ರತಾ ಸಿಬ್ಬಂದಿ ದೌಡಾಯಿಸಿ ಉಗ್ರರನ್ನು ಸುತ್ತುವರೆದು ಬೇಟೆಯಾಗಿದ್ದಾರೆ.

ಇಬ್ಬರು ಉಗ್ರರ ಎನ್‌ಕೌಂಟರ್ ಮಾಡಿದ ಸೇನೆ

ಇದರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉನ್ನತ ಕಮಾಂಡರ್​ ಆದ 57 ವರ್ಷದ ಮುಹಮ್ಮದ್ ಅಶ್ರಫ್ ಖಾನ್ ಅಲಿಯಾಸ್ ಮೌಲ್ವಿ ಹತನಾಗಿದ್ದಾನೆ. ಅಲ್ಲದೇ, ಹತರಾದ ಇನ್ನಿಬ್ಬರು ಉಗ್ರರನ್ನು ರೋಶನ್ ಜಮೀರ್ ಮತ್ತು ರಫೀಕ್ ಅಹ್ಮದ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: 'ವಿಜ್ಞಾನ ಸುಳ್ಳು ಹೇಳಲ್ಲ,ಮೋದಿ ಹೇಳ್ತಾರೆ': ಕೋವಿಡ್ ಸಾವಿನ ವಿಚಾರವಾಗಿ ರಾಹುಲ್ ವಾಗ್ದಾಳಿ

Last Updated : May 6, 2022, 10:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.