ETV Bharat / bharat

ತಾಜ್​ ಮಹಲ್ ಬಳಿ ಹಿಂದೂ ಸಂಪ್ರದಾಯದಂತೆ ಇಟಲಿ ದಂಪತಿಯ ಮರುಮದುವೆ - ಈಟಿವಿ ಭಾರತ ಕನ್ನಡ

ಆಗ್ರಾದ ತಾಜ್ ಮಹಲ್ ಬಳಿ ಇಟಲಿ ದೇಶದ ದಂಪತಿ ತಮ್ಮ 40 ವರ್ಷದ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಹಿಂದೂ ಸಂಪ್ರದಾಯದಂತೆ ಮರು ಮದುವೆಯಾದರು.

italian-couple-married-again-with-hindu-customs-on-40th-anniversary
ತಾಜ್​ ಮಹಲ್ ಬಳಿ ಹಿಂದೂ ಸಂಪ್ರದಾಯದಂತೆ ಇಟಲಿ ದಂಪತಿ ಮರುಮದುವೆ
author img

By

Published : Dec 6, 2022, 8:31 PM IST

ಆಗ್ರಾ (ಉತ್ತರ ಪ್ರದೇಶ): ಪ್ರೀತಿಯ ಸಂಕೇತವಾದ ತಾಜ್ ಮಹಲ್ ಇಡೀ ಜಗತ್ತನ್ನು ತನ್ನತ್ತ ಆಕರ್ಷಿಸಿದೆ. ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಭಾರತೀಯ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಮಾರು ಹೋಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇಟಲಿಯ ದಂಪತಿ ಆಗ್ರಾದ ತಾಜ್​ ಮಹಲ್​ ಬಳಿ ಹಿಂದೂ ಸಂಪ್ರದಾಯದಂತೆ ಮರುಮದುವೆಯಾಗಿದ್ದಾರೆ.

ತಾಜ್​ ಮಹಲ್​ ವೀಕ್ಷಿಸಲು ಬಂದಿದ್ದರು: ತಾಜ್ ಮಹಲ್‌ ವೀಕ್ಷಿಸಲು ಇಟಲಿಯಿಂದ ಆಗಮಿಸಿದ್ದ ಮೌರೊ ಮತ್ತು ಸ್ಟೆಫಾನಿಯಾ ತಮ್ಮ 40ನೇ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಲು ಬಯಸಿದ್ದರು. ಈ ನಿಮಿತ್ತ ಭಾರತೀಯ ಹಿಂದೂ ಸಂಪ್ರದಾಯದೊಂದಿಗೆ ಮರುಮದುವೆ ಮಾಡಿಕೊಳ್ಳಲು ಬಯಸಿದ್ದರು. ಈ ಸಂಬಂಧ ಎಂಟಿಎ ಗ್ರೂಪ್‌ನ ಮನೀಶ್ ಶರ್ಮಾ ಎಂಬವರನ್ನು ಈ ದಂಪತಿ ಸಂಪರ್ಕಿಸಿದ್ದಾರೆ. ಮನೀಶ್​ ಅವರು ತಾಜ್ ಬಳಿಯ ರೆಸಾರ್ಟ್‌ವೊಂದರಲ್ಲಿ ಮದುವೆಗೆ ಸಿದ್ಧತೆ ನಡೆಸಿದ್ದಾರೆ.

italian-couple-married-again-with-hindu-customs-on-40th-anniversary
ತಾಜ್​ ಮಹಲ್ ಬಳಿ ಹಿಂದೂ ಸಂಪ್ರದಾಯದಂತೆ ಇಟಲಿ ದಂಪತಿ ಮರುಮದುವೆ

ವಿದೇಶಿ ದಂಪತಿಗಳ ಮದುವೆಯು ಹಿಂದೂ ಸಂಪ್ರದಾಯದಂತೆ ನೆರವೇರಿದೆ. ಪಂಡಿತ್ ಪ್ರವೀಣ್ ದತ್ ಶರ್ಮಾ ನೇತೃತ್ವದಲ್ಲಿ ಮೌರೋ ತಮ್ಮ ಪತ್ನಿಯ ಕೊರಳಿಗೆ ಮಂಗಳಸೂತ್ರ ಕಟ್ಟಿದರು. 'ನವಜೋಡಿ' ಎಲ್ಲರೊಂದಿಗೆ ನೃತ್ಯ ಮಾಡಿ ಸಂತಸಪಟ್ಟರು. 5 ವರ್ಷಗಳ ಹಿಂದೆಯೇ ನಾವು ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದು, ಇದೀಗ ಕನಸು ನನಸಾಗಿದೆ ಎಂದು ಹೇಳಿದರು.

ಅಷ್ಟೇ ಅಲ್ಲ, ಏಳೇಳು ಜನ್ಮಗಳಲ್ಲೂ ನಾವು ಒಂದಾಗಿರಲು ಬಯಸುತ್ತೇವೆ. ಹಿಂದೂ ಸಂಸ್ಕೃತಿಯನ್ನು ತುಂಬಾ ಇಷ್ಟಪಡುತ್ತೇವೆ. ಅದಕ್ಕಾಗಿಯೇ ಮರುಮದುವೆ ಮಾಡಿಕೊಂಡಿದ್ದೇವೆ ಎಂದು ಮೌರೋ ದಂಪತಿ ಹೇಳಿದರು. ಪಂಡಿತ್ ಪ್ರವೀಣ್ ದತ್ ಶರ್ಮಾ ಮಾತನಾಡಿ, ಭಾರತೀಯರು ತಮ್ಮ ಸನಾತನ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಆದರೆ ನಮ್ಮ ಮೌಲ್ಯಗಳನ್ನು ವಿದೇಶದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಭೂಕುಸಿತದಿಂದ ಹಾಳಾಗಿರುವ ರಸ್ತೆ ಸರಿಪಡಿಸುವಂತೆ ಧರಣಿ ಕುಳಿತ ವರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.