ಶ್ರೀನಗರ(ಜಮ್ಮು-ಕಾಶ್ಮೀರ): ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಮೂವರು ಶಂಕಿತ ಸದಸ್ಯರನ್ನು ಜಮ್ಮುವಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದರ ಜೊತೆಗೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ದೊಡ್ಡ ಸಂಗ್ರಹವನ್ನು ಪತ್ತೆ ಮಾಡಿದ್ದಾರೆ. ಮಂಗಳವಾರ ಮತ್ತು ಬುಧವಾರದ ಮಧ್ಯರಾತ್ರಿ ಜಮ್ಮುವಿನ ತ್ರಿಕೂಟ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು.
ಸಂಚಾರ ನಿಯಂತ್ರಣದ ವೇಳೆ ರಸ್ತೆಯಲ್ಲಿದ್ದ ಟ್ಯಾಂಕರ್‌ಗೆ ಪೊಲೀಸರು ಮುಂದೆ ಹೋಗುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಟ್ಯಾಂಕರ್ ತೆಗೆದುಕೊಂಡು ಮುಂದೆ ಹೋಗಲು ಹಿಂದೇಟು ಹಾಕಿದ್ದ. ಸ್ವಲ್ಪ ಸಮಯದ ನಂತರ ಚಾಲಕ ಟ್ಯಾಂಕರ್ನೊಂದಿಗೆ ಚಲಿಸಿತ್ತು, ನರ್ವಾಲ್ ರಸ್ತೆಯಲ್ಲಿ ನಿಲ್ಲಿಸಿದ್ದಾನೆ.
-
J&K | A Jaish-e-Mohammed (JeM) module busted and three people arrested. 3 AK 56 rifles, one pistol, 9 magazines, 6 grenades and 191 bullets recovered. pic.twitter.com/tjnSVdFj5P
— ANI (@ANI) November 9, 2022 " class="align-text-top noRightClick twitterSection" data="
">J&K | A Jaish-e-Mohammed (JeM) module busted and three people arrested. 3 AK 56 rifles, one pistol, 9 magazines, 6 grenades and 191 bullets recovered. pic.twitter.com/tjnSVdFj5P
— ANI (@ANI) November 9, 2022J&K | A Jaish-e-Mohammed (JeM) module busted and three people arrested. 3 AK 56 rifles, one pistol, 9 magazines, 6 grenades and 191 bullets recovered. pic.twitter.com/tjnSVdFj5P
— ANI (@ANI) November 9, 2022
ಟ್ರಾಫಿಕ್ ಕಡಿಮೆಯಾದರೂ ಸಹ ಟ್ಯಾಂಕರ್ ಚಾಲಕ ನರ್ವಾಲ್ ರಸ್ತೆಯಲ್ಲೇ ನಿಂತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಇದಾದ ಬಳಿಕ ಪೊಲೀಸರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದರು. ಚಾಲಕ ಮತ್ತು ಆತನ ಇಬ್ಬರು ಸಹಚರರು ಉತ್ತರ ನೀಡುವ ಬದಲು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಇದಾದ ನಂತರ ಟ್ಯಾಂಕರ್ ಚಾಲಕ ಮೊಹಮ್ಮದ್ ಯಾಸಿನ್, ಫರ್ಹಾನ್ ಫಾರೂಕ್ ಮತ್ತು ಫಾರೂಕ್ ಅಹ್ಮದ್ ಸೇರಿದಂತೆ ಮೂವರನ್ನು ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ವಿಚಾರಣೆಯ ವೇಳೆ ಚಾಲಕ ಮೊಹಮ್ಮದ್ ಯಾಸಿನ್, ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಕಮಾಂಡರ್ ಶಹಬಾಜ್ ಖಾನ್ ಆಜ್ಞೆಯ ಮೇರೆಗೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಜಮ್ಮುವಿಗೆ ಬಂದಿದ್ದೇನೆ. ಈ ಶಸ್ತ್ರಾಸ್ತ್ರಗಳನ್ನು ಕಣಿವೆಯಲ್ಲಿರುವ ಭಯೋತ್ಪಾದಕನಿಗೆ ಹಸ್ತಾಂತರಿಸುವಂತೆ ಹೇಳಿದರು. ಅದರಂತೆ ನಾವು ತೈಲ ಟ್ಯಾಂಕರ್‌ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬಚ್ಚಿಟ್ಟು ರವಾನಿಸುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾನೆ.
ಈ ಬಗ್ಗೆ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಟ್ಯಾಂಕರ್ ಅನ್ನು ಮತ್ತೊಮ್ಮೆ ಶೋಧಿಸಲಾಗಿದೆ. ಟ್ಯಾಂಕರ್ನಿಂದ 3 ಎಕೆ 56 ರೈಫಲ್, ಒಂದು ಪಿಸ್ತೂಲ್, 09 ಮ್ಯಾಗಜೀನ್, 191 ಜೀವಂತ ಗುಂಡುಗಳು, 6 ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಎಎಸ್ಐ ಮಗನಿಗೆ ಶೂಟ್ ಮಾಡಿ ಮನೆಯಲ್ಲಿ ದರೋಡೆ