ನವದೆಹಲಿ: ಕರ್ನಾಟಕದಲ್ಲಿ ತಾರಕಕ್ಕೇರಿರುವ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಯಾವ ಬಟ್ಟೆ ಧರಿಸಬೇಕೆಂಬುದು ಹೆಣ್ಣು ಮಕ್ಕಳಿಗೆ ಬಿಟ್ಟಿದ್ದು. ಬಿಕಿನಿಯಾದರೂ ಧರಿಸಲಿ, ಮುಸುಕು ಆದರೂ ಧರಿಸಲಿ, ಜೀನ್ಸ್ ಆದರೂ ಹಾಕಲಿ ಅಥವಾ ಹಿಜಾಬ್ ಆದರೂ ಹಾಕಲಿ. ಅವರಿಗೆ ಬೇಕಾದ ಉಡುಪು ಧರಿಸುವ ಹಕ್ಕಿದೆ. ಭಾರತದ ಸಂವಿಧಾನವೇ ಇಂತಹ ಹಕ್ಕು ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಿ ಎಂದು ಹೇಳಿದ್ದಾರೆ.
-
Whether it is a bikini, a ghoonghat, a pair of jeans or a hijab, it is a woman’s right to decide what she wants to wear.
— Priyanka Gandhi Vadra (@priyankagandhi) February 9, 2022 " class="align-text-top noRightClick twitterSection" data="
This right is GUARANTEED by the Indian constitution. Stop harassing women. #ladkihoonladsaktihoon
">Whether it is a bikini, a ghoonghat, a pair of jeans or a hijab, it is a woman’s right to decide what she wants to wear.
— Priyanka Gandhi Vadra (@priyankagandhi) February 9, 2022
This right is GUARANTEED by the Indian constitution. Stop harassing women. #ladkihoonladsaktihoonWhether it is a bikini, a ghoonghat, a pair of jeans or a hijab, it is a woman’s right to decide what she wants to wear.
— Priyanka Gandhi Vadra (@priyankagandhi) February 9, 2022
This right is GUARANTEED by the Indian constitution. Stop harassing women. #ladkihoonladsaktihoon
ಕರ್ನಾಟಕದಲ್ಲಿ ಉಂಟಾಗಿರುವ ಹಿಜಾಬ್ ವಿಚಾರವಾಗಿ ನೊಬೆಲ್ ಶಾಂತಿ ಪುರಸ್ಕೃತೆ, ಮಕ್ಕಳ ಹೋರಾಟಗಾರ್ತಿ ಯೂಸೂಫ್ ಮಲಾಲಾ ಸಹ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಹೆಣ್ಣು ಮಕ್ಕಳು ಹಿಜಾಬ್ ಹಾಕಿಕೊಂಡು ಶಾಲೆಗೆ ಹೋಗುವುದನ್ನ ನಿರಾಕರಣೆ ಮಾಡಿರುವುದು ಅತ್ಯಂತ ಭಯಾನಕ. ಮಹಿಳೆಯರು ಬಟ್ಟೆ ಧರಿಸುವ ವಿಚಾರವಾಗಿ ಟೀಕಿಸುವ ಪ್ರಕ್ರಿಯೆ ಮುಂದುವರೆದಿದೆ. ಹೆಣ್ಣು ಮಕ್ಕಳು ಕಡಿಮೆ ಅಥವಾ ಹೆಚ್ಚು ಬಟ್ಟೆ ಧರಿಸುವುದಕ್ಕಾಗಿ ಟೀಕಿಸುವ ಸಂಪ್ರದಾಯ ನಿಲ್ಲಬೇಕು ಎಂದಿರುವ ಅವರು, ಮುಸ್ಲಿಂ ಮಹಿಳೆಯರನ್ನ ಕೀಳಾಗಿ ಕಾಣುವ ನೀತಿ ಕೊನೆಯಾಗಬೇಕು ಎಂದಿದ್ದಾರೆ.
ಕಳೆದ ಕೆಲ ದಿನಗಳಿಂದ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯದಲ್ಲಿ ಮೂರು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.