ನವದೆಹಲಿ : ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತೀಯ ರೈಲ್ವೆ ಇಲಾಖೆ ಆಮ್ಲಜನಕವನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಭಾರತೀಯ ರೈಲ್ವೆ ಮುಂದಿನ 24 ಗಂಟೆಗಳಲ್ಲಿ 140 ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ದ್ರವ ಆಮ್ಲಜನಕವನ್ನು ತಲುಪಿಸಲಿದೆ. ಪ್ರಸ್ತುತ 9 ಟ್ಯಾಂಕರ್‌ಗಳು ಈಗಾಗಲೇ ಚಾಲನೆಯಲ್ಲಿವೆ.
ಈ ಒಂಬತ್ತರಲ್ಲಿ 5 ಇಂದು ರಾತ್ರಿಯ ಹೊತ್ತಿಗೆ ಲಖನೌ ತಲುಪಲಿವೆ ಮತ್ತು ಬೊಕಾರೊದಿಂದ ಈಗಾಗಲೇ ಹೊರಟಿರುವೆ. ಉಳಿದ 4 ಎಲ್‌ಎಂಒ ಕಂಟೇನರ್‌ಗಳು ನಾಳೆ ಮುಂಜಾನೆ ಲಖನೌ ತಲುಪುವ ನಿರೀಕ್ಷೆಯಿದೆ.
4 ಟ್ಯಾಂಕರ್‌ಗಳು (ಸುಮಾರು 70 ಮೆಟ್ರಿಕ್ ಟನ್ ಎಲ್‌ಎಂಒ) ಹೊತ್ತು ಒಂದು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಇಂದು ರಾತ್ರಿ ಛತ್ತೀಸ್‌ಗಢದ ರಾಯಗಢದಿಂದ ದೆಹಲಿಗೆ ತೆರಳಲಿದೆ.
ಹಾಗೆ ಉಳಿದ ಆಕ್ಸಿಜನ್ ಎಕ್ಸ್‌ಪ್ರೆಸ್ ಮುಂಬೈನಿಂದ ವೈಜಾಗ್ ನಡುವೆ ನಾಗ್ಪುರದಿಂದ ನಾಸಿಕ್ ಮತ್ತು ಲಖನೌದಿಂದ ಬೊಕಾರೊ ಕಡೆ ಸಂಚಾರ ಬೆಳೆಸಿವೆ.
ಸುಮಾರು 150 ಟನ್ ದ್ರವ ಆಮ್ಲಜನಕವನ್ನು ಹೊಂದಿರುವ ಒಟ್ಟು 10 ಟ್ಯಾಂಕ್ಗಳನ್ನು ಇಲ್ಲಿಯವರೆಗೆ ಸಾಗಿಸಲಾಗಿದೆ. ಟ್ಯಾಂಕರ್‌ಗಳನ್ನು ಪಡೆಯಲು ಭಾರತೀಯ ರೈಲ್ವೆ ದೆಹಲಿ ಸರ್ಕಾರಕ್ಕೆ ಮಾಹಿತಿ ನೀಡಿದೆ. ದುರ್ಗಾಪುರದಿಂದ ದೆಹಲಿಗೆ ಆಮ್ಲಜನಕ ಸಾಗಿಸಲು ಭಾರತೀಯ ರೈಲ್ವೆ ಸಿದ್ಧವಾಗಿದೆ.
ಮಹಾರಾಷ್ಟ್ರಕ್ಕೆ ಹೆಚ್ಚಿನ ದ್ರವ ವೈದ್ಯಕೀಯ ಆಮ್ಲಜನಕವನ್ನು ತಲುಪಿಸಲು ಭಾರತೀಯ ರೈಲ್ವೆ ಆಕ್ಸಿಜನ್ ಜಮ್ನಾಗರದಿಂದ ಮುಂಬೈಗೆ ಮತ್ತು ನಾಗ್ಪುರ, ಪುಣೆಗೆ ಹಾಗೂ ವಿಜ್, ಅಂಗುಲ್‌ನಿಂದ ಸಾಗಿಸಲು ಯೋಜಿಸಿದೆ.
ತೆಲಂಗಾಣಕ್ಕೆ ಅಂಗುಲ್‌ನಿಂದ ಸಿಕಂದರಾಬಾದ್‌ಗೆ ಹೋಗುವ ಮಾರ್ಗವನ್ನು ಮ್ಯಾಪ್ ಮಾಡಿದೆ. ಆಂಧ್ರಪ್ರದೇಶ ರಾಜ್ಯಕ್ಕೆ ಅಂಗುಲ್‌ನಿಂದ ವಿಜಯವಾಡಕ್ಕೆ ರವಾನೆ ಮಾಡಲು ಮಾರ್ಗ ಆಯ್ಕೆ ಮಾಡಿಕೊಳ್ಳಲಾಗಿದೆ. ಮಧ್ಯಪ್ರದೇಶಕ್ಕೆ, ಜಮ್ಶೆಡ್ಪುರದಿಂದ ಜಬಲ್ಪುರಕ್ಕೆ ಹೋಗುವ ಮಾರ್ಗವನ್ನು ಮ್ಯಾಪ್ ಮಾಡಿದೆ.