ETV Bharat / bharat

Flight Emergency Landing: ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್: ಹಲವು ರಾಜಕೀಯ ನಾಯಕರಿದ್ದ ವಿಮಾನದಲ್ಲಿ ಯಾಂತ್ರಿಕ ದೋಷ.. - ವಿಮಾನದಲ್ಲಿ ಯಾಂತ್ರಿಕ ವೈಫಲ್ಯ

ಅಸ್ಸೋಂನಿಂದ ಹಲವಾರು ರಾಜಕೀಯ ನಾಯಕರನ್ನು ಹೊತ್ತ ಇಂಡಿಗೋ ವಿಮಾನವು ಮಂಗಳವಾರ ಗುವಾಹಟಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Flight Emergency Landing
ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್
author img

By

Published : Jul 4, 2023, 6:26 PM IST

ಗುವಾಹಟಿ (ಅಸ್ಸೋಂ): ಬೋರ್ಜಾರ್‌ನ ಎಲ್‌ಜಿಬಿಐ ವಿಮಾನ ನಿಲ್ದಾಣದಿಂದ ದಿಬ್ರುಗಢಕ್ಕೆ ಹೊರಟಿದ್ದ ಇಂಡಿಗೋ ವಿಮಾನವು ಯಾಂತ್ರಿಕ ವೈಫಲ್ಯಕ್ಕೆ ಒಳಗಾಗಿದೆ. ಅಸ್ಸಾಂನಿಂದ ಹಲವಾರು ರಾಜಕೀಯ ನಾಯಕರನ್ನು ಹೊತ್ತ ಇಂಡಿಗೋ ವಿಮಾನವು ಮಂಗಳವಾರ ಗುವಾಹಟಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಈ ನಿಟ್ಟಿನಲ್ಲಿ ಬಂದಿರುವ ಮಾಹಿತಿಯ ಪ್ರಕಾರ, ಇಂಡಿಗೋ ವಿಮಾನವು ಗುವಾಹಟಿಯ ಬೋರ್ಜಾರ್ ವಿಮಾನ ನಿಲ್ದಾಣದಿಂದ ಹೊರಟಿತ್ತು. ಆದರೆ, ಟೇಕ್ ಆಫ್ ಆದ ಕೂಡಲೇ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ವಿಮಾನದ ಎಂಜಿನ್ ಸಂಖ್ಯೆ 2ರಲ್ಲಿ ದೋಷ ಕಂಡುಬಂದಿರುವ ಕುರಿತು ವರದಿಯಾಗಿದೆ.

ವಿಮಾನದಲ್ಲಿದ್ದ ರಾಜಕೀಯ ನಾಯಕರು ಯಾರು?: ಅಸ್ಸೋಂ ಕ್ಯಾಬಿನೆಟ್ ಸಚಿವ ಬಿಮಲ್ ಬೋರಾ ಮತ್ತು ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಸಚಿವ ರಂಜಿತ್ ಕುಮಾರ್ ದಾಸ್ ಇಂಡಿಗೋ ವಿಮಾನದಲ್ಲಿದ್ದರು. ಇದಲ್ಲದೇ ಧಾಕುಖಾನಾ ಶಾಸಕ ನಬಾ ಕುಮಾರ್ ಡೋಲಿ, ಕಾಂಗ್ರೆಸ್ ನಾಯಕ ರಮೆನ್ ಬೋರ್ತಕೂರ್ ಮತ್ತು ಬಿಜೆಪಿ ನಾಯಕ ಸುಭಾಷ್ ದತ್ತಾ ಕೂಡ ವಿಮಾನದಲ್ಲಿ ಇದ್ದರು ಎಂದು ಮೂಲಗಳು ತಿಳಿಸಿವೆ. ವಿಮಾನ ಟೇಕ್ ಆಫ್ ಆದ ಕೂಡಲೇ ಬೋರ್ಜಾರ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿತ್ತು. ಈ ವಿಮಾನದಲ್ಲಿ ಯಾಂತ್ರಿಕ ದೋಷಗಳು ಕಂಡುಬಂದಿವೆ. ಇಂಡಿಗೋ ವಿಮಾನದ ಸಂಖ್ಯೆ 6E-2652 ಎಂದು ತಿಳಿದು ಬಂದಿದೆ. ವಿಮಾನವು ದಿಬ್ರುಗಢ್ ಕಡೆಗೆ ಹಾರಲು ಪ್ರಾರಂಭಿಸಿತ್ತು ಎಂದು ವರದಿಯಾಗಿದೆ.

ಇಂದಿನ ಘಟನೆಯ ಮುನ್ನ ಅದೇ ವಿಮಾನದಲ್ಲಿ ತಿಂಗಳ ಹಿಂದೆ, ತಾಂತ್ರಿಕ ಸಮಸ್ಯೆ ತಲೆದೋರಿದ್ದರಿಂದ ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಲಾಗಿತ್ತು. ಆದಾಗ್ಯೂ, ಏರ್‌ಲೈನ್ಸ್ ಸುದ್ದಿ ಮಾಡುವ ಸಮಯದವರೆಗೆ ಈ ವಿಷಯದಲ್ಲಿ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ. ಅಸಮರ್ಪಕ ಕಾರ್ಯನಿರ್ವಹಣೆಯಿಂದ ಪ್ರಯಾಣಿಕರು ದೀರ್ಘ ಕಾಲ ವಿಮಾನದೊಳಗೆ ಸಿಲುಕಿಕೊಳ್ಳಬೇಕಾಯಿತು.

ಮಗದನ್ ಏರ್​ಪೋರ್ಟ್​ನಲ್ಲಿ ತುರ್ತು ಲ್ಯಾಂಡಿಂಗ್: ಇತ್ತೀಚೆಗೆ ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೊಗೆ ಹೊರಟಿದ್ದ ಏರ್ ಇಂಡಿಯಾದ ವಿಮಾನವೊಂದು ಎಂಜಿನ್​ನಲ್ಲಿನ ತಾಂತ್ರಿಕ ಸಮಸ್ಯೆಯಿಂದ ರಷ್ಯಾದ ಮಗದನ್ ಏರ್​ಪೋರ್ಟ್​ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ಹೀಗಾಗಿ ಆ ವಿಮಾನದಲ್ಲಿನ ಪ್ರಯಾಣಿಕರು ಈಗ ಮಗದನ್ ಏರ್​ಪೋರ್ಟ್​ನಲ್ಲಿ ಕಾಯುತ್ತಿದ್ದರು.

216 ಪ್ರಯಾಣಿಕರು ಹಾಗೂ 16 ಸಿಬ್ಬಂದಿಯಿದ್ದ ವಿಮಾನವನ್ನು ರಷ್ಯಾದ ಮಗದನ್‌ಗೆ (ಜಿಡಿಎಕ್ಸ್) ತಿರುಗಿಸಲಾಗಿತ್ತು. ಜೊತೆಗೆ ಅಲ್ಲಿ ವಿಮಾನವು ಸುರಕ್ಷಿತವಾಗಿ ಇಳಿದಿತ್ತು. ಮಗದನ್ ಏರ್​ಪೋರ್ಟ್​ನಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ ಹಾಗೂ ಅವರು ಏರ್ ಇಂಡಿಯಾಗೆ ಅಗತ್ಯವಿರುವ ಎಲ್ಲ ಸಹಕಾರ ನೀಡಿದ್ದರು. ಅಲ್ಲಿರುವ ನಮ್ಮ ಎಲ್ಲ ಪ್ರಯಾಣಿಕ ವಾಸಕ್ಕೆ ತಾತ್ಕಾಲಿಕವಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಏರ್ ಇಂಡಿಯಾವು ದೂರದ ಮಗದನ್ ಅಥವಾ ರಷ್ಯಾದಲ್ಲಿ ಯಾವುದೇ ಸಿಬ್ಬಂದಿಯನ್ನು ಹೊಂದಿಲ್ಲದ ಕಾರಣ, ವ್ಲಾಡಿವೋಸ್ಟಾಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಭಾರತ ಸರ್ಕಾರ), ಸ್ಥಳೀಯರೊಂದಿಗಿನ ಸಂಪರ್ಕದ ಮೂಲಕ ಪ್ರಯಾಣಿಕರಿಗೆ ಎಲ್ಲ ರೀತಿಯ ನೆರವು ಒದಗಿಸಲಾಗಿತ್ತು. ಜೊತೆಗೆ ರಷ್ಯಾದಲ್ಲಿ ಸಿಲುಕಿರುವ ಭಾರತೀಯ ಪ್ರಯಾಣಿಕರನ್ನು ಸ್ಯಾನ್​ ಫ್ರಾನ್ಸಿಸ್ಕೊಗೆ ತಲುಪಿಸಲು ಏರ್ ಇಂಡಿಯಾದ ವಿಮಾನವೊಂದು ಮುಂಬೈನಿಂದ ರಷ್ಯಾದ ಮಗದನ್ ಏರ್​ಪೋರ್ಟ್​ಗೆ ಪ್ರಯಾಣ ಬೆಳೆಸಿತ್ತು ಎಂದು ಏರ್ ಇಂಡಿಯಾ ತಿಳಿಸಿತ್ತು.

ಇದನ್ನೂ ಓದಿ: ಎರಡನೇ ಬಾರಿಗೆ ಪಾಕಿಸ್ತಾನ ವಾಯು ಪ್ರದೇಶ ಪ್ರವೇಶಿಸಿದ ಇಂಡಿಗೋ ವಿಮಾನ.. ಬಳಿಕ ತುರ್ತು ಲ್ಯಾಂಡಿಂಗ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.