ಛಾಪ್ರಾ(ಬಿಹಾರ್): ಜಿಲ್ಲೆಯ ಪಾಣಾಪುರದಲ್ಲಿ ಬಾಬಾವೊಬ್ಬರು ಸುದ್ದಿಯಲ್ಲಿದ್ದಾರೆ. ಬಾಬಾಗೆ ಅಲೌಕಿಕ ಶಕ್ತಿಗಳಿವೆ ಎಂದು ಜನರು ಹೇಳಿಕೊಳ್ಳುತ್ತಾರೆ. ಈ ಬಾಬಾ 12 ವರ್ಷಗಳಿಂದ ಆಹಾರವನ್ನು ತೆಗೆದುಕೊಂಡಿಲ್ಲವಂತೆ. 12 ವರ್ಷಗಳ ಕಾಲ ಹೂವುಗಳನ್ನು ತಿಂದು ಬದುಕುತ್ತಿದ್ದೇನೆ ಮತ್ತು ಜನರ ಸಮಸ್ಯೆಗಳನ್ನು ನಿವಾರಿಸುತ್ತಿದ್ದೇನೆ ಎಂದು ಬಾಬಾ ಹೇಳುತ್ತಿದ್ದಾರೆ.
ಕೆಂಪು ಮೆಣಸಿನಕಾಯಿ ಹೋಮ: ಬಾಬಾರ ಒಂದು ದೊಡ್ಡ ವೈಶಿಷ್ಟ್ಯ ಎಂದರೆ ಅವರು ಶ್ರಾವಣದಲ್ಲಿ 3 ದಿನಗಳ ಕಾಲ ಒಂದು ಕ್ವಿಂಟಾಲ್ ಕೆಂಪು ಮೆಣಸಿನಕಾಯಿ ಹೋಮವನ್ನು ಮಾಡುತ್ತಾರೆ. ಇಲ್ಲಿನ ಜನ ಅವರಿಗೆ ಸಂತ ಎಂಬ ಬಿರುದು ನೀಡಿದ್ದಾರೆ. ಬಾಬಾ ಅವರು ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಜನ ಹೇಳುತ್ತಾರೆ. ಈ ಬಾಬಾ ಹೆಸರು ಸಂತ ಜೈರಾಮ್ ದಾಸ್ ಅಲಿಯಾಸ್ ಬೆಲ್ಪಾಟಿಯಾ ಬಾಬಾ. ಅವರ ವಯಸ್ಸು ಸುಮಾರು 45 ವರ್ಷ.
ವಿಶ್ವವನ್ನು ಉಳಿಸಲು ಮೆಣಸಿನಕಾಯಿ ಹೋಮ: ಸಂತ ಜೈರಾಮ್ ದಾಸ್ ಪಾಣಾಪುರದ ರಾಕೌಲಿ ದಕ್ಷಿಣೇಶ್ವರಿ ಕಾಳಿ ದೇವಸ್ಥಾನದಲ್ಲಿ ವಾಸಿಸುತ್ತಿದ್ದಾರೆ. ಭೋಲೆನಾಥ್ ಮತ್ತು ಮಾತೆ ಕಾಳಿಯನ್ನು ಈ ಬಾಬಾ ಪೂಜಿಸುತ್ತಾರೆ. ವಾತಾವರಣ ಶುದ್ಧೀಕರಿಸಲು ಮತ್ತು ವಿಶ್ವವವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸಲು ಅವರು ಕಳೆದ 12 ವರ್ಷಗಳಿಂದ ಈ ಮೆಣಸಿನಕಾಯಿ ಹೋಮವನ್ನು ಬಾಬಾ ನೆರೆವೇರಿಸುತ್ತಾ ಬಂದಿದ್ದಾರಂತೆ.
ನಾನು ಅನ್ನವನ್ನು ತಿನ್ನುವುದಿಲ್ಲ. ಹೂವಿನ ಎಲೆಗಳು ನನ್ನ ಆಹಾರ. ನಾನು ಎಲೆಗಳು ಮತ್ತು ಹೂವುಗಳನ್ನು ತಿನ್ನುತ್ತೇನೆ. ನಾನು ಮನೆಯಲ್ಲಿ ಯಾವುದೇ ರೀತಿಯ ತೊಂದರೆ, ಭೂತ, ಯಾವುದೇ ಅಡೆತಡೆಗಳು ಇದ್ದರೂ ಈ ಹೋಮದಿಂದ ನಿವಾರಿಸುತ್ತೇನೆ. ಈ ಹೋಮ ಮಾಡುವುದರಿಂದ ಜನರಿಗೆ ಕಲ್ಯಾಣವಾಗುತ್ತದೆ. ಜನರ ಸಮಸ್ಯೆಗಳು ದೂರವಾಗುತ್ತವೆ ಎಂದು ಬಾಬಾ ಮಾತಾಗಿದೆ.
12 ವರ್ಷಗಳ ಕಾಲ ಆಹಾರವಿಲ್ಲ: 12 ವರ್ಷಗಳ ಕಾಲ ಊಟ ಮಾಡದೇ ಬದುಕಿರುವುದು ಆಶ್ಚರ್ಯದ ಸಂಗತಿಯಾದರೂ ಅಧ್ಯಾತ್ಮಿಕತೆ ಮತ್ತು ಬೈರಾಗ್ನಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಗುಲ್ಕೋಸ್ ಇಲ್ಲದೇ ಮನುಷ್ಯ 2 ವಾರ ಬದುಕಲು ಸಾಧ್ಯವಿಲ್ಲ. ಹಾಗಾದರೆ ಅಂತಹ ಹೂವಿನ ಎಲೆಗಳನ್ನು ಸೇವಿಸಿ ಬಾಬಾ ಹೇಗೆ ಬದುಕಿದ್ದಾನೆ ಎಂಬ ಪ್ರಶ್ನೆ ಉದ್ಭವಿಸುವುದು ನಿಶ್ಚಿತ.
ಆದರೆ, ಮತ್ತೊಂದೆಡೆ ಬಾಬಾ ಸೇವಿಸುವ ಹೂವಿನ ಎಲೆಗಳಲ್ಲಿ ದೇಹವು ಎಲ್ಲ ಜೀವಸತ್ವಗಳು ಮತ್ತು ಖನಿಜಗಳನ್ನು ಸರಿಯಾದ ಪ್ರಮಾಣದಲ್ಲಿ ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.
ಕೆಂಪು ಮೆಣಸಿನಕಾಯಿ ಹೋಮ ಮಾಡುವ ಪದ್ಧತಿ: ಮೆಣಸಿನಕಾಯಿಯ ಹೋಮವನ್ನು ಮಾಡುವ ಸಂಪ್ರದಾಯವನ್ನು ಅನೇಕ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕದ ದಾವಣಗೆರೆಯ ತೀಕ್ಷ್ಣ ಪ್ರತ್ಯಂಗಿರಾ ದೇವಿ ದೇವಸ್ಥಾನದಲ್ಲಿ ಅಮಾವಾಸ್ಯೆಯ ರಾತ್ರಿ ಮೆಣಸಿನಕಾಯಿ ಹೋಮ ಮಾಡುವ ಸಂಪ್ರದಾಯವಿದೆ. ಈ ರೀತಿಯ ಹೋಮವು ದೇವತೆಗಳನ್ನು ಮೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ, ವಿಶೇಷವಾಗಿ ದೀರ್ಘಾಯುಷ್ಯಕ್ಕಾಗಿ ಈ ಹೋಮ ಮಾಡುವುದು ವಾಡಿಕೆ.
ಶತ್ರುಗಳ ನಾಶಕ್ಕೆ ಹೋಮ: ಇದೇ ವೇಳೆ ಛತ್ತೀಸ್ ಗಢದ ಮಾತೇ ಬಂಬಲೇಶ್ವರಿ ದೇವಸ್ಥಾನದಲ್ಲಿ ಕೆಂಪು ಮೆಣಸಿನಕಾಯಿಯೊಂದಿಗೆ ಹೋಮ ಮಾಡುವ ಸಂಪ್ರದಾಯವಿದೆ. ಶತ್ರುಗಳನ್ನು ನಾಶ ಮಾಡಲು ಪ್ರಾಚೀನ ಕಾಲದಿಂದಲೂ ಇಲ್ಲಿ ಹೋಮ ನಡೆಸಲಾಗುತ್ತಿದೆ. ಇದರೊಂದಿಗೆ ಸಿಹಿತಿಂಡಿ, ತರಕಾರಿ, ಹಣ್ಣುಗಳನ್ನು ನೀಡುವ ಸಂಪ್ರದಾಯವೂ ಶತಮಾನಗಳಿಂದ ನಡೆದುಕೊಂಡು ಬಂದಿದೆ.
ಓದಿ: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ.. ಹೋಮ-ಹವನದ ಮೊರೆ ಹೋದ ಹೋಟೆಲ್ ಮಾಲೀಕರು