ETV Bharat / bharat

ಕುಡಿದ ಮತ್ತಲ್ಲಿ ಇಂಡಿಗೋ ಮಹಿಳಾ ಸಿಬ್ಬಂದಿಗೆ ಕಿರುಕುಳ: ಪ್ರಯಾಣಿಕನ ಬಂಧನ - IndiGo flight crew molested

ವಿಮಾನದಲ್ಲಿ ಕಿರುಕುಳ ಘಟನೆಗಳ ಸರಣಿ ಮುಂದುವರಿದಿದೆ. ಇಂಡಿಗೋ ಮಹಿಳಾ ಸಿಬ್ಬಂದಿಯೊಂದಿಗೆ ಸ್ವೀಡನ್​ ಪ್ರಯಾಣಿಕ ಅಸಭ್ಯವಾಗಿ ವರ್ತಿಸಿದ್ದು, ಪ್ರಕರಣ ದಾಖಲಾಗಿದೆ.

ಇಂಡಿಗೋ ಮಹಿಳಾ ಸಿಬ್ಬಂದಿಗೆ ಕಿರುಕುಳ
ಇಂಡಿಗೋ ಮಹಿಳಾ ಸಿಬ್ಬಂದಿಗೆ ಕಿರುಕುಳ
author img

By

Published : Apr 1, 2023, 11:52 AM IST

ಮುಂಬೈ: ವಿಮಾನದಲ್ಲಿ ಪ್ರಯಾಣಿಕರ ಅಶಿಸ್ತಿನ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಪ್ರಯಾಣಿಸುತ್ತಿದ್ದ ಸ್ವೀಡನ್​ ಪ್ರಯಾಣಿಕರೊಬ್ಬರು ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಬಳಿಕ ಆತನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

63 ವರ್ಷದ ಸ್ವೀಡನ್ ಪ್ರಜೆ ಎರಿಕ್ ಹೆರಾಲ್ಡ್ ಜೊನಾಸ್ ವೆಸ್ಟ್‌ಬರ್ಗ್ ಎಂಬುವವರು ಗುರುವಾರ ಇಂಡಿಗೋ ವಿಮಾನದಲ್ಲಿ ಮುಂಬೈಗೆ ಬರುತ್ತಿದ್ದರು. ಈ ವೇಳೆ ವೆಸ್ಟ್‌ಬರ್ಗ್ ಕ್ಯಾಬಿನ್ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದರು. ಎರಿಕ್​ ಈ ವೇಳೆ ಮದ್ಯಪಾನ ಮಾಡಿದ್ದರು. ಅಮಲಿನಲ್ಲಿದ್ದ ಈತ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಆರೋಪಿಸಲಾಗಿದೆ.

ವಿಮಾನ ಮುಂಬೈ ತಲುಪಿದ ಬಳಿಕ ಎರಿಕ್​ ವಿರುದ್ಧ ದೂರು ನೀಡಿದ ಸಿಬ್ಬಂದಿ, ಆತನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಯಿತು. ಸಿಬ್ಬಂದಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಇದಾದ ಬಳಿಕ ಶುಕ್ರವಾರ ಎರಿಕ್​ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 20 ಸಾವಿರ ರೂ. ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ಪ್ರತಿ ಬಾರಿಯೂ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ವಿಮಾನಗಳಲ್ಲಿ ಪ್ರಯಾಣಿಕರ ಅಸಭ್ಯ ವರ್ತನೆ ಕೇಸ್​ಗಳು ಹೆಚ್ಚಾಗುತ್ತಿವೆ. ಪ್ರಯಾಣದ ವೇಳೆ ಸಹ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು ಭಾರಿ ವಿವಾದ ಸೃಷ್ಟಿಯಾಗಿತ್ತು. ಇದಾದ ಬಳಿಕ ವಿಮಾನಯಾನ ಸಂಸ್ಥೆಗಳು ಪ್ರಯಾಣದ ವೇಳೆ ಮದ್ಯಪಾನ ಮಾಡುವುದನ್ನು ನಿಷೇಧಿಸಿದ್ದವು. ಅಲ್ಲದೇ, ಇದಕ್ಕಾಗಿ ಹಲವು ನಿಯಮಗಳನ್ನು ರೂಪಿಸಿದ್ದವು.

ಪ್ರಥರ್ಮ ದರ್ಜೆಯಲ್ಲಿ ನೀಡಲಾಗುವ ಮದ್ಯದ ಪ್ರಮಾಣವನ್ನು ಕಡಿತ ಮಾಡಲಾಗಿತ್ತು. ಇದಲ್ಲದೇ ಪ್ರಯಾಣಿಕರೆ ಮದ್ಯವನ್ನು ತಂದಲ್ಲಿ ವಿಮಾನದಲ್ಲಿ ಕುಡಿಯುವ ಹಾಗಿಲ್ಲ ಎಂಬ ನಿಯಮ ಕೂಡ ಜಾರಿ ಮಾಡಲಾಗಿದೆ. ಇದರ ಮಧ್ಯೆಯೇ ಹಲವು ಘಟನೆಗಳು ಪುನರಾವರ್ತನೆಯಾಗುತ್ತಿವೆ. ಇಂಡಿಗೋ ವಿಮಾನದಲ್ಲಿ ಇಂಥಹದ್ದೇ ಪ್ರಕರಣಗಳು 2017 ರಲ್ಲಿ 1 ಘಟಿಸಿದರೆ, 2018 ರಲ್ಲಿ 2, 2019 ರಲ್ಲಿ 3, 2022 ರಲ್ಲಿ 6 ಮತ್ತು ಈ ವರ್ಷ 3 ತಿಂಗಳಲ್ಲಿ 8 ಘಟನೆಗಳು ವರದಿಯಾಗಿವೆ.

ದುಬೈ ವಿಮಾನದ ಘಟನೆ: ದುಬೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಮದ್ಯದ ಮತ್ತಿನಲ್ಲಿ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ನಿಂದಿಸಿದ್ದಲ್ಲದೇ, ಅಶಿಸ್ತಿನಿಂದ ವರ್ತಿಸಿದ್ದರು. ಅಮಲೇರಿಸಿಕೊಂಡು ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರ ವಿರುದ್ಧ ಕೇಸ್​ ದಾಖಲಿಸಿ, ಬಂಧಿಸಲಾಗಿತ್ತು.

ವಿಮಾನದಲ್ಲಿ ಕಳ್ಳತನ: ದೆಹಲಿ-ಮುಂಬೈ ನಡುವಿನ ಸರಕು ವಿಮಾನ ಕಾರ್ಗೋದಲ್ಲಿ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಘಟನೆ ಸಂಬಂಧ ಇಬ್ಬರು ಸಿಬ್ಬಂದಿಯನ್ನು ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಮಾನ ಸಿಬ್ಬಂದಿ ಪ್ರಯಾಣಕರಿಗೆ ಸೇರಿದ ಮೊಬೈಲ್​, ಸ್ಮಾರ್ಟ್‌ವಾಚ್​, ಇಯರ್‌ಫೋನ್‌ ಸೇರಿದಂತೆ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕಳವು ಮಾಡಿದ್ದರು. ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಹೋಗುತ್ತಿದ್ದ QO321 ವಿಮಾನದಲ್ಲಿ ಈ ಕಳ್ಳತನ ನಡೆದಿತ್ತು. ಈ ಕುರಿತು ಮಾರ್ಚ್ 30ರಂದು ವಿಮಾನಯಾನ ಕಂಪನಿಯವರು ವಿಮಾನ ನಿಲ್ದಾಣದ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು.

ಓದಿ: ಇಂಡಿಗೋ ವಿಮಾನದಲ್ಲಿ ಕುಡಿದು ಗಲಾಟೆ: ಅಶಿಸ್ತು ತೋರಿದ ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.