ETV Bharat / bharat

ದೇಶದ ಅತ್ಯುತ್ತಮ ಟಾಪ್​ 10 ಪೊಲೀಸ್​ ಠಾಣೆಗಳಿವು... ರಾಜ್ಯಕ್ಕಿಲ್ಲ ಇಲ್ಲಿ ಸ್ಥಾನ - ಕೇಂದ್ರ ಗೃಹ ಸಚಿವಾಲಯ

ಪೊಲೀಸ್ ಠಾಣೆಗಳ ಕಾರ್ಯಕ್ಷಮತೆ, ಮೂಲಸೌಕರ್ಯದ ಆಧಾರದ ಮೇಲೆ 2020ನೇ ವರ್ಷದ ದೇಶದಲ್ಲಿನ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಟಾಪ್​ 10 ಪೊಲೀಸ್​ ಠಾಣೆಗಳ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ.

Indias top 10 police stations for 2020 announced
ದೇಶದ ಅತ್ಯುತ್ತಮ ಟಾಪ್​ 10 ಪೊಲೀಸ್​ ಠಾಣೆಗಳಿವು
author img

By

Published : Dec 3, 2020, 5:55 PM IST

ನವದೆಹಲಿ: 2020ನೇ ವರ್ಷದ ದೇಶದಲ್ಲಿನ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಟಾಪ್​ 10 ಪೊಲೀಸ್​ ಠಾಣೆಗಳ ಪಟ್ಟಿಯನ್ನು ಭಾರತ ಸರ್ಕಾರ ಇಂದು ಪ್ರಕಟಿಸಿದೆ. ಮಣಿಪುರದ ಥೌಬಲ್ ಜಿಲ್ಲೆಯ ನಾಂಗ್​ಪೋಕ್​ ಸೆಕ್ಮೈ ಪೊಲೀಸ್​ ಠಾಣೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಹೆಚ್ಚು ಪರಿಣಾಮಕಾರಿಯಾದ ಕಾರ್ಯ ಚಟುವಟಿಕೆಯನ್ನು ಉತ್ತೇಜಿಸಲು ಮತ್ತು ಆರೋಗ್ಯಕರ ಸ್ಪರ್ಧೆಯನ್ನು ತರಲು ಕೇಂದ್ರ ಗೃಹ ಸಚಿವಾಲಯವು ಪ್ರತಿವರ್ಷ ದೇಶಾದ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡುತ್ತದೆ.

2015ರಲ್ಲಿ ಗುಜರಾತ್‌ನ ಕಚ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಟಾಪ್​ 10 ಪೊಲೀಸ್​ ಠಾಣೆಗಳ ಹೆಸರು ಸೂಚಿಸುವಂತೆ ತಿಳಿಸಿದ್ದರು. ಅಂದಿನಿಂದ ಪ್ರತಿ ವರ್ಷ ಪೊಲೀಸ್ ಮಹಾನಿರ್ದೇಶಕರ ನಿರ್ದೇಶನದ ಮೇರೆಗೆ ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡಲಾಗುತ್ತದೆ. ಪೊಲೀಸ್ ಠಾಣೆಗಳ ಕಾರ್ಯಕ್ಷಮತೆ, ಮೂಲಸೌಕರ್ಯದ ಆಧಾರದ ಮೇಲೆ ಶ್ರೇಣೀಕರಿಸಲಾಗುತ್ತದೆ. ಈ ವರ್ಷದ ಅತ್ಯುತ್ತಮ ಪೊಲೀಸ್ ಠಾಣೆಗಳಿಗಾಗಿ ಗೃಹ ಸಚಿವಾಲಯವು ಸಮೀಕ್ಷೆ ನಡೆಸಿತ್ತು.

2020ರ ದೇಶದ ಟಾಪ್ 10 ಪೊಲೀಸ್ ಠಾಣೆಗಳಿವು..

1. ಮಣಿಪುರದ ಥೌಬಲ್ ಜಿಲ್ಲೆಯ ನಾಂಗ್​ಪೋಕ್​ ಸೆಕ್ಮೈ ಪೊಲೀಸ್​ ಠಾಣೆ

2. ತಮಿಳುನಾಡಿನ ಸೇಲಂ ನಗರದ ಎಡಬ್ಲ್ಯೂಪಿಎಸ್-ಸುರಮಂಗಲಂ ಠಾಣೆ

3. ಅರುಣಾಚಲ ಪ್ರದೇಶದ ಚಾಂಗ್ಲಾಂಗ್​ನ ಖರ್ಸಾಂಗ್ ಠಾಣೆ

4. ಛತ್ತೀಸ್​ಗಢದ ಸೂರಜ್‌ಪುರದ ಭೈಯಾ ಠಾಣೆ

5. ಗೋವಾದ ಸಾಂಗುಮ್ ಠಾಣೆ

6. ಅಂಡಮಾನ್ ಮತ್ತು ನಿಕೋಬಾರ್​​ನ ಕಾಲಿಘಾಟ್ ಠಾಣೆ

7. ಸಿಕ್ಕಿಂನ ಪಾಕ್ಯಾಂಗ್ ಠಾಣೆ

8. ಉತ್ತರ ಪ್ರದೇಶದ ಮೊರಾದಾಬಾದ್​ನ ಕಾಂತ್ ಠಾಣೆ

9. ದಾದ್ರಾ ಮತ್ತು ನಗರ್​​ ಹವೇಲಿಯ ಖಾನ್ವೆಲ್ ಠಾಣೆ

10. ತೆಲಂಗಾಣ ಕರೀಂನಗರದ ಜಮ್ಮಿಕುಂಟ ಟೌನ್ ಪೊಲೀಸ್​ ಠಾಣೆ

ರಾಜ್ಯಕ್ಕಿಲ್ಲ ಈ ಸ್ಥಾನ

2018ರಲ್ಲಿ ಬಿಡುಗಡೆಯಾದ ದೇಶದ ಅತ್ಯುತ್ತಮ ಟಾಪ್​ 10 ಪೊಲೀಸ್​ ಠಾಣೆಗಳ ಪಟ್ಟಿಯಲ್ಲಿ ಕರ್ನಾಟಕದ ಧಾರವಾಡದ ಗುಡಗೇರಿ 5ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ರಾಜ್ಯದ ಯಾವುದೇ ಠಾಣೆಯ ಹೆಸರು ಈ ಪಟ್ಟಿಯಲ್ಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.