ಚೆನ್ನೈ(ತಮಿಳುನಾಡು): ದಕ್ಷಿಣ ಭಾರತದಲ್ಲೇ ಅತ್ಯಂತ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ತಮಿಳುನಾಡಿನ ಸಾಂಪ್ರಧಾಯಿಕ ಕ್ರೀಡೆ ಜಲಿಕಟ್ಟು, ಮೊಟ್ಟ ಮೊದಲ ಬಾರಿಗೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆಯಲಿದೆ, ಮಾರ್ಚ್ 5 ರಿಂದ ದಕ್ಷಿಣ ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ಜಲ್ಲಿಕಟ್ಟು ಸ್ಪರ್ಧೆಗಳು ಮಧುರೈ ಬಿಟ್ಟು ಚೆನ್ನೈಗೆ ಸ್ಥಳಾಂತರಗೊಂಡಿದೆ. ಮದುರೈನ ಅಲಂಕಾನಲ್ಲೂರು ಮತ್ತು ಪಾಲಮೇಡುಗಳಂತಹ ವಿಶ್ವವಿಖ್ಯಾತ ಜಲ್ಲಿಕಟ್ಟು ಅಂಗಳ ಹೊಂದಿದೆ.
2017ರಲ್ಲಿ ಇಡೀ ಭಾರತವೇ ತಿರುಗಿ ನೋಡುವ ಹಾಗೇ ಸರ್ಕಾರದ ವಿರುದ್ಧ ತಮಿಳುನಾಡಿನ ಯುವಕರು ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗೆ ನಿಷೇಧ ಹೇರದಂತೆ ಚೆನ್ನೈನಲ್ಲಿ ಪ್ರತಿಭಟನೆ ನಡೆಸಿದ್ದರು. ಇಷ್ಟೆಲ್ಲ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದರೂ ಸಹ ಈಗಲೂ ಚೆನ್ನೈನಲ್ಲಿ ಗ್ರಾಮೀಣ ಕ್ರೀಡೆಯ ಕೊರತೆ ಎದ್ದು ಕಾಣುತ್ತಿತ್ತು. ಚೆನ್ನೈನ ಮತ್ತು ಜಲಿಕಟ್ಟಿನ ಸಂಬಂಧವು ಶಾಪಿಂಗ್ ಮಾಲ್ಗಳಲ್ಲಿ ಅಳವಡಿಸಲಾದ ಗೂಳಿಯ ಆಟಿಕೆ ಎಂತಾಗಿದೆ, ರಾಜ್ಯ ರಾಜಧಾನಿಯಲ್ಲಿ ಈ ಕೊರತೆಯನ್ನು ಕಡಿಮೆ ಗೊಳಿಸಲು, ಈ ವರ್ಷದ ಮಾರ್ಚ್ 5 ರಂದು ಚೆನ್ನೈನಲ್ಲಿ ಗೂಳಿಗಳು ಅಬ್ಬರಿಸಲು ಸಜ್ಜಾಗಿದ್ದು, ಗೂಳಿಗಳನ್ನು ಹಿಡಿಯಲು ಯುವಕರು ಉತ್ಸುಕರಾಗಿದ್ದಾರೆ.
ತಮಿಳುನಾಡಿನ ಗ್ರಾಮೀಣ ಕೈಗಾರಿಕೆಗಳ ಸಚಿವ ತಾ. ಮೊ. ಅನ್ಬರಸನ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಚೆನ್ನೈನ ಆಲಂದೂರು ಕ್ಷೇತ್ರದ ಶಾಸಕರಾಗಿರುವ ಅವರು, ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡಿ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಜನ್ಮದಿನದ ಅಂಗವಾಗಿ ಜಲ್ಲಿಕಟ್ಟು ಸ್ಪರ್ಧೆಚೆನ್ನೈನಲ್ಲಿ ನಡೆಯಲಿದೆ ಎಂದು ಪ್ರಕಟಿಸಿದ್ದಾರೆ.
ಡಿಎಂಕೆ ವತಿಯಿಂದ ಜಲ್ಲಿಕಟ್ಟು ಆಯೋಜನೆ: ಇದರ ಜೊತೆಗೆ ಚೆನ್ನೈನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಪಟ್ಟಪಾಯಿಯಲ್ಲಿ ಎಂಬುವಲ್ಲಿ ಡಿಎಂಕೆ ಪಕ್ಷದ ವತಿಯಿಂದ ಸಮಾರು 500 ಗೂಳಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧೆಯನ್ನು ಆಯೋಜಿಸಲಾಗುವುದು ಮತ್ತು ಈ ಒಂದು ಜಲ್ಲಿಕಟ್ಟು ಸ್ಪರ್ಧೆಯಲ್ಲಿ ತಮಿಳುನಾಡಿನಲ್ಲಿ ಜನಪ್ರಿಯ ಹೋರಿಗಳು ಹಾಗೂ ಗೂಳಿ ಹಿಡಿಯುವವರು ಈ ಸ್ಪರ್ಧೆ ಭಾಗವಹಿಸುವರು ಎಂದು ಅನ್ಬರಸನ್ ತಿಳಿಸಿದರು. ಕೊನೆಗೆ ವಿಶೇಷವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ಅವರ ಹೆಸರಿನಲ್ಲಿ ಒಂದು ಗೂಳಿಯನ್ನು ಸ್ಪರ್ಧೆಯಲ್ಲಿ ಬಿಡಲಾಗುವುದು ಎಂದು ತಿಳಿಸಿದರು.
ಗೋಪಾಲಕರಿಗೆ ವಿಮೆ: ಇದೇ ಮೊದಲ ಬಾರಿಗೆ ತಮಿಳುನಾಡು ಸರ್ಕಾರದಿಂದ ಗೋಪಾಲಕರಿಗೆ ವಿಮೆ ನೀಡಲಾಗುವುದು ಎಂದು ಸಚಿವರು ಘೋಷಿಸಿದ್ದಾರೆ, ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸುವ ಗೂಳಿಗಳಿಗೆ ಕಾರು ಮತ್ತು ಗೂಳಿ ಹಿಡಿಯುವವರಿಗೆ ದ್ವಿಚಕ್ರವಾಹನ ನೀಡಲಾಗುತ್ತದೆ. ರಾಜ್ಯಾದ್ಯಂತ ಈಗಾಗಲೇ ಹಲವು ಜಲ್ಲಿಕಟ್ಟು ಸ್ಪರ್ಧೆಗಳನ್ನು ಆಯೋಜಿಸಿರುವ ಜಲ್ಲಿಕಟ್ಟು ಸಂರಕ್ಷಣಾ ಸಂಘದ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನೂ ಸಹ ನಡೆಸಲು ಉದ್ದೇಶಿಸಿದ್ದೇವೆ ಎಂದು ಸಚಿವ ಅನ್ಬರಸನ್ ಹೇಳಿದರು.
10 ಸಾವಿರ ವೀಕ್ಷಕರಿಗೆ ಅವಕಾಶ: ಮೊಟ್ಟಮೊದಲ ಬಾರಿಗೆ ಚೆನ್ನೈನಲ್ಲಿ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹತ್ತು ಸಾವಿರಕ್ಕು ಹೆಚ್ಚು ಜನರುನ ಈ ಸ್ಪರ್ಧೆಯನ್ನು ನೋಡಲು ಬರ ಬಹುದು ಎಂಬ ನಿರೀಕ್ಷೆಯಿದೆ. ಜಲ್ಲಿಕಟ್ಟು ಪಂದ್ಯಗಳಲ್ಲಿ ಭಾಗವಹಿಸುವ ಸ್ಪಧಾರ್ಥಿಗಳಿಗೆ ಯಾವುದೇ ಕುಂದು ಕೊರತೆ ಆಗದಂತೆ ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಚೆನ್ನೈನಲ್ಲಿ ನಡೆಯಲಿರುವ ಸ್ಪರ್ಧೆಗೆ ಈಗಾಗಲೇ ಒಂದು ತಿಂಗಳ ಹಿಂದೆಯೇ ಕಾಮಗಾರಿ ಆರಂಭವಾಗಿದ್ದು, ಇನ್ನು ಕೇವಲ ಎರಡು ತಿಂಗಳು ಬಾಕಿ ಇರುವುದರಿಂದ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುತ್ತೆವೆ ಎಂದು ಹೇಳಿದರು. ಕಳೆದ ವರ್ಷ ಸ್ಪರ್ಧೆ ನಡೆಸಲು ಎಲ್ಲಾ ತಯಾರಿಗಳು ಮಾಡಿಕೊಂಡಿದ್ದೇವು ಆದರೆ, ಕೊರೊನಾ ಮಾರ್ಗಸೂಚಿಗಳ ಕಾರಣದಿಂದಾಗಿ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲು ಸಾಧ್ಯವಾಗಲಿಲ್ಲ, ಈ ಬಾರಿ ತಮಿಳುನಾಡು ಮುಖ್ಯಮಂತ್ರಿ ಎಂ ಸ್ಟಾಲಿನ್ ಜನ್ಮದಿನದಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಗೋಲ್ಡನ್ ಗ್ಲೋಬ್ 2023 ವಿಜೇತರ ಸಂಪೂರ್ಣ ಪಟ್ಟಿ.. ಯಾರ‍್ಯಾರಿಗೆ ಪ್ರಶಸ್ತಿ ಗರಿ?