ETV Bharat / bharat

ಜಮ್ಮು-ಕಾಶ್ಮೀರ ಪೊಲೀಸ್​ ಪದಕದಲ್ಲಿ ಶೇಖ್​ ಅಬ್ದುಲ್ಲಾ ಫೋಟೋ ತೆಗೆಯಲು ಲೆಫ್ಟಿನೆಂಟ್​ ಗವರ್ನರ್​ ಆದೇಶ - ಪೊಲೀಸ್ ಪದಕಗಳಲ್ಲಿ ಶೇಖ್​ ಅಬ್ದುಲ್ಲಾ ಫೋಟೋ ತೆಗೆಯಲು ಆದೇಶ

ಶೌರ್ಯ ಮತ್ತು ಸೇವೆಗಾಗಿ ಕೊಡಲಾಗುವ ಪೊಲೀಸ್​ ಪದಕದಲ್ಲಿರುವ ಕಾಶ್ಮೀರಿ ನಾಯಕನ ಫೋಟೋವನ್ನು ತೆಗೆದುಹಾಕಿ ರಾಷ್ಟ್ರೀಯ ಲಾಂಛನವನ್ನು ಅಳವಡಿಸಲು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್​ ಗವರ್ನರ್​ ಆದೇಶಿಸಿದ್ದಾರೆ.

j-and-k-lieutenant-governor
ಲೆಫ್ಟಿನೆಂಟ್​ ಗವರ್ನರ್​ ಆದೇಶ
author img

By

Published : May 24, 2022, 5:08 PM IST

ಶ್ರೀನಗರ(ಜಮ್ಮು-ಕಾಶ್ಮೀರ): ಶೌರ್ಯ ಮತ್ತು ಸೇವೆಗಾಗಿ ಕೊಡಲಾಗುವ ಪೊಲೀಸ್​ ಪದಕದಲ್ಲಿರುವ ಕಾಶ್ಮೀರಿ ನಾಯಕನ ಫೋಟೋವನ್ನು ತೆಗೆದುಹಾಕಲು ಜಮ್ಮು- ಕಾಶ್ಮೀರದ ಲೆಫ್ಟಿನೆಂಟ್​ ಗವರ್ನರ್​ ಆದೇಶಿಸಿದ್ದಾರೆ. ಇದು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಆಡಳಿತ ಈ ನಿರ್ಧಾರ ಇತಿಹಾಸವನ್ನು ಅಳಿಸಿ ಹಾಕುವ ಯತ್ನ ಎಂದು ನ್ಯಾಷನಲ್​ ಕಾನ್ಫ್​ರೆನ್ಸ್​ ಟೀಕಿಸಿದೆ.

ಶೌರ್ಯ ಪದಕದ ಒಂದು ಬದಿಯಲ್ಲಿ ಕಾಶ್ಮೀರಿ ನಾಯಕ, ಮಾಜಿ ಮುಖ್ಯಮಂತ್ರಿ ಶೇಖ್ ಮಹಮ್ಮದ್ ಅಬ್ದುಲ್ಲಾ ಅವರ ಫೋಟೋವನ್ನು ಅಳವಡಿಸಲಾಗಿದೆ. ಶೇಖ್​ ಅಬ್ದುಲ್ಲಾ ಅವರನ್ನು ಸ್ಥಳೀಯರು ಶೇರ್​ ಇ ಕಾಶ್ಮೀರ್​ ಎಂದು ಕರೆಯುತ್ತಾರೆ. ಹೀಗಾಗಿ ಅವರ ಫೋಟೋವನ್ನು ಪೊಲೀಸ್​ ಪದಕದಲ್ಲಿ ಅಳವಡಿಸಲಾಗಿತ್ತು.

ಇದೀಗ ಅಲ್ಲಿನ ಲೆಫ್ಟಿನೆಂಟ್​ ಗನರ್ವರ್,​ ಶೇಖ್​ ಅಬ್ದುಲ್ಲಾರ ಫೋಟೋವನ್ನು ಕಿತ್ತು ಹಾಕಿ ಅದರ ಬದಲು ರಾಷ್ಟ್ರೀಯ ಲಾಂಛನವನ್ನು ಅಳವಡಿಸಲು ಆದೇಶಿಸಿದ್ದಾರೆ. ಅಲ್ಲದೇ, ಶೇರ್-ಎ-ಕಾಶ್ಮೀರ್​ ಎಂದು ಕರೆಯಲಾಗುತ್ತಿದ್ದ ಹೆಸರನ್ನು ತೆಗೆದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪದಕಗಳು ಎಂದು ಮರುನಾಮಕರಣ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪದಕ ನಿಯಮದ 4ನೇ ಪ್ಯಾರಾಗೆ ತಿದ್ದುಪಡಿ ತರಲಾಗಿದ್ದು, ಪದಕದ ಒಂದು ಬದಿಯಲ್ಲಿರುವ ಶೇಖ್ ಮಹಮ್ಮದ್ ಅಬ್ದುಲ್ಲಾ ಅವರ ಫೋಟೋ ಜಾಗದಲ್ಲಿ ಭಾರತದ ರಾಷ್ಟ್ರೀಯ ಲಾಂಛನವಾದ 4 ಮುಖಗಳ ಸಿಂಹವನ್ನು ಅಳವಡಿಸಲು ಸೂಚಿಸಲಾಗಿದೆ. ಇನ್ನೊಂದು ಬದಿಯಲ್ಲಿ ಜಮ್ಮು- ಕಾಶ್ಮೀರದ ಲಾಂಛನದೊಂದಿಗೆ ಶೌರ್ಯಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪದಕ ಮತ್ತು ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್ ಎಂದು ಕೆತ್ತಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್​ಕುಮಾರ್ ಗೋಯಲ್ ತಿಳಿಸಿದ್ದಾರೆ.

ಪ್ರತಿಪಕ್ಷಗಳ ಟೀಕೆ: ಲೆಫ್ಟಿನೆಂಟ್​ ಗವರ್ನರ್​ರ​ ಈ ನಿರ್ಧಾರವನ್ನು ಟೀಕಿಸಿರುವ ನ್ಯಾಷನಲ್ ಕಾನ್ಫರೆನ್ಸ್, ಜಮ್ಮು ಮತ್ತು ಕಾಶ್ಮೀರದ ಇತಿಹಾಸ ಅಳಿಸಲು ನಡೆಸಲಾದ ಮತ್ತೊಂದು ಪ್ರಯತ್ನ ಎಂದಿದೆ. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಶೇಖ್ ಅಬ್ದುಲ್ಲಾ ಅವರ ಜನ್ಮದಿನದಂದು (ಡಿಸೆಂಬರ್ 5) ನೀಡಲಾಗುತ್ತಿದ್ದ ರಜಾ ದಿನವನ್ನು ರದ್ದು ಮಾಡಲಾಗಿದೆ.

ಇದೀಗ ಪೊಲೀಸ್​ ಪದಕದಲ್ಲಿ ಅವರ ಫೋಟೋ ಕಿತ್ತು ಹಾಕುವ ಮೂಲಕ ಇತಿಹಾಸವನ್ನು ಅಳಿಸಿ ಹಾಕುವ ಪ್ರಯತ್ನ ಸಾಗಿದೆ ಎಂದು ಆರೋಪಿಸಿದೆ. ಶೇಖ್ ಅಬ್ದುಲ್ಲಾ ಅವರ ಫೋಟೋ, ಹೆಸರನ್ನು ಅಳಿಸುವ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ.

ಓದಿ: 'Proud of you Bhagwant' : ಪಂಜಾಬ್ ಆರೋಗ್ಯ​ ಸಚಿವರ ಬಂಧನದ ಬೆನ್ನಲ್ಲೇ ಕೇಜ್ರಿವಾಲ್​ ಮೆಚ್ಚುಗೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.