ಛತ್ತೀಸ್ಗಢ : ನಕ್ಸಲ್ ಪೀಡಿತ ಪ್ರದೇಶವಾದ ಛತ್ತೀಸ್ಗಢದ ಕೊಂಡಗಾಂವ್ನಲ್ಲಿರುವ ಶಾಲಾ ವಿದ್ಯಾರ್ಥಿಗಳಿಗಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸ್ಮಾರ್ಟ್ ಕ್ಲಾಸ್ ಆರಂಭಿಸಿದ್ದಾರೆ.
ಕೊಂಡಗಾಂವ್, ರೆಡ್ ಝೋನ್ಗಳ ಪಟ್ಟಿಯಲ್ಲಿದೆ. ರಿಮೋಟ್ ಗ್ರಾಮಗಳಲ್ಲಿನ ಮಕ್ಕಳು ಇತ್ತ ಶಾಲೆಯೂ ಪ್ರಾರಂಭವಾಗದೇ, ಅತ್ತ ಆನ್ಲೈನ್ ತರಗತಿಗಳಿಂದಲೂ ವಂಚಿತರಾಗಿದ್ದಾರೆ. ಹೀಗಾಗಿ, ಐಟಿಬಿಪಿಯ 41ನೇ ಬೆಟಾಲಿಯನ್ ಸಿಬ್ಬಂದಿ ಇಂಟರ್ನೆಟ್ ಆಧಾರಿತ ತರಗತಿಗಳನ್ನು ಆಯೋಜಿಸಿದೆ.
ಇದನ್ನೂ ಓದಿ: ವಾಘಾ-ಅಟ್ಟಾರಿ ಗಡಿಯಲ್ಲಿ ಈ ಬಾರಿಯ ಬೀಟಿಂಗ್ ರಿಟ್ರೀಟ್ ರದ್ದು
ಕಂಪ್ಯೂಟರ್ಗಳು ಮತ್ತು ಪ್ರೊಜೆಕ್ಟರ್ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಪದವೀಧರ ಐಟಿಬಿಪಿ ಸಿಬ್ಬಂದಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಯೂಟ್ಯೂಬ್ ಮತ್ತು ಇ-ಲರ್ನಿಂಗ್ ವೆಬ್ಸೈಟ್ಗಳಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಕಲಿಯಲು ಅವಕಾಶ ಮಾಡಿಕೊಡುತ್ತಿದ್ದಾರೆ. ಸುಮಾರು 50 ವಿದ್ಯಾರ್ಥಿಗಳು ಇದರ ಸಹಾಯ ಪಡೆದುಕೊಂಡಿದ್ದಾರೆ.