ETV Bharat / bharat

ತೆಲಂಗಾಣ ಸಚಿವ ಮಲ್ಲಾರೆಡ್ಡಿ, ನಿಕಟವರ್ತಿಗಳ ಮೇಲೆ ಐಟಿ ದಾಳಿ: 50 ತಂಡಗಳಿಂದ ಶೋಧ

ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಮಲ್ಲಾ ರೆಡ್ಡಿ ಗ್ರೂಪ್ ನಡೆಸುತ್ತಿರುವ ಸಂಸ್ಥೆಗಳ ಆದಾಯ ದಾಖಲೆಗಳನ್ನು ಐಟಿ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ತೆಲಂಗಾಣ ಸಚಿವ ಮಲ್ಲಾರೆಡ್ಡಿ, ನಿಕಟವರ್ತಿಗಳ ಮೇಲೆ ಐಟಿ ದಾಳಿ: 50 ತಂಡಗಳಿಂದ ಶೋಧ
it-raid-on-telangana-minister-mallareddy-close-associates-50-teams-search
author img

By

Published : Nov 22, 2022, 2:12 PM IST

ಹೈದರಾಬಾದ್: ತೆಲಂಗಾಣ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಮತ್ತು ಅವರ ಸಂಬಂಧಿಕರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಮಂಗಳವಾರ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದೆ. ಐಟಿ ತಂಡಗಳು ಹೈದರಾಬಾದ್, ಮೇಡಚಾಲ್ ಮತ್ತು ಮಲ್ಕಾಜ್‌ಗಿರಿ ಜಿಲ್ಲೆಗಳಲ್ಲಿರುವ ಸಚಿವರು, ಅವರ ಪುತ್ರ ಮಹೇಂದರ್ ರೆಡ್ಡಿ, ಅಳಿಯ ಮರ್ರಿ ರಾಜಶೇಖರ್ ರೆಡ್ಡಿ ಮತ್ತು ಇತರರ ಮನೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿವೆ.

ಐಟಿ ಇಲಾಖೆಯ ತೆರಿಗೆ ವಂಚನೆ ವಿಭಾಗದ ಸುಮಾರು 50 ತಂಡಗಳು ಮಂಗಳವಾರ ಬೆಳಗ್ಗೆ ಶೋಧ ಆರಂಭಿಸಿದ್ದು, ಕೊಂಪಲ್ಲಿಯಲ್ಲಿರುವ ಪಾಮ್ ಮಿಡೋಸ್ ವಿಲ್ಲಾಗಳಲ್ಲಿಯೂ ಶೋಧ ನಡೆಸಲಾಗಿದೆ. ಸುಮಾರು 150 ರಿಂದ 170 ಅಧಿಕಾರಿಗಳು ಏಕಕಾಲದಲ್ಲಿ ದಾಳಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಮಲ್ಲಾ ರೆಡ್ಡಿ ಗ್ರೂಪ್ ನಡೆಸುತ್ತಿರುವ ಸಂಸ್ಥೆಗಳ ಆದಾಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಮಲ್ಲಾ ರೆಡ್ಡಿ ಗ್ರೂಪ್ ವೈದ್ಯಕೀಯ ಕಾಲೇಜು, ದಂತ ಕಾಲೇಜು, ಆಸ್ಪತ್ರೆ ಮತ್ತು ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಐಟಿ ತಂಡಗಳು ಈ ಸಂಸ್ಥೆಗಳ ಉನ್ನತ ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳಲ್ಲಿಯೂ ಶೋಧ ನಡೆಸುತ್ತಿವೆ. ಮಂಗಳವಾರ ಪೂರ್ತಿ ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ.

ತೆಲಂಗಾಣದ ವಿಶೇಷ ತನಿಖಾ ತಂಡ (ಎಸ್‌ಐಟಿ) ಭಾರತೀಯ ಜನತಾ ಪಕ್ಷದ ಕೆಲವು ಉನ್ನತ ನಾಯಕರನ್ನು ಒಳಗೊಂಡಿರುವ ಶಾಸಕರ ಖರೀದಿ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಮಯದಲ್ಲಿಯೇ ಐಟಿ ದಾಳಿ ನಡೆದಿರುವುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: ಬೆಂಗಳೂರು: ಮಣಿಪಾಲ್ ಸಮೂಹ ಸಂಸ್ಥೆಗಳ ಮೇಲೆ ಐಟಿ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.