ಅನಂತನಾಗ್(ಜಮ್ಮು ಕಾಶ್ಮೀರ): ಹಿಂದೂ ಧಾರ್ಮಿಕ ಕ್ಷೇತ್ರ ಅಮರನಾಥ ಗುಹಾ ದೇವಾಲಯದ ಬಳಿ ಇಂದು ಹಿಮಪಾತವಾಗಿದ್ದು, ಶ್ರೀ ಅಮರನಾಥ ಜಿ ದೇಗುಲ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಮಳೆ ಮತ್ತು ಹಿಮಪಾತ ಇಲ್ಲಿ ಸಾಮಾನ್ಯವಾಗಿದ್ದು, ಪ್ರಸ್ತುತ ದಟ್ಟವಾದ ಹಿಮಚ್ಛಾದಿತ ಬೆಟ್ಟಗಳು ಎಲ್ಲೆಡೆ ಕಂಡುಬಂದಿವೆ. ಸದ್ಯಕ್ಕೆ 8 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶವಿದ್ದು, ವಾತಾವರಣ ನಯನ ಮನೋಹರವಾಗಿದೆ.
-
Fresh Snowfall at Holycave of Amarnathji https://t.co/v0wHQxIWE7
— Shri AMARNATHJI SHRINE BOARD SASB. (@ShriSasb) October 3, 2021 " class="align-text-top noRightClick twitterSection" data="
">Fresh Snowfall at Holycave of Amarnathji https://t.co/v0wHQxIWE7
— Shri AMARNATHJI SHRINE BOARD SASB. (@ShriSasb) October 3, 2021Fresh Snowfall at Holycave of Amarnathji https://t.co/v0wHQxIWE7
— Shri AMARNATHJI SHRINE BOARD SASB. (@ShriSasb) October 3, 2021
ಕೋವಿಡ್ ಕಾರಣಕ್ಕೆ 2021ರ ಅಮರನಾಥ ಯಾತ್ರೆಯನ್ನು ರದ್ದು ಮಾಡಲಾಗಿದ್ದು, ಆನ್ಲೈನ್ ಮೂಲಕ ಭಕ್ತರು ಅಮರನಾಥನ ದರ್ಶನ ಪಡೆಯಬಹುದು ಎಂದು ಅಮರನಾಥ ಜಿ ದೇಗುಲ ಮಂಡಳಿ ಆಗಸ್ಟ್ನಲ್ಲಿ ಹೇಳಿತ್ತು.