ETV Bharat / bharat

ಆ್ಯಪಲ್​ ಕಂಪನಿಯಿಂದ ಒಎಸ್​​-15 ಮೊಬೈಲ್ ರಿಲೀಸ್.. ವಿಶೇಷತೆಗಳು ಹೀಗಿವೆ! - ಆ್ಯಪಲ್​ ಕಂಪನಿಯಿಂದ ಒಎಸ್​​-15 ಮೊಬೈಲ್ ರಿಲೀಸ್

ಬಳಕೆದಾರರು ಫೇಸ್‌ಟೈಮ್​ನ ಕರೆಗಳ ಸಮಯದಲ್ಲಿ ಮ್ಯೂಸಿಕ್ ಮತ್ತು ವಿಡಿಯೋ ಶೇರ್ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಫೇಸ್​ಟೈಮ್ ಬಳಕೆ ಮಾಡುವಾಗ ಇತರ ಸಂದೇಶ ಕಳಿಸುವ ಲಿಂಕ್​ನೊಂದಿಗೆ ಹೊಸ ಬ್ರೌಸರ್​ ಓಪನ್ ಆಗುತ್ತದೆ.

ಒಎಸ್​​-15 ಮೊಬೈಲ್ ರಿಲೀಸ್
ಒಎಸ್​​-15 ಮೊಬೈಲ್ ರಿಲೀಸ್
author img

By

Published : Jun 8, 2021, 4:34 PM IST

ನವದೆಹಲಿ: ಆ್ಯಪಲ್​ ಕಂಪನಿಯು ಒಎಸ್​​-15 ಮೊಬೈಲ್​ ಅನ್ನು ರಿಲೀಸ್ ಮಾಡಿದೆ. ಇದು ಫೇಸ್​ಟೈಮ್​​, ನೋಟಿಫಿಕೇಶನ್​​ ಹಾಗೂ ಇನ್ನಿತರ ಹಲವು ಬದಲಾವಣೆಗಳನ್ನು ಮಾಡಿದೆ. ಫೇಸ್​ಟೈಮ್​​ ಆ್ಯಪ್​​​ ಪ್ರಾದೇಶಿಕ ಆಡಿಯೋ ಮತ್ತು ಧ್ವನಿ ಪ್ರತ್ಯೇಕತೆಯ ವೈಶಿಷ್ಟ್ಯವನ್ನು ಹೊಂದಿದೆ.

ಬಳಕೆದಾರರು ಫೇಸ್‌ಟೈಮ್​ನ ಕರೆಗಳ ಸಮಯದಲ್ಲಿ ಮ್ಯೂಸಿಕ್ ಮತ್ತು ವಿಡಿಯೋ ಶೇರ್ ಮಾಡಬಹುದು. ಆಂಡ್ರಾಯ್ಡ್ ಬಳಕೆದಾರರು ಫೇಸ್​ಟೈಮ್ ಬಳಕೆ ಮಾಡುವಾಗ ಇತರ ಸಂದೇಶ ಕಳಿಸುವ ಲಿಂಕ್​ನೊಂದಿಗೆ ಹೊಸ ಬ್ರೌಸರ್​ ಓಪನ್ ಆಗುತ್ತದೆ.

ಕಂಪನಿಯು ತನ್ನ WWDC21 ವರ್ಚುಯಲ್ ಅಭಿಯಾನದಲ್ಲಿ ಈ ಬಗ್ಗೆ ಘೋಷಿಸಿದೆ. ಶ್ರವಣ ತೊಂದರೆ ಇರುವವರಿಗೆ ಈ ಫ್ಯೂಚರ್​ಗಳು ಅನುಕೂಲವಾಗಲಿವೆ. ಏರ್‌ಪಾಡ್‌ಗಳು ಇತರ ಪ್ರಮುಖ ಓದುವ ಸಾಮರ್ಥ್ಯ ಸಹ ಪಡೆಯುತ್ತವೆ. ಇಂಟರ್​ನೆಟ್ ಸಂಪರ್ಕವಿಲ್ಲದೆ, ಪೂರ್ವನಿಯೋಜಿತವಾಗಿ ಆಡಿಯೊ ಆನ್ - ಡಿವೈಸ್ ಅನ್ನು ವೇಗವಾಗಿ ಪ್ರಕ್ರಿಯೆಗೊಳಿಸುತ್ತದೆ. ಆಪಲ್ ತನ್ನ ವಾಲೆಟ್ ಅಪ್ಲಿಕೇಶನ್‌ಗೆ ಮುಂಬರುವ ನವೀಕರಣವನ್ನು ಸಹ ಘೋಷಿಸಿತು. ಅದು ಯುಎಸ್ ಏರ್ಪೋರ್ಟ್​​ಗಳಲ್ಲಿ ನಿಮ್ಮ ಐಫೋನ್ ಅನ್ನು ಡಿಜಿಟಲ್ ಗುರುತಿನಂತೆ ಬಳಸಲು ಅನುಮತಿಸುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.