ETV Bharat / bharat

ಕ್ರಯೋಜನಿಕ್ ಹಂತದಲ್ಲಿ ತಾಂತ್ರಿಕ ತೊಂದರೆ; ಉಪಗ್ರಹವನ್ನು ಕಕ್ಷೆ ಸೇರಿಸುವಲ್ಲಿ ಇಸ್ರೋ ವಿಫಲ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಅತ್ಯಾಧುನಿಕ ಜಿಯೋ ಇಮೇಜಿಂಗ್ ಉಪಗ್ರಹವನ್ನು ನಿಗದಿತ ಕಕ್ಷೆ ಸೇರಿಸುವಲ್ಲಿ ವಿಪಲವಾಯಿತು. ಇಂದು ಮುಂಜಾನೆ 05.43ಕ್ಕೆ ಸರಿಯಾಗಿ ಉಪಗ್ರಹವನ್ನು ಹೊತ್ತು ಜಿಎಸ್‌ಎಲ್‌ವಿ-ಎಫ್‌ 10 ರಾಕೆಟ್‌ ನಭದತ್ತ ಜಿಗಿಯಿತು. ಆದರೆ, ಮಹತ್ವದ ಕ್ರಯೋಜನಿಕ್‌ ಹಂತದಲ್ಲಿ ಜ್ವಲನ ಪ್ರಕ್ರಿಯೆ ನಡೆಯದೆ ತಾಂತ್ರಿಕ ದೋಷವುಂಟಾಗಿ ಇಸ್ರೋ ಪ್ರಯತ್ನ ಫಲ ನೀಡಲಿಲ್ಲ.

ISRO's GSLV-F10 lifts off successfully from Sriharikota
ಜಿಎಸ್​​ಎಲ್​ವಿ ಎಫ್​ 10 ಯಶಸ್ವಿ ಉಡಾವಣೆ
author img

By

Published : Aug 12, 2021, 6:55 AM IST

Updated : Aug 12, 2021, 9:01 AM IST

ಶ್ರೀಹರಿಕೋಟ (ಆಂಧ್ರ ಪ್ರದೇಶ): ಅತ್ಯಾಧುನಿಕ ಜಿಯೋ ಇಮೇಜಿಂಗ್ ಉಪಗ್ರಹ ಇಒಎಸ್​-03 (Earth Observation Satellite-EOS) ಅನ್ನು ನಿಗದಿತ ಕಕ್ಷೆ ಸೇರಿಸುವಲ್ಲಿ ಇಸ್ರೋ ವಿಫಲವಾಗಿದೆ. ಇಂದು ಮುಂಜಾನೆ ಜಿಎಸ್ಎಲ್‌ವಿ-ಎಫ್ 10 ರಾಕೆಟ್ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆಯಾಗಿದ್ದು, ಕ್ರಯೋಜೆನಿಕ್ ಹಂತದಲ್ಲಿ ವೈಫಲ್ಯ ಅನುಭವಿಸಿದೆ.

  • GSLV-F10 launch took place today at 0543 Hrs IST as scheduled. Performance of first and second stages was normal. However, Cryogenic Upper Stage ignition did not happen due to technical anomaly. The mission couldn't be accomplished as intended.

    — ISRO (@isro) August 12, 2021 " class="align-text-top noRightClick twitterSection" data=" ">

ಉಪಗ್ರಹ ಉಡಾವಣೆಗೆ ನಿನ್ನೆ (ಬುಧವಾರ) ಮುಂಜಾನೆಯಿಂದಲೇ ಇಸ್ರೋ ಸಿದ್ದತೆಗಳನ್ನು ಪ್ರಾರಂಭಿಸಿತ್ತು. ಇಒಎಸ್​-03 ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಭೂ ಪರಿವೀಕ್ಷಣಾ ಉಪಗ್ರಹ ಇದಾಗಿದ್ದು ಜಿಎಸ್​ಎಲ್​ವಿ ಎಫ್​-10 ಲಾಂಚಿಂಗ್ ವೆಹಿಕಲ್ ಮೂಲಕ ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಬೇಕಿತ್ತು.

ಉಪಗ್ರಹದ ಉದ್ದೇಶವೇನಿತ್ತು?

ಬಾಹ್ಯಾಕಾಶದಿಂದ ಕಾಲಕಾಲಕ್ಕೆ ದೇಶದ ಅಗತ್ಯತೆಗಳಿಗೆ ಅನುಗುಣವಾಗಿ ಸ್ಪಷ್ಟವಾದ ಚಿತ್ರಗಳನ್ನು ಇಸ್ರೋ ಮಾಸ್ಟರ್‌ ಕಂಟ್ರೋಲ್ ರೂಂಗೆ ರವಾನಿಸುವುದು. ಮುಖ್ಯವಾಗಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಇದು ಸಹಕಾರಿಯಾಗಬೇಕಿತ್ತು.

Last Updated : Aug 12, 2021, 9:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.