ETV Bharat / bharat

ಮಹಾತ್ಮ ಗಾಂಧೀಜಿ ಕಾನೂನು ಪದವಿ ಪಡೆದಿಲ್ಲ: ಮನೋಜ್ ಸಿನ್ಹಾ ವಿವಾದಾತ್ಮಕ ಹೇಳಿಕೆ - ಮನೋಜ್ ಸಿನ್ಹಾ

ಮಹಾತ್ಮ ಗಾಂಧೀಜಿ ಅವರು ಯಾವುದೇ ಔಪಚಾರಿಕ ಕಾನೂನು ಪದವಿ ಪಡೆದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Misconception that Gandhi ji had Law Degree JK LG
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ
author img

By

Published : Mar 24, 2023, 11:08 PM IST

ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಾತನಾಡಿದರು

ನವದೆಹಲಿ: ಮಹಾತ್ಮ ಗಾಂಧಿಯವರು ಯಾವುದೇ ಔಪಚಾರಿಕ ಕಾನೂನು ಪದವಿ ಪಡೆದಿಲ್ಲ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಿವಾದಕ್ಕೆ ಕಾರಣರಾಗಿದ್ದಾರೆ.

"ಗಾಂಧೀಜಿ ಕಾನೂನು ಪದವಿ ಪಡೆದಿದ್ದರು ಎಂಬುದು ತಪ್ಪು ಕಲ್ಪನೆಯಿದೆ. ಅವರು ಒಂದೇ ಒಂದು ವಿಶ್ವವಿದ್ಯಾಲಯದಿಂದ ಪದವಿ ಪಡೆದಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಅವರ ಏಕೈಕ ಅರ್ಹತೆ ಹೈಸ್ಕೂಲ್ ಡಿಪ್ಲೋಮಾ, ಅವರು ಕಾನೂನು ಅಭ್ಯಾಸ ಮಾಡಲು ಅರ್ಹರಾಗಿದ್ದರು. ಆದರೆ, ಕಾನೂನು ಪದವಿ ಪಡೆದಿರಲಿಲ್ಲ. ಅವರು ಯಾವುದೇ ಪದವಿ ಹೊಂದಿರಲಿಲ್ಲ. ಆದರೂ ಅವರು ಎಷ್ಟು ವಿದ್ಯಾವಂತರಾಗಿದ್ದರು ಎಂದು ಸಿನ್ಹಾ ಅವರು, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಈ ರೀತಿ ಭಾರೀ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

''ಈ ಸತ್ಯವನ್ನು ಅನೇಕ ಜನರು ವಿರೋಧಿಸಬಹು, ಆದ್ರೆ ಗಾಂಧಿ ಅವರು ಯಾವುದೇ ಔಪಚಾರಿಕ ಕಾನೂನು ಪದವಿಯನ್ನು ಹೊಂದಿಲ್ಲ. ಪದವಿಗೂ ಶಿಕ್ಷಣಕ್ಕೂ ಸಂಬಂಧವಿಲ್ಲ. ಗಾಂಧೀಜಿಯವರ ಜೀವನದಲ್ಲಿ ಸತ್ಯವೇ ಕೇಂದ್ರಬಿಂದುವಾಗಿದ್ದು, ಅದನ್ನು ಬೇರೆ ಯಾವುದಕ್ಕೂ ಬಿಟ್ಟುಕೊಡಲಿಲ್ಲ'' ಎಂದು ಅವರು ಹೇಳಿದರು.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ಬೆದರಿಕೆ ಕರೆ ಪ್ರಕರಣ: ಹಿಂಡಲಗಾ ಜೈಲಿನ ಕೈದಿಯಿಂದ ಎರಡು ಮೊಬೈಲ್, ಸಿಮ್​ ಕಾರ್ಡ್ ಜಪ್ತಿ

''ಗಾಂಧೀಜಿಯವರು ರಾಷ್ಟ್ರಕ್ಕಾಗಿ ಬಹಳಷ್ಟು ಸೇವೆ ಸಲ್ಲಿಸಿದ್ದಾರೆ. ಆದರೆ, ಅವರು ಸಾಧಿಸಿದ ಎಲ್ಲದರಲ್ಲೂ ಸತ್ಯವೇ ಕೇಂದ್ರಬಿಂದುವಾಗಿದೆ. ಇದರಿಂದ ಅವರು ರಾಷ್ಟ್ರಪಿತರಾದರು ಎಂದು ಸಿನ್ಹಾ ಗಟ್ಟಿಯಾಗಿ ಹೇಳಿದರು. "ನೀವು ಅವರ ಜೀವನದ ಎಲ್ಲಾ ಅಂಶಗಳನ್ನು ನೋಡಿದರೆ, ಅವರ ಜೀವನದಲ್ಲಿ ಸತ್ಯದ ಹೊರತಾಗಿ ಬೇರೇನೂ ಇರಲಿಲ್ಲ. ಯಾವುದೇ ಸವಾಲುಗಳು ಎದುರಿಗಿದ್ದರೂ, ಮಹಾತ್ಮ ಗಾಂಧಿ ಎಂದಿಗೂ ಸತ್ಯವನ್ನು ತ್ಯಜಿಸಲಿಲ್ಲ. ಅವರ ಆಂತರಿಕ ಧ್ವನಿಯು ಸತ್ಯದಿಂದಲೇ ಕೂಡಿತ್ತು. ಪರಿಣಾಮವಾಗಿ ಅವರು ರಾಷ್ಟ್ರಪಿತರಾದರು" ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ರಾಹುಲ್​ ಗಾಂಧಿ ಟ್ವೀಟ್​ ಪ್ರಕರಣ: ರಾಷ್ಟ್ರೀಯ ಮಕ್ಕಳ ಆಯೋಗದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

ಗಾಂಧಿಯವರು ಲಂಡನ್ನಿನ ಯೂನಿವರ್ಸಿಟಿ ಕಾಲೇಜ್‌ನಲ್ಲಿ ಕಾನೂನು ಪದವಿಯನ್ನು ಪಡೆದರು ಎಂದು ತಿಳಿದಿದೆ. ಗಾಂಧೀಜಿಯವರ 'ದಿ ಲಾ ಅಂಡ್ ದಿ ಲಾಯರ್ಸ್' ಪುಸ್ತಕದ ಮೊದಲ ವಿಭಾಗವು 'ಕಾನೂನು ವಿದ್ಯಾರ್ಥಿಯಾಗಿ ಗಾಂಧೀಜಿ' ಎಂಬ ಶೀರ್ಷಿಕೆಯನ್ನು ಹೊಂದಿದೆ. ಎರಡನೇ ವಿಭಾಗವು 'ಗಾಂಧಿ ಒಬ್ಬ ವಕೀಲ' ಎಂಬ ಶೀರ್ಷಿಕೆಯನ್ನು ಹೊಂದಿದೆ.

ಇದನ್ನೂ ಓದಿ: ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಭೂಕಂಪ: ಮನೆಗಳಿಂದ ಓಡಿ ಬಂದ ಜನ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.