ETV Bharat / bharat

ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿಗೆ ಸೇರಿದ 40 ಸ್ಥಳಗಳಲ್ಲಿ ಐಟಿ ದಾಳಿ - ಸೆಂಥಿಲ್ ಬಾಲಾಜಿ

ತಮಿಳುನಾಡಿನ ಸಚಿವ ವಿ.ಸೆಂಥಿಲ್ ಬಾಲಾಜಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಇಂದು ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

TN Minister Senthil Balaji
ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ
author img

By

Published : May 26, 2023, 12:05 PM IST

ಚೆನ್ನೈ (ತಮಿಳುನಾಡು) : ರಾಜ್ಯದ ಇಂಧನ ಸಚಿವ ವಿ. ಸೆಂಥಿಲ್ ಬಾಲಾಜಿ ಅವರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ (IT) ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ಚೆನ್ನೈ, ಕೊಯಮತ್ತೂರು ಮತ್ತು ಕರೂರ್‌ ನಗರಗಳಲ್ಲಿ ಸಂಘಟಿತ ಶೋಧಗಳನ್ನು ಪ್ರಾರಂಭಿಸಿದ್ದಾರೆ. ಸಚಿವರೊಂದಿಗೆ ಸಂಪರ್ಕ ಹೊಂದಿರುವ ವಿವಿಧ ಸರ್ಕಾರಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸುಮಾರು 40 ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ಕಚೇರಿಯಲ್ಲಿ ಐಟಿ ಅಧಿಕಾರಿಗಳ ಶೋಧ ಕಾರ್ಯ

ಕಾರ್ಯಕರ್ತರ ನಡುವೆ ಘರ್ಷಣೆ: ಈ ಮಧ್ಯೆ, ಕರೂರ್ ಜಿಲ್ಲೆಯಲ್ಲಿ ಬಾಲಾಜಿ ಸಹೋದರ ಅಶೋಕ್ ಅವರ ಮನೆಯಲ್ಲಿ ಶೋಧ ನಡೆಸುತ್ತಿರುವ ಐಟಿ ಅಧಿಕಾರಿಗಳು ಮತ್ತು ಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಬಾಲಾಜಿ ಹಿರಿಯ ಡಿಎಂಕೆ ನಾಯಕ. ಕರೂರ್ ಕಾರ್ಪೋರೇಷನ್ ಮೇಯರ್ ಡಿಎಂಕೆಯ ಕವಿತಾ ಗಣೇಶನ್ ಸೇರಿದಂತೆ 200ಕ್ಕೂ ಹೆಚ್ಚು ಡಿಎಂಕೆ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಐಟಿ ಅಧಿಕಾರಿಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರು.

  • #WATCH | Clash breaks out between DMK workers and IT officials, who came to search the premises of Tamil Nadu Minister Senthil Balaji's brother Ashok, in Karur district. pic.twitter.com/D07qHz86c3

    — ANI (@ANI) May 26, 2023 " class="align-text-top noRightClick twitterSection" data=" ">

ಅಧಿಕಾರಿಗಳು ತಮ್ಮ ಗುರುತಿನ ಚೀಟಿ ತೋರಿಸಬೇಕು ಎಂದು ಒತ್ತಾಯಿಸಿದರು. ಅಧಿಕಾರಿಗಳು ಕಾರ್ಡ್‌ಗಳನ್ನು ತೋರಿಸಲು ನಿರಾಕರಿಸಿದ್ದರಿಂದ ಸ್ಥಳದಲ್ಲಿ ಗಲಾಟೆ ನಡೆಯಿತು. ಅಶೋಕ್ ಅವರ ಆಸ್ತಿಯ ಮೇಲೆ ಐಟಿ ದಾಳಿಯ ವೇಳೆ, ಸ್ಥಳವನ್ನು ಸುತ್ತುವರೆದ ಡಿಎಂಕೆ ಕಾರ್ಯಕರ್ತರು ಐಟಿ ಅಧಿಕಾರಿಗಳ ಕಾರಿನ ವಿಂಡ್‌ಶೀಲ್ಡ್ ಮತ್ತು ಹಿಂಬದಿಯ ಗ್ಲಾಸ್​​ನ್ನು ಒಡೆದಿದ್ದಾರೆ. ಇದರಿಂದಾಗಿ ಕೋಲಾಹಲ ಉಂಟಾಯಿತು.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಕರೂರ್​ನ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಏಪ್ರಿಲ್ 2, 2021 ರಂದು ನಡೆದ ದಾಳಿಯ ನಂತರ ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರನ ಆಸ್ತಿಗಳ ಮೇಲೆ ಇದು 2ನೇ ಐಟಿ ದಾಳಿಯಾಗಿದೆ.

ಇದನ್ನೂ ಓದಿ: ಬಾಲಾಜಿ ಶುಗರ್ಸ್​ ಕಾರ್ಖಾನೆ ಮೇಲೆ ಐಟಿ ದಾಳಿ

ಇತ್ತೀಚೆಗೆ ಎಐಎಡಿಎಂಕೆ ತೊರೆದು ಡಿಎಂಕೆ ಸೇರಿರುವ ಕೊಯಮತ್ತೂರು ಜಿಲ್ಲೆಯ ಅವಿನಾಸಿ ರಸ್ತೆಯ ಗೋಲ್ಡ್ ವಿನ್ಸ್ ಬಳಿ ಇರುವ ಸೆಂಥಿಲ್ ಕಾರ್ತಿಕೇಯನ್ ಅವರ ಮನೆ ಮೇಲೆ ಬೆಳಗ್ಗೆ 7.30 ರಿಂದ ದಾಳಿ ನಡೆಸಲಾಗುತ್ತಿದೆ. 10ಕ್ಕೂ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳು ಎರಡು ಗುಂಪುಗಳಾಗಿ ಶೋಧ ನಡೆಸುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಇತ್ತೀಚೆಗೆ ವಿಲ್ಲುಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿ ನಡೆದ ಕಳ್ಳಭಟ್ಟಿ ದುರಂತದ ಕಾರಣದಿಂದ ಬಾಲಾಜಿಯನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ತನಿಖೆಯನ್ನು ಪುನರಾರಂಭಿಸುವಂತೆ ಪೊಲೀಸ್ ಮತ್ತು ಇಡಿ ಕ್ರೈಂ ಬ್ರಾಂಚ್‌ಗೆ ಸುಪ್ರೀಂ ಕೋರ್ಟ್ ಆದೇಶ ನೀಡುವಂತೆ ಒತ್ತಾಯಿಸಿದ್ದರು. ಒಂದು ವೇಳೆ ಬಾಲಾಜಿ ಸಚಿವ ಸಂಪುಟದಲ್ಲಿ ಮುಂದುವರಿದರೆ ಅವರ ವಿರುದ್ಧ ನ್ಯಾಯಯುತ ತನಿಖೆ ಸಾಧ್ಯವಿಲ್ಲ ಎಂದು ಕೆ.ಅಣ್ಣಾಮಲೈ ಹೇಳಿದ್ದರು.

ಇದನ್ನೂ ಓದಿ: 300 ಐಟಿ ಅಧಿಕಾರಿಗಳನ್ನು ಕೈ ಅಭ್ಯರ್ಥಿಗಳ ಹಿಂದೆ ಬಿಟ್ಟಿದ್ದಾರೆ: ಎಂ.ಲಕ್ಷಣ್ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.