ETV Bharat / bharat

ದೇಶದ ಸ್ವಚ್ಛ ನಗರಿ ಇಂದೋರ್​​ ಹೇಗಾಯ್ತು ಗೊತ್ತಾ? ಯಾವ ರಾಜ್ಯವೂ ಇಷ್ಟು ಸ್ವಚ್ಛವಾಗಬಾರದು!! - ಇಂಧೋರ್ ಮುನ್ಸಿಪಲ್ ಕಾರ್ಪೊರೇಷನ್

ಇಂದೋರ್ ರೀತಿ ಸ್ವಚ್ಛ ನಗರ ಆಗೋಕೆ ಎಲ್ಲಾ ರಾಜ್ಯಗಳೂ ಕನಸು ಕಾಣ್ತವೆ. ನಾವೂ ಕೂಡಾ ಇಂದೋರ್​​​ ರೀತಿ ನಗರವನ್ನು ಸ್ವಚ್ಛವಾಗಿ ಇಟ್ಕೋಬೇಕು ಅಂತ ಪ್ರಯತ್ನ ಮಾಡ್ತವೆ. ಅಲ್ಲಿ ಯಾವ ರೀತಿ ಸ್ವಚ್ಛ ಮಾಡ್ತಾರೆ ಅನ್ನೋದು ನಿಮ್ಗೆ ಗೊತ್ತಾದ್ರೆ 'ನಮ್ಮ ನಗರದಲ್ಲಿ ಸ್ವಚ್ಛತೆಯಿಲ್ಲದಿದ್ದರೂ ಪರವಾಗಿಲ್ಲ' ಎಂಬ ಅನಿಸಿಕೆ ನಿಮ್ಮದಾಗುತ್ತೆ. ಅದು ಒಳ್ಳೆಯದೂ ಹೌದು..

Indore DM apologises to God after civic employees 'dump' elderly on outskirts of city
ದೇಶದ ಸ್ವಚ್ಚ ನಗರಿ ಇಂಧೋರ್ ಹೇಗಾಯ್ತು ಗೊತ್ತಾ..?
author img

By

Published : Jan 31, 2021, 8:18 PM IST

Updated : Jan 31, 2021, 8:26 PM IST

ಇಂದೋರ್, ಮಧ್ಯಪ್ರದೇಶ: ಅದು ಹೇಳ್ಕೊಳ್ಳೋಕೆ ದೇಶದ ಅತ್ಯಂತ ಸ್ವಚ್ಛ ನಗರ. ಅಲ್ಲಿ ಸ್ವಚ್ಛತೆ ಕಂಡು ಯಾರಾದರೂ ಒಮ್ಮೆ ಆ ನಗರವನ್ನೊಮ್ಮೆ ನೋಡ್ಬೇಕು ಅಂತ ಕನಸು ಕಂಡಿರುತ್ತಾರೆ. ಸ್ವಚ್ಛ ನಗರದ ಗರಿಮೆ ಬಂದಾಗ ಅಲ್ಲಿನ ಮುನ್ಸಿಪಲ್ ಕಚೇರಿ ಸಂಭ್ರಮಿಸಿದ್ದುಂಟು. ಪೌರ ಕಾರ್ಮಿಕರು ಸಿಹಿ ಹಂಚಿ ಕುಣಿದಾಡಿದ್ದುಂಟು. ಆದರೆ ಅಲ್ಲಿನ 'ಸ್ವಚ್ಛತೆ'ಯ ಬಗ್ಗೆ ಕೇಳಿದ್ರೆ ನೀವು ಖಂಡಿತಾ ಹೌಹಾರುತ್ತೀರಿ..!

ಹೌದು, ಅಲ್ಲಿ ಸ್ವಚ್ಛತೆ ಅಂದ್ರೆ ನಗರದ ರಸ್ತೆಗಳಿಂದ ಕಸ ತೆಗೆಯೋದಲ್ಲ. ಮನುಷ್ಯರನ್ನೇ ತೆಗೆದು ನಗರದ ಹೊರಗೆ ಬಿಡ್ತಾರೆ. ಕಸವನ್ನಾದರೂ ಸಂಸ್ಕರಿಸಿ, ಮತ್ತೇನಾದ್ರೂ ಮಾಡಬಹುದೇನೋ..? ಆದರೆ ಈ ನಗರದ ವೃದ್ಧರನ್ನು ಕಸಕ್ಕಿಂತ ಕೀಳಾಗಿ ನೋಡ್ತಾರೆ.

ಅದು ಶುಕ್ರವಾರ ಮಧ್ಯಾಹ್ನ ಸುಮಾರು 2.30ರ ಸಮಯ. ಇಂದೋರ್​​​ ಮುನ್ಸಿಪಲ್ ಕಾರ್ಪೊರೇಷನ್​ನ 'ಸಿಬ್ಬಂದಿ ಸ್ವಚ್ಛತಾ ಕಾರ್ಯ' ಮಾಡಲು ಮುಂದಾಗಿದ್ದಾರೆ. ಸ್ವಚ್ಛತಾ ಕಾರ್ಯ ಏನ್​ ಗೊತ್ತಾ..? ನಗರದ ಅನಾಥ, ನಿರಾಶ್ರಿತ ವೃದ್ಧರನ್ನು ಕರೆತಂದು ನಗರದ ಹೊರವಲಯಕ್ಕೆ ಬಿಟ್ಟು ಹೋಗೋದು..!

ಇದು ಕಹಿ ಸತ್ಯ..!, ಇಬ್ಬರು ವೃದ್ಧೆಯರು ಸೇರಿದಂತೆ 10 ಮಂದಿ ನಿರಾಶ್ರಿತರನ್ನು ಟ್ರಕ್​​​ನಲ್ಲಿ ಕರೆತಂದ ಇಂದೋರ್​ ಮುನ್ಸಿಪಲ್ ಕಾರ್ಪೊರೇಷನ್​ನ ಸಿಬ್ಬಂದಿ ರಸ್ತೆ ಬದಿ ಇಳಿಸಿ ತೆರಳಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿಂದ ಅನತಿ ದೂರದಲ್ಲಿದ್ದ ಟೀ ಅಂಗಡಿಯ ಮಾಲೀಕ ಈ ಬಗ್ಗೆ ವಿಚಾರಿಸಿದಾಗ 'ಇವರು ನಗರವನ್ನು ಗಲೀಜು ಮಾಡ್ತಾರೆ. ಅವರನ್ನು ನಗರದಿಂದ ಹೊರಗೆ ಬಿಡೋದು ಸರ್ಕಾರದ ಆದೇಶ' ಅಂತ ಹೇಳಿದ್ದಾರೆ.

ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಅವರು ಮತ್ತೆ ವೃದ್ಧರನ್ನು ಟ್ರಕ್​​ನೊಳಗೆ ತುಂಬಿಕೊಂಡು ಹೊರಟಿದ್ದಾರೆ. ಇದು ಸ್ಥಳೀಯರೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಳಕಿಗೆ ಬಂದಿದ್ದು ಹೇಗೆ..?

ಶನಿವಾರ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್​ ಮಾಡಿ, ಘಟನೆಯನ್ನು ಹಂಚಿಕೊಂಡಿದ್ದರು. ಇದರ ಜೊತೆಗೆ ಮಾನವೀಯತೆಗೆ ಕಪ್ಪು ಚುಕ್ಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆ ನಂತರ ಈ ಘಟನೆ ಸಾಕಷ್ಟು ಮಂದಿಯ ಗಮನ ಸೆಳೆದಿತ್ತು.

  • इंदौर, मप्र की ये घटना मानवता पर एक कलंक है। सरकार और प्रशासन को इन बेसहारा लोगों से माफी माँगनी चाहिए और ऑर्डर लागू कर रहे छोटे कर्मचारियों पर नहीं बल्कि ऑर्डर देनेवाले उच्चस्थ अधिकारियों पर ऐक्शन होना चाहिए। pic.twitter.com/r47k6Cc6Ox

    — Priyanka Gandhi Vadra (@priyankagandhi) January 30, 2021 " class="align-text-top noRightClick twitterSection" data=" ">

ಈ ಘಟನೆ ಬಹಿರಂಗವಾದ ಬೆನ್ನಲ್ಲೇ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್​ನ ಡೆಪ್ಯೂಟಿ ಕಮಿಷನರ್​ ಅವರನ್ನು ಅಮಾನತು ಮಾಡಿದ್ದಾರೆ ಮತ್ತು ಈ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಜ್ರಾನಾ ಗಣೇಶ ದೇವಾಲಯದ ಬಳಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮಾತನಾಡಿದ ಜಿಲ್ಲಾ ಮ್ಯಾಜಿಸ್ಟ್ರೇಟ್​ ಮನೀಶ್ ಸಿಂಗ್ ಮುನ್ಸಿಪಲ್​​ ಸಿಬ್ಬಂದಿಯ ಕೆಟ್ಟ ವರ್ತನೆ ಕಾರಣದಿಂದ ಆಡಳಿತದ ಪರವಾಗಿ ನಾನು ದೇವರಲ್ಲಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ನಾವು ಅಧಿಕಾರಿಗಳು, ನಾವು ನಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಇದರಿಂದಾಗಿ ದೇವರು ನಮ್ಮ ತಪ್ಪುಗಳನ್ನು ಮನ್ನಿಸುವಂತೆ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

ಇಂಥಾ ಸ್ವಚ್ಛ ಮಾದರಿ ನಮಗೆ ಬೇಕೇ..?

ಇಂದೋರ್​​ ಸ್ವಚ್ಛತಾ ಮಾದರಿ ಅಂದ್ರೆ ಇದು. ಇಂತಹ ಸ್ವಚ್ಚ ಮಾದರಿ ನಮಗೆ ಬೇಕೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಈ ಅಮಾನವೀಯ ಕಾರ್ಯ ನೆನೆಸಿಕೊಂಡರೆ, ನಮ್ಮ ರಾಜ್ಯದಲ್ಲಿ ಸ್ವಚ್ಛತೆ ಇಲ್ಲದೇ ಇದ್ರೂ ಪರವಾಗಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ.

ವೃದ್ಧರನ್ನು ಕಸಕ್ಕಿಂತ ಕಡೆಯಾಗಿ ಕಾಣುವ 'ಸ್ವಚ್ಛ' ಪರಿಕಲ್ಪನೆ ಅಳಿಯಬೇಕಿದೆ. ಸರ್ಕಾರಗಳು ಈ ಬಗ್ಗೆ ಗಮನ ಹರಿಸಬೇಕಿದೆ.

Last Updated : Jan 31, 2021, 8:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.