ETV Bharat / bharat

ಮರಳಿನಲ್ಲಿ ಅರಳಿದ ಮಹಿಳಾ ಪ್ರಪಂಚ - ನಾರಿಶಕ್ತಿ ಪುರಸ್ಕಾರ

ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳಾ ಸಾಧಕಿಯರ ಗೌರವಿಸುವ ಮೂಲಕ ಲಿಂಗ ಸಮಾನತೆಯನ್ನು ಸಾರಬೇಕಿದೆ. ಒಡಿಶಾದಲ್ಲಿ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಮಹಿಳಾ ಪ್ರಪಂಚವನ್ನೇ ಚಿತ್ರಿಸಿರುವುದು ಗಮನ ಸೆಳೆಯುತ್ತಿದೆ.

international-womens-day
ಮರಳಿನಲ್ಲಿ ಅರಳಿದ ಮಹಿಳಾ ಪ್ರಪಂಚ
author img

By

Published : Mar 8, 2023, 7:24 AM IST

Updated : Mar 8, 2023, 5:12 PM IST

ನವದೆಹಲಿ: "ಹೆಣ್ಣಿಂದಲೇ ಜಗವೆಲ್ಲ, ಹೆಣ್ಣಿಲ್ಲದೇ ಏನಿಲ್ಲ" ಎಂಬ ಸಾಲು ಅದೆಷ್ಟು ಅರ್ಥಗರ್ಭಿತವೋ ಅಷ್ಟೇ ಪ್ರಸ್ತುತ. ಪ್ರತಿವರ್ಷದಂತೆ ಈ ವರ್ಷವೂ ಮಾರ್ಚ್​ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ. ಸ್ತ್ರೀತ್ವವನ್ನು, ಸ್ತೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸಂಭ್ರಮಿಸುವ ದಿನವಾಗಿದೆ.

ವಿಶ್ವದಲ್ಲಿ ಅನೇಕ ಮಹಿಳೆಯರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ, ಅವರನ್ನು ಸನ್ಮಾನಿಸುವ ದಿನವಿಂದು. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನೂ ನೀಡಬೇಕಿದೆ. ಮಹಿಳಾ ದಿನದ ವಿಶೇಷತೆ ಮತ್ತು ಅದರ ಇತಿಹಾಸ ಮತ್ತು ಈ ವರ್ಷದ ಥೀಮ್​ ಏನೆಂಬುದನ್ನು ತಿಳಿಯೋಣ.

ಇತಿಹಾಸ ಅರಿಯೋಣ: ವಿಶ್ವಸಂಸ್ಥೆಯು ಮಹಿಳೆಯರನ್ನು ಗೌರವಿಸುವ ಮತ್ತು ಅವರ ಕೊಡುಗೆಯನ್ನು ಅಭಿನಂದಿಸಲು 1975 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಆರಂಭಿಸಿತು. 1977 ರಲ್ಲಿ ಸಾಮಾನ್ಯ ಸಭೆಯು ಮಹಿಳೆಯರ ಹಕ್ಕುಗಳ ಮತ್ತು ಜಾಗತಿಕ ಶಾಂತಿಯನ್ನು ಬೆಂಬಲಿಸಲು ಮಾರ್ಚ್​ ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿವರ್ಷ ಒಂದು ಥೀಮ್​ನೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಈ ದಿನದ ಆಚರಣೆಯ ಮೂಲಕ ಮಹಿಳೆಯರ ಸಾಧನೆ ಮತ್ತು ಕೊಡುಗೆಯನ್ನು ಜಗತ್ತಿಗೇ ಸಾರಿ ಹೇಳುವ ಮೂಲಕ ಲಿಂಗಸಮಾನತೆ ಎತ್ತಿಹಿಡಿಯುವುದು ಇದರ ಹಿಂದಿನ ಉದ್ದೇಶ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಹೊತ್ತು ನೀಡುವುದೂ ಪ್ರಮುಖ ಅಂಶವಾಗಿದೆ. ಅಪ್ರತಿಮ ಸಾಧನೆ ಮಾಡಿದ ಮಹಿಳಾ ಸಾಧಕಿಯರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸುವ ಮೂಲಕ ಮತ್ತಷ್ಟು ಸಾಧನೆ ಮಾಡಲು ಪ್ರೇರೇಪಣೆ ನೀಡುವುದಾಗಿದೆ. ಪ್ರತಿ ವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುವ ಮೂಲಕ ಶಾಂತಿ, ಸುರಕ್ಷತೆ, ಸಾಕ್ಷರತೆಯ ಸಾಧನೆಯಲ್ಲಿ ಮಹಿಳೆಯರ ಸಹಭಾಗಿತ್ವವನ್ನು ಪುರುಷ ಸಮಾನವಾಗಿ ಬಿಂಬಿಸುವುದಾಗಿದೆ. ಅಷ್ಟೇ ಅಲ್ಲದೇ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದಕ್ಕೂ ಈ ದಿನ ಸಹಕಾರಿಯಾಗಿದೆ.

2023 ರ ಮಹಿಳಾ ದಿನದ ಥೀಮ್​: ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಕ್ಕಾಗಿ ವಿಶ್ವಸಂಸ್ಥೆ ನವೀನವಾದ ಥೀಮ್​ ರೂಪಿಸಿದೆ. "ಲಿಂಗ ಸಮಾನತೆಗಾಗಿ ನಾವೀನ್ಯತೆ ಮತ್ತು ತಂತ್ರಜ್ಞಾನ" ಎಂಬ ಘೋಷಣೆ ಹೊರಡಿಸಿದೆ.

ನಾರಿಶಕ್ತಿ ಪುರಸ್ಕಾರ: ಕೇಂದ್ರ ಸರ್ಕಾರ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಅವರಿಗೆ "ನಾರಿ ಶಕ್ತಿ ಪುರಸ್ಕಾರ" ನೀಡುತ್ತಿದೆ.

ಡಿಜಿಟಲ್​, ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿ: ಮಹಿಳೆಯರು ಡಿಜಿಟಲ್​ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಅಲ್ಲದೇ, ಏಷ್ಯಾ ವಲಯ ಸೇರಿದಂತೆ ವಿಶ್ವದ ಎಲ್ಲೆಡೆ ಮಹಿಳೆಯರು ಅಂತರ್ಜಾಲ ಮತ್ತು ಮೊಬೈಲ್​ ಫೋನ್​ಗಳ ಬಳಕೆ ಮೂಲಕ ತಾಂತ್ರಿಕ ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದೆ.

ಲಿಂಗ ಸಮಾನತೆಯನ್ನು ವೇಗಗೊಳಿಸುವ ಸಲುವಾಗಿ ಪ್ರತಿ ಮಹಿಳೆ ಮತ್ತು ಹುಡುಗಿ ತಾಂತ್ರಿಕ ನೈಪುಣ್ಯತೆ ಸಾಧಿಸಬೇಕು. ಅದು ಏಷ್ಯಾ ವಲಯದಲ್ಲಿ ತುಸು ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಏಷ್ಯಾ ಭಾಗ ಸೇರಿದಂತೆ ವಿಶ್ವದೆಲ್ಲೆಡೆ ಮಹಿಳೆಯರು ತಂತ್ರಜ್ಞಾನ ಮತ್ತು ಡಿಜಿಟಲ್​ ವಲಯದಲ್ಲಿ ಅಭಿವೃದ್ಧಿ ಕಾಣಬೇಕು ಎಂದು ಹೇಳಿದೆ.

ಏಷ್ಯಾ ವಲಯದಲ್ಲಿ ಶೇ.75 ಪುರುಷರು ಅಂತರ್ಜಾಲವನ್ನು ಬಳಕೆ ಮಾಡಿದರೆ, ಮಹಿಳೆಯರ ಪಾಲು ಶೇ.61 ಮಾತ್ರ ಇದೆ. ಮಹಿಳೆಯರು ಮೊಬೈಲ್ ಫೋನ್‌ಗಳ ಬಳಕೆಯಲ್ಲಿ ಶೇ.12 ರಷ್ಟು ಕಡಿಮೆ ಇದ್ದಾರೆ. ತಮ್ಮದೇ ಮೊಬೈಲ್ ಫೋನ್‌ಗಳನ್ನು ಹೊಂದಿರದವರಲ್ಲಿ ಮಹಿಳೆಯರ ಪ್ರಮಾಣ 39 ಪ್ರತಿಶತದಷ್ಟಿದೆ. ಇದು ತಾಂತ್ರಿಕ ಪ್ರಗತಿಗೆ ಅಡಚಣೆಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಆರೋಗ್ಯ ಕ್ಷೇತ್ರದಲ್ಲೂ ಇದೇ ರೀತಿಯ ಅಸಮಾನತೆಗಳಿವೆ. ಮಹಿಳೆಯರು ಜಾಗತಿಕವಾಗಿ ಆರೋಗ್ಯ ಕ್ಷೇತ್ರದಲ್ಲಿ ಸುಮಾರು 70% ಮಾತ್ರ ಇದ್ದಾರೆ. ಇದರಲ್ಲಿ ಕೇವಲ 25 ಪ್ರತಿಶತ ಮಾತ್ರ ಮುಖ್ಯ ವಾಹಿನಿಯಲ್ಲಿದ್ದಾರೆ. ಇದು ಆರೋಗ್ಯ ಕ್ಷೇತ್ರದಲ್ಲಿನ ಅನಾರೋಗ್ಯ ಭಾಗವಹಿಸುವಿಕೆಯಾಗಿದೆ. ಹೀಗಾಗಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗಬೇಕು ಎಂದು ಹೇಳಿದೆ.

ಮರಳಲ್ಲಿ ಮಹಿಳಾ ಪ್ರಪಂಚ: ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮರಳಿನಲ್ಲಿ ಮಹಿಳಾ ಪ್ರಪಂಚವನ್ನು ಅರಳಿಸಿದ್ದಾರೆ. ಹೆಣ್ಣು ಏನೆಲ್ಲಾ ಪಾತ್ರಗಳನ್ನು ನಿಭಾಯಿಸುತ್ತಾಳೆ ಎಂಬುದನ್ನು ಸುಂದರವಾಗಿ ಚಿತ್ರಿಸಿದ್ದಾರೆ.

ಇದನ್ನೂ ಓದಿ: 1 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯಾಗಿ ಕರ್ನಾಟಕ: ಕ್ರಿಯಾ ಯೋಜನೆ ಬಿಡುಗಡೆ

Last Updated : Mar 8, 2023, 5:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.