ತಿರುವನಂತಪುರಂ/ಕೇರಳ : ತಿರುವನಂತಪುರಂನ ವೇಲಿ ಪ್ರವಾಸಿ ಗ್ರಾಮದಲ್ಲಿ ಭಾರತದ ಮೊದಲ ಸೌರಶಕ್ತಿ ಚಾಲಿತ ಚಿಕಣಿ ರೈಲು ಇಂದಿನಿಂದ ತನ್ನ ಪಯಣ ಆರಂಭಸಿದ್ದು, ಪ್ರಯಾಣಿಕರಿಗೆ ಸಂತಸವನ್ನುಂಟು ಮಾಡಿದೆ.
ಇದು ದೇಶದಲ್ಲೇ ಸೌರಶಕ್ತಿ ಚಾಲಿತ ಮೊದಲ ಚಿಕಣಿ ರೈಲಾಗಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಳೆದ ತಿಂಗಳು ತಿರುವನಂತಪುರದ ವೆಲಿ ಪ್ರವಾಸಿ ಗ್ರಾಮದಲ್ಲಿ ಉದ್ಘಾಟಿಸಿದ್ದರು.
ಭಾರತದ ಮೊದಲ ಸೌರಶಕ್ತಿ ಚಾಲಿತ ಚಿಕಣಿ ರೈಲಿನಲ್ಲಿ ಜನರು ಜಾಲಿ ರೈಡ್ ಹೋಗಬಹುದು. ಇದು ಪರಿಸರ ಸ್ನೇಹಿಯಾಗಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಸೌಂದರ್ಯ ಆನಂದಿಸಲು ನೆರವಾಗಲಿದೆ. ಜೊತೆಗೆ ಒಂದು ಉತ್ತಮ ಅನುಭವ ನೀಡುತ್ತದೆ. ಇಂದಿನಿಂದ ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಬಹುದು.
ಚಿಕಣಿ ರೈಲು ಸುರಂಗ, ನಿಲ್ದಾಣ ಮತ್ತು ಟಿಕೆಟ್ ನೀಡುವ ಕಚೇರಿ ಸೇರಿದಂತೆ ಸಂಪೂರ್ಣ ಸುಸಜ್ಜಿತ ರೈಲು ವ್ಯವಸ್ಥೆಯ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ. ನಿಲ್ದಾಣಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಉತ್ಪತ್ತಿಯಾಗುವ ಹೆಚ್ಚುವರಿ ಶಕ್ತಿಯನ್ನು ಕೇರಳ ರಾಜ್ಯ ವಿದ್ಯುತ್ ಮಂಡಳಿಗೆ ಪೂರೈಸಲಾಗುತ್ತದೆ.