ನವದೆಹಲಿ: ಲಾಕ್‌ಡೌನ್ ಹಿಂಪಡೆದ ನಂತರ ಸುಧಾರಣೆಯಾದ ದೇಶದ ಉದ್ಯೋಗ ಸನ್ನಿವೇಶವು ಡಿಸೆಂಬರ್‌ನಲ್ಲಿ ಹದಗೆಟ್ಟಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್‌ಐಇ) ಅಂಕಿ - ಅಂಶಗಳು ತಿಳಿಸಿವೆ.
ಅಂಕಿ- ಅಂಶಗಳ ಪ್ರಕಾರ ದೇಶದ ನಿರುದ್ಯೋಗ ದರವು ಡಿಸೆಂಬರ್‌ನಲ್ಲಿ ಶೇ 9.1ಕ್ಕೆ ಏರಿದೆ. ಆರ್ಥಿಕತೆಯಲ್ಲಿ ಒತ್ತಡವು ಹೆಚ್ಚಿದೆ ಮತ್ತು ಸಾಮಾನ್ಯ ಸ್ಥಿತಿಗೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳಲಿದೆ ಎಂದು ಸಂಖ್ಯೆಗಳು ಸೂಚಿಸುತ್ತವೆ.
ಸಿಎಂಐಇಯ ಎಂಡಿ ಮತ್ತು ಸಿಇಒ ಮಹೇಶ್ ವ್ಯಾಸ್ ಅವರ ಪ್ರಕಾರ, ಜೂನ್‌ನಲ್ಲಿ ಲಾಕ್‌ಡೌನ್‌ನಿಂದ ಭಾರತ ಚೇತರಿಸಿಕೊಂಡ ನಂತರ ಡಿಸೆಂಬರ್ ಸಂಖ್ಯೆ ಅತಿ ಹೆಚ್ಚು ನಿರುದ್ಯೋಗ ದರವಾಗಿದೆ.
ನಿರುದ್ಯೋಗದ ಹೆಚ್ಚಳವು ಹೆಚ್ಚಿನ ಹಣದುಬ್ಬರದೊಂದಿಗೆ ಬರುತ್ತದೆ, ಇದು ಇತ್ತೀಚಿನ ತಿಂಗಳುಗಳಲ್ಲಿ ಶೇಕಡಾ 7ರ ಸಮೀಪದಲ್ಲಿದೆ ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಡಿಸಿದೆ ಎಂದಿದ್ದಾರೆ. ನಿರುದ್ಯೋಗದ ತೀವ್ರ ಹೆಚ್ಚಳವು ಚೇತರಿಕೆ ಪ್ರಕ್ರಿಯೆಯ ಬಗ್ಗೆ ಆತಂಕಗಳನ್ನು ಬಲಪಡಿಸುತ್ತದೆ ಎಂದಿದ್ದಾರೆ.
ಥಿಂಕ್ ಟ್ಯಾಂಕ್ ಪ್ರಕಾರ, ಡಿಸೆಂಬರ್‌ನಲ್ಲಿ ನಿರುದ್ಯೋಗ ಹೆಚ್ಚಳವು ಕಾರ್ಮಿಕ ಭಾಗವಹಿಸುವಿಕೆಯ ದರವನ್ನು (ಎಲ್‌ಪಿಆರ್) ಭಾಗಶಃ ಚೇತರಿಸಿಕೊಂಡ ಪರಿಣಾಮವಾಗಿದೆ. ಹಿಂದಿನ ಎರಡು ತಿಂಗಳಲ್ಲಿ 40.7 ಶೇಕಡಾದಿಂದ ಎಲ್‌ಪಿಆರ್ ನವೆಂಬರ್‌ನಲ್ಲಿ ಶೇ 40ಕ್ಕೆ ಇಳಿದಿತ್ತು.
ಎಲ್ಪಿಆರ್ ಎನ್ನುವುದು ಆರ್ಥಿಕತೆಯ ಸಕ್ರಿಯ ಕಾರ್ಯಪಡೆಯ ಅಳತೆಯಾಗಿದೆ. ಒಟ್ಟು ಕಾರ್ಮಿಕ - ವಯಸ್ಸಿನ ಜನಸಂಖ್ಯೆಯಿಂದ ಕಾರ್ಮಿಕರ ಬಲವನ್ನು ಭಾಗಿಸುವ ಮೂಲಕ ಇದನ್ನು ಲೆಕ್ಕ ಹಾಕಲಾಗುತ್ತದೆ.
ಡಿಸೆಂಬರ್‌ನಲ್ಲಿ ಎಲ್‌ಪಿಆರ್ ಭಾಗಶಃ ಚೇತರಿಸಿಕೊಂಡು ಶೇ 40.6ಕ್ಕೆ ತಲುಪಿದೆ. ಕೆಲಸ ಹುಡುಕುವ ಜನರ ಒಳಹರಿವು ಹೆಚ್ಚಾಯಿತು ಮತ್ತು ಕಾರ್ಮಿಕ ಬಲವು ನವೆಂಬರ್‌ನಲ್ಲಿ ಅಂದಾಜು 421 ದಶಲಕ್ಷದಿಂದ ಡಿಸೆಂಬರ್‌ನಲ್ಲಿ 427 ದಶಲಕ್ಷಕ್ಕೆ ಏರಿತು. ಆದರೆ, ಕಾರ್ಮಿಕರ ಮಾರುಕಟ್ಟೆಗಳು ಈ ಆರು ಮಿಲಿಯನ್ ಕಾರ್ಮಿಕರ ಉಲ್ಬಣಕ್ಕೆ ಸಿದ್ಧವಾಗಿಲ್ಲ, ಇದರಿಂದಾಗಿ ಅವರು ಹೆಚ್ಚಾಗಿ ನಿರುದ್ಯೋಗಿಗಳಾಗಿದ್ದಾರೆ ಎಂದು ವ್ಯಾಸ್ ಹೇಳಿದರು.
ಡಿಸೆಂಬರ್‌ನಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ಪ್ರಾಥಮಿಕ ಕಾರಣವೆಂದರೆ ಕೃಷಿ ಕ್ಷೇತ್ರವು ಕಾರ್ಮಿಕರ ಒಳಹರಿವು ಸೇರಿಸಿಕೊಳ್ಳುಲು ವಿಫಲವಾಗಿದೆ ಎಂದು ಸಿಎಂಐಇ ಗಮನಿಸಿದೆ. ಕೃಷಿಯು ನಿರುದ್ಯೋಗಿಗಳಾಗಿರುವ ಅನೇಕರ ಕೊನೆಯ ಉಪಾಯವಾಗಿದೆ. ಆದರೆ, ಕಾರ್ಮಿಕರನ್ನು ಸೇರಿಸಕೊಳ್ಳಲು ಡಿಸೆಂಬರ್ ಸೂಕ್ತ ತಿಂಗಳಲ್ಲ ಎಂದು ಹೇಳಿದೆ.
ಭಾರತವು ನವೆಂಬರ್‌ನಲ್ಲಿ 27.4 ಮಿಲಿಯನ್ಗೆ ಹೋಲಿಸಿದರೆ ಡಿಸೆಂಬರ್ ಅಂತ್ಯದ ವೇಳೆಗೆ ಸುಮಾರು 38.7 ಮಿಲಿಯನ್ ನಿರುದ್ಯೋಗಿಗಳನ್ನು ಹೊಂದಿದ್ದು, 11.3 ಮಿಲಿಯನ್ ಭಾರಿ ಹೆಚ್ಚಳವನ್ನು ದಾಖಲಿಸಿದೆ. ಲಾಕ್‌ಡೌನ್‌ಗೆ ಮುಂಚಿನ ನಿರುದ್ಯೋಗಿಗಳಿಗಿಂತ ಹೆಚ್ಚಿನ ಸಂಖ್ಯೆ ಇದಾಗಿದೆ.