ETV Bharat / bharat

ಮಸಾಜ್​ ಹೆಸರಲ್ಲಿ ಸೆಕ್ಸ್​ ದಂಧೆ​.. ಸ್ಪಾ ಕೇಂದ್ರದಲ್ಲಿ ವಿದೇಶಿಯರು ಸೇರಿ 12 ಯುವತಿಯರ ಬಂಧನ

ದೆಹಲಿಯ ಸ್ಪಾ ಕೇಂದ್ರದಲ್ಲಿ ಬಾಡಿ ಮಸಾಜ್ ಹೆಸರಿನಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಸೆಕ್ಸ್​ ದಂಧೆಯನ್ನು ಪೊಲೀಸರು ಭೇದಿಸಿದ್ದು, ವಿದೇಶಿಯರು ಸೇರಿ 12 ಮಂದಿಯನ್ನು ಬಂಧಿಸಲಾಗಿದೆ.

international-sex-racket
ದೆಹಲಿಯಲ್ಲಿ ಸೆಕ್ಸ್​ ರಾಕೆಟ್​ ಬಯಲು
author img

By

Published : Dec 15, 2022, 1:07 PM IST

ನವದೆಹಲಿ: ದೇಹಕ್ಕೆ ಮುದನೀಡುವ ಸ್ಪಾ ಮಸಾಜ್​ ಸೋಗಿನಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಸೆಕ್ಸ್​ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. 7 ವಿದೇಶಿಯರು ಸೇರಿದಂತೆ 12 ಯುವತಿ ಮತ್ತು ಓರ್ವ ಸಿಬ್ಬಂದಿಯನ್ನು ಬಂಧಿಸಲಾಗಿದೆ. ನಗರದ ರಿಷಭ್ ವಿಹಾರ್​ದಲ್ಲಿರುವ​ ಸ್ಪಾ ಮಸಾಜ್ ಸೆಂಟರ್​ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಂಡ ರಚಿಸಿದ ಪೊಲೀಸ್ ಅಧಿಕಾರಿಗಳು ಇಂದು ಸೆಂಟರ್​ ಮೇಲೆ ದಾಳಿ ನಡೆಸಿದರು.

ಗ್ರಾಹಕನಂತೆ ತೆರಳಿ ದಾಳಿ: ಸ್ಪಾ ಮಸಾಜ್​ ಕೇಂದ್ರದಲ್ಲಿ ನಡೆಯುತ್ತಿದ್ದ ಕರ್ಮಕಾಂಡವನ್ನು ಬಯಲಿಗೆಳೆಯಲು ಯೋಜನೆ ರೂಪಿಸಿದ ಪೊಲೀಸರು, ಓರ್ವನನ್ನು ರಹಸ್ಯವಾಗಿ ಇಲಾಖೆಯಿಂದಲೇ ಮಸಾಜ್​ ಕೇಂದ್ರಕ್ಕೆ ಕಳುಹಿಸಿದ್ದರು. ಅಲ್ಲಿದ್ದ ಸಿಬ್ಬಂದಿ ಥಾಯ್ಲೆಂಡ್​ನ ಯುವತಿಯಿಂದ ಮಸಾಜ್​ಗೆ 2 ಸಾವಿರ ರೂಪಾಯಿ ಚಾರ್ಜ್​ ಮಾಡಿದ್ದಾರೆ. ಗ್ರಾಹಕ ಮತ್ತು ಯುವತಿ ಕೋಣೆಯೊಳಗೆ ಹೋಗಿ ಮಸಾಜ್​ ಮಾಡುವಾಗ, 3 ಸಾವಿರ ನೀಡಿದಲ್ಲಿ "ಹೆಚ್ಚುವರಿ ಸೇವೆ" ನೀಡುವುದಾಗಿ ಯುವತಿ ಹೇಳಿದ್ದಾಳೆ.

ಹಣ ನೀಡಿದ ಗ್ರಾಹಕ ಬಳಿಕ ಪೊಲೀಸರಿಗೆ ತನ್ನಲ್ಲಿದ್ದ ಮೊಬೈಲ್​ನಿಂದ ಮಿಸ್ಡ್​ ಕಾಲ್​ ನೀಡಿ ಸೂಚನೆ ನೀಡಿದ್ದಾನೆ. ತಕ್ಷಣವೇ ಪೊಲೀಸರು ಕೇಂದ್ರದ ಮೇಲೆ ದಾಳಿ ಮಾಡಿ ಕರ್ಮಕಾಂಡವನ್ನು ಬಯಲಿಗೆಳೆದಿದ್ದಾರೆ. ಕೇಂದ್ರದಲ್ಲಿದ್ದ ಸಿಬ್ಬಂದಿ, 7 ವಿದೇಶಿ ಯುವತಿಯರು ಸೇರಿ 13 ಮಂದಿಯನ್ನು ಬಂಧಿಸಲಾಗಿದೆ.

ಥಾಯ್ಲೆಂಡ್ ರಾಯಭಾರ ಕಚೇರಿಗೆ ಮಾಹಿತಿ: ಬಂಧಿತ ವಿದೇಶಿ ಯುವತಿಯರೆಲ್ಲರೂ ಥಾಯ್ಲೆಂಡ್ ಮೂಲದವರಾಗಿದ್ದಾರೆ. ಭಾರತಕ್ಕೆ ಬರಲು ಅವರ ಬಳಿ ಯಾವುದೇ ದೃಢೀಕೃತ ದಾಖಲೆಗಳಿಲ್ಲ. ಅಕ್ರಮ ವಲಸೆ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಥಾಯ್ಲೆಂಡ್ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ. ಸ್ಪಾ ಕೇಂದ್ರ ನಡೆಸುತ್ತಿರುವ ಮಾಲೀಕ ಆಶಿಶ್ ಚೋಪ್ರಾ ಎಂಬುವರ ಸೆರೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಓದಿ: ನ್ಯಾಯಾಧೀಶರ ಕೊಠಡಿ ಧ್ವಂಸ ಪ್ರಕರಣ: ಮತ್ತೆ 8 ವಕೀಲರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.