ಅಹ್ಮದಾಬಾದ್ : ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಂಬಂಧ ಜಾಗತಿಕ ಸ್ಥಿರತೆ ಮತ್ತು ಸಮೃದ್ಧಿಗೆ ಹೆಚ್ಚು ಪ್ರಸ್ತುತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಹ್ಮದಾಬಾದ್ನ ಮ್ಯಾನೇಜ್ಮೆಂಟ್ ಅಸೋಸಿಯೇಶನ್ನ ಆವರಣದಲ್ಲಿ ನಡೆದ ಜಪಾನಿನ ಜೆನ್ ಗಾರ್ಡನ್ ಮತ್ತು ಕೈಜೆನ್ ಅಕಾಡೆಮಿಯನ್ನು ವರ್ಚುವಲ್ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ್ದಾರೆ.
ಅಹ್ಮದಾಬಾದ್ನಲ್ಲಿ ಜೆನ್ ಗಾರ್ಡನ್ ಮತ್ತು ಕೈಜೆನ್ ಅಕಾಡೆಮಿ ತೆರೆಯುವುದರಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ವೃದ್ಧಿಸಲಿದೆ ಎಂದಿದ್ದಾರೆ. ಜಪಾನ್ನ ಪ್ರಸ್ತುತ ಪ್ರಧಾನಿ ಯೋಶಿಹೈಡ್ ಸುಗಾ ಅವರು ಸರಳ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಇಂಡೋ-ಜಪಾನ್ ಸ್ನೇಹ ಮತ್ತು ಪಾಲುದಾರಿಕೆಯೂ ಜಾಗತಿಕ ಮಟ್ಟದ ಸ್ಥಿರತೆ ಮತ್ತು ಸಮೃದ್ಧಿಗೆ ಇನ್ನಷ್ಟು ಪ್ರಸ್ತುತವಾಗಿದೆ ಎಂದಿದ್ದಾರೆ.
ನಾವು ಪ್ರತಿನಿತ್ಯ ಹಲವು ಜಾಗತಿಕ ಸವಾಲನ್ನು ಎದುರಿಸುತ್ತಿರುವಾಗ ನಮ್ಮ ನಡುವಿನ ಸಂಬಂಧಗಳು ಇನ್ನಷ್ಟು ಬಲಗೊಳ್ಳಬೇಕಿದೆ. ಇದಕ್ಕೆ ಕೈಜೆನ್ ಅಕಾಡೆಮಿಯ ಸ್ಥಾಪನೆಯೂ ಪ್ರತಿಬಿಂಬವಾಗಲಿದೆ ಎಂದಿದ್ದಾರೆ. ಕೈಜೆನ್ ಅಕಾಡೆಮಿಯೂ ಜಪಾನ್ ಸಂಸ್ಕೃತಿಯನ್ನು ಭಾರತದಲ್ಲೂ ಪರಿಚಯಿಸಲಿದೆ. ಜೊತೆಗೆ ಉಭಯ ದೇಶಗಳ ವ್ಯಾಪಾರ, ವ್ಯವಹಾರ ಸಹ ವೃದ್ಧಿಸಲಿದೆ ಎಂದಿದ್ದಾರೆ.
ಓದಿ: ಎಲ್ಲರಿಗೂ ವ್ಯಾಕ್ಸಿನೇಷನ್ ನೀಡಿದ ಮೇಲೂ ಮನ್ ಕಿ ಬಾತ್ ಮಾಡಬಹುದು : ರಾಹುಲ್ ಗಾಂಧಿ ವ್ಯಂಗ್ಯ