ಹೈದರಾಬಾದ್ : ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದೆ. ಜೊತೆಗೆ ಕೆಲ ಖಾತೆಗಳು ಅಮಾನತುಗೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಕೆಲವು ಇನ್ಸ್ಟಾಗ್ರಾಮ್ ಬಳಕೆದಾರರ ಖಾತೆಯಲ್ಲಿ ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಬಳಕೆ ಮಾಡುವಾಗ ಕಂಡುಬಂದಿದೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಪಷ್ಟನೆ ನೀಡಿದ್ದು, ಬಳಕೆದಾರರ ಖಾತೆಯಲ್ಲಿ ಕೆಲವು ತಾಂತ್ರಿಕ ದೋಷವಿರುವುದು ಕಂಡುಬಂದಿದೆ, ಈ ಬಗ್ಗೆ ಬಳಕೆದಾರರಲ್ಲಿ ಕ್ಷಮೆ ಯಾಚಿಸುತ್ತೇವೆ. ಇದನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿದೆ.
ಇನ್ನು ಈ ತಾಂತ್ರಿಕ ದೋಷದಿಂದಾಗಿ ಖ್ಯಾತ ಫುಟ್ಬಾಲ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೋ ಅವರು ತಮ್ಮ 3 ಮಿಲಿಯನ್ ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಇದಕ್ಕಿಂತ ಮೊದಲು ಇವರು 493 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರು. ಅಲ್ಲದೆ ಸ್ವತಃ ಇನ್ಸ್ಟಾಗ್ರಾಮ್ ತನ್ನ ಒಂದು ಮಿಲಿಯನ್ ಹಿಂಬಾಲಕರನ್ನು ಕಳೆದುಕೊಂಡಿದೆ ಎಂದು ಹೇಳಲಾಗಿದೆ. ಇಂದು ಬೆಳಿಗ್ಗೆಯಿಂದ ಈ ಸಮಸ್ಯೆ ಕಂಡು ಬಂದಿದ್ದು, ಇನ್ಸ್ಟಾಗ್ರಾಮ್ ದೋಷವನ್ನು ಸರಿಪಡಿಸಲಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ : ಇನ್ನು ಟ್ವಿಟರ್ ಬ್ಲೂ ಟಿಕ್ ಫ್ರೀ ಅಲ್ಲ.. ಪ್ರತಿ ತಿಂಗಳು 20 ಡಾಲರ್ ನೀಡಬೇಕು..! ಭಾರತದಲ್ಲಿ ಅದರ ಮೊತ್ತ ಎಷ್ಟು ಗೊತ್ತಾ?