ಪಾಟ್ನಾ (ಬಿಹಾರ): ಪಾಟ್ನಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ. 181 ಜನರು ಪ್ರಯಾಣಿಸುತ್ತಿದ್ದ 6E 2433 ಸಂಖ್ಯೆಯ ವಿಮಾನ ಇದಾಗಿದ್ದು, ಇದರ ಒಂದು ಎಂಜಿನ್ ನಿಷ್ಕ್ರೀಯಗೊಂಡ ಕಾರಣದಿಂದ ತುರ್ತು ಲ್ಯಾಂಡಿಂಗ್ ಮಾಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
-
Indigo flight 6E 2433 to Delhi, three minutes after departure reported one engine inoperative. The aircraft landed safely at 0911 hours. All operations are normal at the airport: Director, Patna Airport, Bihar https://t.co/maDDC8LPBw
— ANI (@ANI) August 4, 2023 " class="align-text-top noRightClick twitterSection" data="
">Indigo flight 6E 2433 to Delhi, three minutes after departure reported one engine inoperative. The aircraft landed safely at 0911 hours. All operations are normal at the airport: Director, Patna Airport, Bihar https://t.co/maDDC8LPBw
— ANI (@ANI) August 4, 2023Indigo flight 6E 2433 to Delhi, three minutes after departure reported one engine inoperative. The aircraft landed safely at 0911 hours. All operations are normal at the airport: Director, Patna Airport, Bihar https://t.co/maDDC8LPBw
— ANI (@ANI) August 4, 2023
ಘಟನೆಯ ವಿವರ: ಬೆಳಗ್ಗೆ 9 ಗಂಟೆ 8 ನಿಮಿಷಕ್ಕೆ ಇಂಡಿಗೋ ವಿಮಾನ ದೆಹಲಿಗೆ ಪ್ರಯಾಣ ಬೆಳೆಸಿತ್ತು. ಟೆಕ್ಆಫ್ ಆದ 3 ನಿಮಷಕ್ಕೆ ಅಂದರೆ 9 ಗಂಟೆ11 ನಿಮಿಷಕ್ಕೆ ವಿಮಾನದ ಎಂಜಿನ್ ನಿಷ್ಕ್ರೀಯಗೊಂಡಿದೆ. ಕೂಡಲೇ ಇನದನ್ನು ಗಮನಿಸಿದ ಪೈಲಟ್ ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದ್ದಾರೆ. ವಿಮಾನ ಟೇಕ್ಆಫ್ ಆದ ವೇಳೆ, ಪ್ರಯಾಣಿಕರ ಹೊರತು ಪಡಿಸಿ 8 ಜನ ಸಿಬ್ಬಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಬೆಳಗ್ಗೆ ಪ್ರಯಾಣಿಕರನ್ನು ಹೊತ್ತು ವಿಮಾನ ದೆಹಲಿಯತ್ತ ಹಾರಿತ್ತು. ಟೆಕ್ಆಪ್ ಆದ ಕೆಲವೇ ಸೆಕೆಂಡ್ಗಳಲ್ಲಿ ವಿಮಾನದೊಳಗೆ ತಾಂತ್ರಿಕ ದೋಷ ಕಂಡುಬಂದಿದೆ. ವಿಮಾನದ ಎರಡು ಎಂಜಿನ್ಗಳ ಪೈಕಿ ಒಂದು ನಿಷ್ಕ್ರಿಯಗೊಂಡಿದ್ದು, ಪೈಲಟ್ ಪತ್ತೆ ಹಚ್ಚಿದ್ದಾರೆ. ಕೂಡಲೇ ನಿಲ್ದಾಣದ ಕಂಟ್ರೋಲ್ ರೂಮ್ಗೆ ಕರೆ ಮಾಡಿ ತುರ್ತು ಭೂಸ್ಪರ್ಶಕ್ಕೆ ಕೋರಿದ್ದಾರೆ. ಕೂಡಲೆ ತಾಂತ್ರಿಕ ದೋಷ ಕಂಡ ಇಂಡಿಗೋ ವಿಮಾನ ಲ್ಯಾಂಡಿಂಗ್ಗೆ ಅನುವು ಮಾಡಿಕೊಟ್ಟಿದೆ.
9 ಗಂಟೆ 11 ನಿಮಿಷಕ್ಕೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಅದರಲ್ಲಿದ್ದ 181 ಪ್ರಯಾಣಿಕರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಕಲ್ಪಿಸಲಾಯಿತು. ಸದ್ಯ ಘಟನೆಯಿಂದ ಯಾವುದೇ ಅವಘಡ ಸಂಭವಿಸಿಲ್ಲ. ಎಂಜಿನ್ ನಿಷ್ಕ್ರಿಯಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಚೆನ್ನೈನಲ್ಲೂ ಇಂತಹದ್ದೇ ಘಟನೆ: ಜೂ.27ರಂದು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ತಾಂತ್ರಿಕ ದೋಷದಿಂದಾಗಿ ದುಬೈಗೆ ಪ್ರಯಾಣ ಬೆಳೆಸಿದ್ದ ಇಂಡಿಗೋ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಚೆನ್ನೈನ ಮೀನಂಬಾಕ್ಕಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿತ್ತು. ಇದನ್ನು ಪತ್ತೆ ಹಚ್ಚಿದ ಪೈಲಟ್ ಕೂಡಲೇ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದರು. ಈ ವಿಮಾನದಲ್ಲಿ 105 ಪ್ರಯಾಣಿಕರು ಮತ್ತು 7 ಜನ ಸಿಬ್ಬಂದಿ 112 ಜನರರಿದ್ದರು. ಟೇಕ್ ಆಫ್ ಆದ 20 ನಿಮಿಷದಲ್ಲಿ ಚೆನ್ನೈ ಏರ್ಪೋರ್ಟ್ಗೆ ವಿಮಾನ ಲಾಂಡಿಂಗ್ ಆಗಿತ್ತು.