ಬೆಂಗಳೂರು : ಜನರಿಗೆ ನ್ಯಾಯ ದೊರಕಿಸಿ ಕೊಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 14ನೇ ಸ್ಥಾನ ಲಭಿಸಿದೆ. ನೆರೆಯ ಮಹಾರಾಷ್ಟ್ರ ಈ ಬಾರಿಯೂ ಪ್ರಥಮ ಸ್ಥಾನ ಉಳಿಸಿಕೊಂಡಿದೆ.
2020 ಸಾಲಿನಲ್ಲಿ ಕಾರಾಗೃಹ, ಪೊಲೀಸ್, ನ್ಯಾಯಾಂಗ ಮತ್ತು ಕಾನೂನು ಸಹಾಯದ ಸಂಯೋಜಿತ ಶ್ರೇಯಾಂಕ ಎಂದು ಭಾರತದ ನ್ಯಾಯ ವರದಿಯಲ್ಲಿ ಟಾಟಾ ಟ್ರಸ್ಟ್ ಉಲ್ಲೇಖಿಸಿದೆ. ಕಳೆದ ವರ್ಷ 6ನೇ ಸ್ಥಾನದಲ್ಲಿದ್ದ ಕರ್ನಾಟಕ, ಬಿಹಾರದ ನಂತರದ ಸ್ಥಾನ ಪಡೆದಿದೆ.
ಭಾರತದಲ್ಲಿ 1 ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಧ್ಯಮ ಗಾತ್ರದ ರಾಜ್ಯಗಳಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನ ಪಡೆದಿದ್ದು,ನಂತರದ ಸ್ಥಾನದಲ್ಲಿ ತಮಿಳುನಾಡು,ತೆಲಂಗಾಣ,ಪಂಜಾಬ್ ಮತ್ತು ಕೇರಳ ರಾಜ್ಯಗಳಿವೆ.
ಭಾರತದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯಲ್ಲಿ ಚೇತರಿಕೆ ಕಂಡಿದೆ. ಶೇ.29ರಷ್ಟು ಸ್ಥಾನ ದೊರೆತಿದೆ. ರಾಜ್ಯ ಹೈಕೋರ್ಟ್ಗಳಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆ ಶೇ.11 ರಿಂದ 13ಕ್ಕೆ ಏರಿಕೆಯಾಗಿದೆ. ವರದಿಯಲ್ಲಿ ಗಮನಿಸಬೇಕಾದ ಅಂಶವೆಂದ್ರೆ ಕಳೆದ 25 ವರ್ಷದಲ್ಲಿ ಕೇವಲ 1.5 ಕೋಟಿ ಜನ ಮಾತ್ರ ಕಾನೂನಿನ ನೆರವು ಪಡೆದಿದ್ದಾರೆ.
ಈ ಉದ್ದೇಶದಿದಂದಲೇ ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರ 1.05 ಖರ್ಚು ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನೂ ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ರಾಜ್ಯಗಳ ಪಟ್ಟಿಯಲ್ಲಿ ತ್ರಿಪುರ,ಸಿಕ್ಕಿಂ ಹಾಗೂ ಗೋವಾ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.