ಕೇಂದ್ರ ಸರ್ಕಾರದ ಗೃಹ ಇಲಾಖೆ ಅಡಿ ಬರುವ ಇಂಡೋ- ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ)ಯಲ್ಲಿ ಖಾಲಿ ಇರುವ 458 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನ್ಸ್ಟೆಬಲ್ ಡ್ರೈವರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವಾಹನ ಚಾಲನೆಯಲ್ಲಿ ತರಬೇತಿ ಹೊಂದಿರುವ, ಎಸ್ಎಸ್ಎಲ್ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ: ಕಾನ್ಸ್ಟೆಬಲ್ ಡ್ರೈವರ್ ನಲ್ಲಿ ಖಾಲಿ ಇರುವ ಒಟ್ಟು 458 ಹುದ್ದೆಗಳ ಭರ್ತಿಗೆ ಮುಂದಾಗಲಾಗಿದೆ.
ವಿದ್ಯಾರ್ಹತೆ: ಅಭ್ಯರ್ಥಿಗಳು ಅಂಗೀಕೃತ ಶಿಕ್ಷಣ ಮಂಡಳಿಯಿಂದ ಎಸ್ಎಸ್ಎಲ್ಸಿ ಶಿಕ್ಷಣ ಪಡೆದಿರಬೇಕು. ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
ವಯೋಮಿತಿ: ವಯೋಮಿತಿ ಕನಿಷ್ಠ 21 ರಿಂದ ಗರಿಷ್ಠ 27 ವರ್ಷ. 27-07-1996ಕ್ಕಿಂತ ನಂತರ ಜನಿಸಿದ ಮತ್ತು ಜುಲೈ 26- 2002ರ ಒಳಗೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ನಿವೃತ್ತ ಸೇವಾ ನೌಕರರಿಗೆ ಯಾವುದೇ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ 100 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ: ಅಭ್ಯರ್ಥಿಗಳ ದೈಹಿಕ ಪರೀಕ್ಷೆ (ಪಿಇಟಿ), ದೈಹಿಕ ಗುಣಮಟ್ಟ ಪರೀಕ್ಷೆ (ಪಿಎಸ್ಟಿ), ಲಿಖಿತ ಪರೀಕ್ಷೆ, ಮೂಲ ಪ್ರತಿಗಳ ಪರಿಶೀಲನೆ, ಪ್ರಾಯೋಗಿಕ ಪರೀಕ್ಷೆ ಮತ್ತು ಮೆಡಿಕಲ್ ಪರೀಕ್ಷೆ ಹಾಗೂ ರಿವ್ಯೂ ಮೆಡಿಕಲ್ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಜೂನ್ 27 ರಿಂದ ಆರಂಭವಾಗಿದ್ದು, ಜುಲೈ 27ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಈ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಆಗಸ್ಟ್ 10ರ ವರೆಗೆ ವಿಸ್ತರಣೆ ಮಾಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಆನ್ಲೈನ್ನಲ್ಲಿ ನಿಗದಿಸಲಾದ ಸರಿಯಾದ ಮಾಹಿತಿ ಮತ್ತು ವಿವರಗಳನ್ನು ನೀಡಬೇಕು. ಶೈಕ್ಷಣಿಕ ಅರ್ಹತೆ ಮತ್ತು ದಾಖಲೆಗಳ ಕುರಿತು ವಿವರಗಳನ್ನು ಭರ್ತಿ ಮಾಡಬೇಕು. ಅರ್ಜಿ ಶುಲ್ಕ ಮಾಹಿತಿ ಭರಿಸಿ ಬಳಿಕ ಸಲ್ಲಿಕೆ ಬಟನ್ ಕ್ಲಿಕ್ ಮಾಡಬೇಕು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹುದ್ದೆಗಳ ಕುರಿತು ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ recruitment.itbpolice.nic.in ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು.
ಇದನ್ನೂ ಓದಿ: ಬೆಂಗಳೂರಿನ ಐಐಎಸ್ಸಿಯಲ್ಲಿ ಜೆಇ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ