ETV Bharat / bharat

ಒಂದು ವರ್ಷದಲ್ಲಿ ಜನ ಜೀವನ ಸಾಮಾನ್ಯ ಸ್ಥಿತಿಗೆ ಬರುತ್ತೆ: ಆದ್ರೆ ಈ 3 ನಿಯಮ ಪಾಲಿಸಿದ್ರೆ ಮಾತ್ರ - ತಜ್ಞ ವೈದ್ಯ

ಮೂರನೆಯ ಅಲೆ ಅಥವಾ ಇನ್ನೊಂದು ವೈರಸ್ ರೂಪಾಂತರದ ಸಾಧ್ಯತೆ ಇದೆಯೇ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಕೊರೊನಾ ನಿಯಂತ್ರಣಕ್ಕೆ ತರಲು ಸರ್ಕಾರ ಲಸಿಕೆಗಳನ್ನು ಪರಿಚಯಿಸಿದೆ. ವ್ಯಾಕ್ಸಿನೇಷನ್ ಶೀತ, ಕೆಮ್ಮು ಸೇರಿದಂತೆ ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಪರಿಣಾಮ ಉಂಟುಮಾಡುತ್ತದೆ. ಜನ ಜೀವನ ಸಾಮಾನ್ಯ ಸ್ಥಿತಿಗೆ ಬರಲು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಡಾ.ತತ್ಯರಾವ್ ಲಹಾನೆ ಹೇಳಿದ್ದಾರೆ.

Covid
Covid
author img

By

Published : May 1, 2021, 5:55 PM IST

ಮುಂಬೈ: ಮಹಾರಾಷ್ಟ್ರದಲ್ಲಿ ರೂಪಾಂತರಿ ಕೋವಿಡ್ ಸೋಂಕಿನ ಅಪಾಯ ಹೆಚ್ಚಾಗಿದೆ. ಜನರು ಕನಿಷ್ಠ ಒಂದು ವರ್ಷದ ತನಕ ವೈರಸ್ ವಿರುದ್ಧ ತಮ್ಮ ರಕ್ಷಣಾತ್ಮಕ ಹೋರಾಟ ನಿಲ್ಲಿಸಬಾರದು. ಲಸಿಕೆಯೊಂದು 'ವರದಾನ' ಮತ್ತು 'ಪರಿಣಾಮಕಾರಿ ನಿಯಂತ್ರಕ ಮಾಪನ'ವಾಗಿದೆ. ನಾಗರಿಕರಿಗೆ ಮೂಲ ನಿಯಮ (ಟ್ರಿನಿಟಿ ರೂಲ್) ಪಾಲಿಸುವಂತೆ ಮಹಾರಾಷ್ಟ್ರ ಕೋವಿಡ್ -19 ಟಾಸ್ಕ್ ಫೋರ್ಸ್ ಸದಸ್ಯ ಡಾ.ತತ್ಯರಾವ್ ಲಹಾನೆ ಈಟಿವಿ ಭಾರತ ಮುಖೇನ ಮನವಿ ಮಾಡಿದರು.

ಲಸಿಕೆ ಒಂದೇ ಪರಿಹಾರ:

ಮೂರನೇ ಅಲೆ ಅಥವಾ ಇನ್ನೊಂದು ವೈರಸ್ ರೂಪಾಂತರದ ಸಾಧ್ಯತೆಯಿದೆಯೆ ಎಂದು ನಾನು ಊಹಿಸಲು ಸಾಧ್ಯವಿಲ್ಲ. ಕೊರೊನಾ ನಿಯಂತ್ರಣಕ್ಕೆ ತರಲು ಸರ್ಕಾರ ಲಸಿಕೆಗಳನ್ನು ಪರಿಚಯಿಸಿದೆ. ವ್ಯಾಕ್ಸಿನೇಷನ್ ಶೀತ, ಕೆಮ್ಮು ಸೇರಿದಂತೆ ಸೌಮ್ಯ ರೋಗಲಕ್ಷಣಗಳನ್ನು ಮಾತ್ರ ಪರಿಣಾಮ ಉಂಟುಮಾಡುತ್ತದೆ. ಜನ ಜೀವನ ಸಾಮಾನ್ಯ ಸ್ಥಿತಿಗೆ ಬರಲು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದರು.

ಔಷಧಗಳು, ರೆಮ್ಡೆಸಿವಿರ್​ ಮತ್ತು ಆಮ್ಲಜನಕ ಯೋಜನೆ:

ಪೂರ್ವಭಾವಿ ಹಂತವಾಗಿ ಸಂಭವನೀಯ ಮೂರನೇ ಅಲೆಯಲ್ಲಿ ನೆರವಾಗುವಂತಹ ಔಷಧಗಳನ್ನು ಸಂಗ್ರಹಿಸಿ. ರೆಮ್ಡೆಸಿವಿರ್ ಇಂಜೆಕ್ಷನ್, ಆಮ್ಲಜನಕದ ಕೊರತೆ ಉಂಟಾಗದಂತೆ ಯೋಜನೆ ಹಾಕಿಕೊಳ್ಳಿ. ಗ್ರಾಮೀಣ ಪ್ರದೇಶದ ವೈದ್ಯರು ತಮ್ಮಲ್ಲಿರುವ ಯಾವುದೇ ರೀತಿಯ ಪ್ರಶ್ನೆಗಳ ಬಗ್ಗೆ ತಜ್ಞ ವೈದ್ಯರನ್ನು ಕೇಳಲು ಹಿಂಜರಿಯಬಾರದು. ರಾಜ್ಯದ ಕಾರ್ಯಪಡೆಯ ವೈದ್ಯರು ನಿಮಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು.

ಡಬಲ್ ಮಾಸ್ಕ್ ಧರಿಸಿ, ಟ್ರಿನಿಟಿ ನಿಯಮ ಅನುಸರಿಸಿ:

ಎರಡನೇ ಅಲೆ ರಾಜ್ಯವನ್ನು ಅಪ್ಪಳಿಸಿದ ನಂತರ ರೋಗಿಗಳ ಸಂಖ್ಯೆ ತಕ್ಷಣವೇ ಹೆಚ್ಚಾಯಿತು. ಈ ಕಾರಣದಿಂದಾಗಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ತತ್ಪರಿಣಾಮವಾಗಿ ರೋಗಿಗಳ ಸಂಖ್ಯೆಯಲ್ಲಿನ ಕಡಿತದ ಚಿತ್ರವನ್ನು ಕಾಣಬಹುದು. ಅದನ್ನು ನಿಯಂತ್ರಣಕ್ಕೆ ತರಲು, ಲಾಕ್‌ಡೌನ್ ಸಮಯವನ್ನು 15 ದಿನಗಳವರೆಗೆ ವಿಸ್ತರಿಸಲಾಗಿದೆ. ಈ ನಿರ್ಧಾರದಲ್ಲಿ ನಾಗರಿಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್​ ಧರಿಸಬೇಕು ಮೇಲಾಗಿ ಮೂರು - ಪದರದ ಮುಖಗವಸು ಧರಿಸಬೇಕು ಎಂದರು.

ನೀವು ಬಟ್ಟೆ ಮುಖವಾಡ ಧರಿಸಲು ಆರಿಸಿದರೆ, ಡಬಲ್ ಮಾಸ್ಕ್ ಧರಿಸುವುದು ಅವಶ್ಯವಿದೆ. ಎರಡು ಮುಖಗವಸುಗಳು ಸಹಾಯಕವಾಗುತ್ತವೆ. ಜನರು ಒಂದೇ ಸ್ಥಳದಲ್ಲಿ ಒಟ್ಟುಗೂಡಬಾರದು. ಸರಿಯಾದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಆಗಾಗ ಕೈ ತೊಳೆಯಬೇಕು ಹಾಗೂ ಸ್ಯಾನಿಟೈಸರ್ ಬಳಸುವ ಈ ಮೂರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಾಗರಿಕರು ಮನೆಯಲ್ಲಿಯೇ ಇದ್ದರೆ, ಅವರು ಕೊರೊನಾಗೆ ತುತ್ತಾಗುವುದಿಲ್ಲ ಎಂದು ಲಹಾನೆ ಹೇಳಿದರು.

ಸಾಮರ್ಥ್ಯಕ್ಕೆ ಅನುಗುಣವಾಗಿ ಲಸಿಕೆ:

ರಾಜ್ಯದಲ್ಲಿ 18 ರಿಂದ 44 ವರ್ಷದೊಳಗಿನ ವ್ಯಕ್ತಿಗಳಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ, ಎರಡು ಕಂಪನಿಗಳು ಭಾರತದಲ್ಲಿ ಲಸಿಕೆಗಳನ್ನು ತಯಾರಿಸುತ್ತವೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ರಾಜ್ಯದ ಜನಸಂಖ್ಯೆಗೆ ಲಭ್ಯವಿರುವ ಲಸಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಯೋಜಿಸಲಾಗುವುದು. ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ತ್ವರಿತವಾಗಿ ನಿರ್ವಹಿಸಲು ‘ಕೋವಿನ್’ ಆ್ಯಪ್ ರಚಿಸಲಾಗಿದೆ. ಈ ಆ್ಯಪ್ ಮೂಲಕ ನೋಂದಣಿ ಮಾಡಿದ ನಂತರವೇ ಲಸಿಕೆ ಲಭ್ಯವಿರುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.