ಲಕ್ನೋ: ಬಿಜೆಪಿ ನಾಯಕಿ ಮಾಲ್ತಿ ಶರ್ಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಕಾರ್ಪೊರೇಟರ್ ಮತ್ತು ಮಾಜಿ ಡಿಐಜಿ ಪಿ ಕೆ ಮಿಶ್ರಾ ಅವರ ಪತ್ನಿ ಅಲ್ಕಾ ಮಿಶ್ರಾ ಅವರಿಗೆ ಲಕ್ನೋದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ದಂಡಸಹಿತ ಜೀವಾವಧಿ ಶಿಕ್ಷೆ ವಿಧಿಸಿತು. ನ್ಯಾಯಾಧೀಶರಾದ ವಿ ಎಸ್ ತ್ರಿಪಾಠಿ ಸೋಮವಾರ ಶಿಕ್ಷೆ ಪ್ರಕಟಿಸಿ ಆದೇಶಿಸಿದರು. ಇತರ ಮೂವರು ಅಪರಾಧಿಗಳಾದ ರಾಜ್‌ಕುಮಾರ್ ರಾಯ್, ಅಲೋಕ್ ದುಬೆ ಮತ್ತು ರೋಹಿತ್ ಸಿಂಗ್ ಅವರಿಗೂ ಜೀವಾವಧಿ ಶಿಕ್ಷೆಯಾಗಿದೆ.
ಜೂನ್ 7, 2004 ರಂದು ಕುಕ್ರೈಲ್ ಸೇತುವೆಯ ಮೇಲೆ ನನ್ನ ಪತ್ನಿ ಮಾಲ್ತಿ ಶರ್ಮಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಆರೋಪಿಸಿ ಪ್ರೇಮ್ ನಾಥ್ ಶರ್ಮಾ ಜೂನ್ 2004 ರಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ಕೊಲೆಯಾಗಿ ಏಳು ವರ್ಷದ ಬಳಿಕ ಬದುಕಿ ಬಂದ ಮಹಿಳೆ.. ತಮ್ಮ ಮೇಲಿದ್ದ ಮರ್ಡರ್ ಕೇಸ್ಗೆ ತಾವೇ ತನಿಖಾಧಿಕಾರಿಗಳಾದ ಆರೋಪಿಗಳು!