ಇಂದೋರ್(ಮಧ್ಯಪ್ರದೇಶ): ಇಂದೋರ್‌ನಲ್ಲಿ ಕಳೆದ ಕೆಲ ದಿನಗಳಿಂದ ಫ್ಲೈಯಿಂಗ್ ದಹಿ ವಡಾ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಫ್ಲೈಯಿಂಗ್ ದಹಿ ವಡಾ ಬಗ್ಗೆ ಇಂದೋರ್ ಜನತೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, ಇಂದೋರ್ನ ಸರಫಾ ಬಜಾರ್ನ ಜೋಶಿ ದಹಿ ಬಡಾ ಹೌಸ್ನಲ್ಲಿ ಈ ರುಚಿಕರ ಫ್ಲೈಯಿಂಗ್ ದಹಿ ವಡಾ ಲಭ್ಯವಿದ್ದು, ಹೆಚ್ಚಿನ ಸಂಖ್ಯೆಯ ಗ್ರಾಹಕರು ಇಲ್ಲಿಗೆ ಆಗಮಿಸಿ ಈ ತಿನಿಸು ಸವಿಯುತ್ತಾರೆ. ಈ ದಹಿ ವಡಾ ಮಾಡುವ ಜೋಶಿ ಅವರು, ಗ್ರಾಹಕರಿಗೆ ಅದನ್ನು ಬಡಿಸುವ ಮೊದಲು ಅದನ್ನು ತಮ್ಮ ಒಂದು ಕೈಯಿಂದ ಬಹು ಎತ್ತರಕ್ಕೆ ಹಾರಿಸುತ್ತಾರೆ. ಇನ್ನೊಂದು ಕೈಯಿಂದ ಅದನ್ನು ಹಿಡಿದ ನಂತರ 5 ಬಗೆಯ ಮಸಾಲೆ ಹಾಕಿ ಅದನ್ನು ಅಲಂಕರಿಸಿ ಗ್ರಾಹಕರಿಗೆ ವಿಶೇಷ ರೀತಿಯಲ್ಲಿ ಬಡಿಸಲಾಗುತ್ತದೆ.
- " class="align-text-top noRightClick twitterSection" data="
">
ಇಂದೋರ್‌ನಲ್ಲಿ 'ಜೋಶಿ ದಹಿ ವಡಾ' ಜನಪ್ರಿಯ ಬ್ರ್ಯಾಂಡ್ ಆಗಿದೆ. ಈ ವಿಷಯ ಚರ್ಚೆಗೆ ಬರಲು ಪ್ರಮುಖ ಕಾರಣ ಸಂಸ್ಥೆಯ ನಿರ್ದೇಶಕರಾದ ಶ್ರೀ ರಾಮಚಂದ್ರ ಜೋಶಿ ಅವರ ಮೂರನೇ ತಲೆಮಾರಿನ ಓಂ ಪ್ರಕಾಶ್ ಜೋಶಿ ಅವರು. ಅವರು ಬಡಿಸುವ ಮೊದಲು ದಹಿ ವಡಾವನ್ನು ಮೇಲಕ್ಕೆ ಎಸೆಯುತ್ತಾರೆ. ಅವರ ಈ ವಿಧಾನವು ಅದ್ಭುತವಾಗಿದೆ. ದಹಿ ವಡಾ ಬಡಿಸುವ ಶೈಲಿಯನ್ನು ಜೋಶಿ ಅವರೇ ಸಿದ್ಧಪಡಿಸಿದರು. ಅದು ಕ್ರಮೇಣ ಅವರ ಬ್ರ್ಯಾಂಡ್ ಶೈಲಿಯಾಗಿ ದೇಶಾದ್ಯಂತ ಪ್ರಸಿದ್ಧಿಯಾಗಿದೆ.
ಇದನ್ನೂ ಓದಿ: ಜಾರ್ಖಂಡ್ ಗಣಿ ಇಲಾಖೆ ಕಾರ್ಯದರ್ಶಿ ಪೂಜಾಗೆ ಮತ್ತೊಂದು ಕಂಟಕ.. ಭೂ ಅಕ್ರಮ ಹಂಚಿಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಒಪ್ಪಿಗೆ
ಭಾರತ ಮತ್ತು ವಿದೇಶಗಳಿಂದ ಬರುವ ಜನರು ಜೋಶಿಯವರ ದಹಿ ವಡಾ ಮತ್ತು ಅದನ್ನು ಬಡಿಸುವ ಶೈಲಿಯನ್ನು ನೋಡಿ ಬೆರಗಾಗಿದ್ದಾರೆ. ವಾಸ್ತವವಾಗಿ ಅವರು ಮೊಸರು ಮತ್ತು ವಡೆ ತುಂಬಿದ ಬಟ್ಟಲನ್ನು ಮೇಲಕ್ಕೆ 8 ರಿಂದ 10 ಅಡಿಗಳವರೆಗೆ ಎಸೆದ ನಂತರ ಅದನ್ನು ಇನ್ನೊಂದು ಕೈಯಿಂದ ಹಿಡಿದು ಮಸಾಲೆ ಹಾಕುತ್ತಾರೆ. ಆ ವೇಳೆ, ಒಂದು ಹನಿ ಮೊಸರು ಹೊರಗೆ ಚೆಲ್ಲುವುದಿಲ್ಲ. ಈ ದಹಿ ವಡಾದ ಬೆಲೆ 40 ರೂ. ಆಗಿದೆ.