ETV Bharat / bharat

ವಿದೇಶಿ ನೆಲದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಭಾರತೀಯ ಸಂಜಾತರಿವರು..

author img

By

Published : Oct 25, 2022, 3:28 PM IST

ಭಾರತೀಯ ಮೂಲದ ವ್ಯಕ್ತಿಗಳು ಈಗಾಗಲೇ ಐದು ದೇಶಗಳಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಉಪರಾಷ್ಟ್ರಪತಿ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಈ ಮೂಲಕ ಭಾರತೀಯ ಮೂಲದ ಜನರು ವಿದೇಶಿ ನೆಲದಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸುವ ಮೂಲಕ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಜಗತ್ತಿಗೆ ತೋರಿಸುತ್ತಿದ್ದಾರೆ.

ದೇಶಗಳ ಚುಕ್ಕಾಣಿ ಹಿಡಿದ ಭಾರತೀಯ ಸಂಜಾತರಿವರು..
indian-origin-persons-who-are-serving-heads-of-different-countries

ಹೈದರಾಬಾದ್: ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾಗಿರುವುದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇದರೊಂದಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಧಿಕಾರದ ಚುಕ್ಕಾಣಿ ಹಿಡಿದ ವಿಶ್ವದ ಆರನೇ ರಾಷ್ಟ್ರವಾಗಿದೆ ಬ್ರಿಟನ್. ಹಾಗಾದರೆ ಭಾರತೀಯ ಮೂಲದ ಜನರು ಯಾವ್ಯಾವ ದೇಶಗಳಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂಬುದನ್ನು ನೋಡೋಣ.

ಭಾರತೀಯ ಮೂಲದ ವ್ಯಕ್ತಿಗಳು ಈಗಾಗಲೇ ಐದು ದೇಶಗಳಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಉಪರಾಷ್ಟ್ರಪತಿ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಗೋವಾ ಮೂಲದ ಅಂಟೋನಿಯೊ ಕೋಸ್ಟಾ ಪೋರ್ಚುಗಲ್‌ನ ಪ್ರಧಾನಿಯಾಗಿ ಮುಂದುವರಿದಿದ್ದಾರೆ. ಆಂಟೋನಿಯೊ ಕೋಸ್ಟಾ ಅವರ ತಂದೆ ಅರ್ನಾಲ್ಡೊ ಡಾ. ಕೋಸ್ಟಾ ಗೋವಾ ಮೂಲದ ಕುಟುಂಬಕ್ಕೆ ಸೇರಿದವರು.

ಇಂಡೋ-ಗಯಾನೀಸ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಮೊಹಮ್ಮದ್ ಇರ್ಫಾನ್ 2020 ರಲ್ಲಿ ಗಯಾನಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 2017 ರಲ್ಲಿ ಮಾರಿಷಸ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಪ್ರವಿಂದ್ ಜುಗ್ನೌತ್ ಭಾರತ ಮೂಲದ ಹಿಂದೂ ಕುಟುಂಬಕ್ಕೆ ಸೇರಿದವರು. ಮಾರಿಷಸ್ ಅಧ್ಯಕ್ಷ ಪೃಥ್ವಿರಾಜ್ ಸಿಂಗ್ ರೂಪುನ್ ಅವರ ಕುಟುಂಬ ಭಾರತೀಯ ಆರ್ಯ ಸಮಾಜ ಹಿಂದೂ ಕುಟುಂಬಕ್ಕೆ ಸೇರಿದೆ. ಇವರು ಹಲವು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2019 ರಲ್ಲಿ ಇವರು ಮಾರಿಷಸ್ ಅಧ್ಯಕ್ಷರಾದರು.

ಚಂದ್ರಿಕಾ ಪ್ರಸಾದ್ ಸಂತೋಖಿ ಪ್ರಸ್ತುತ ದಕ್ಷಿಣ ಅಮೆರಿಕದ ಸುರಿನಾಮ್‌ನ ಅಧ್ಯಕ್ಷರಾಗಿದ್ದಾರೆ. 1959 ರಲ್ಲಿ ಜನಿಸಿದ ಇವರು ಭಾರತ ಮೂಲದ ಕುಟುಂಬದವರಾಗಿದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಸದ್ಯ ಅಮೆರಿಕದ ಉಪಾಧ್ಯಕ್ಷರಾಗಿದ್ದಾರೆ. ಇವರು ಪೂರ್ವಜರು ತಮಿಳುನಾಡಿನ ತಿರುವರೂರು ಜಿಲ್ಲೆಯ ತುಲಸೇಂದ್ರಿಪುರಂನವರು. ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ತಮಿಳುನಾಡಿನವರು.

ಈ ಮೂಲಕ ಭಾರತೀಯ ಮೂಲದ ಜನರು ವಿದೇಶಿ ನೆಲದಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸುವ ಮೂಲಕ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಈ ಐದು ದೇಶಗಳ ಹೊರತಾಗಿ, ಭಾರತೀಯ ಮೂಲದ ವ್ಯಕ್ತಿಗಳು ಟ್ರಿನಿಡಾಡ್ ಮತ್ತು ಟೊಬಾಗೊ, ಮಲೇಷ್ಯಾ, ಫಿಜಿ ಮತ್ತು ಐರ್ಲೆಂಡ್‌ನಂತಹ ದೇಶಗಳಲ್ಲಿ ಪ್ರಮುಖ ಸ್ಥಾನಗಳನ್ನು ನಿಭಾಯಿಸುತ್ತಿದ್ದಾರೆ. ಇದು ಭಾರತ ಮತ್ತು ಭಾರತೀಯರಿಗೆ ಹೆಮ್ಮೆಯ ಸಂಗತಿ.

ಇದನ್ನೂ ಓದಿ: ಶ್ವೇತಭವನದಲ್ಲಿ ದೀಪಾವಳಿ ಹಬ್ಬ ಆಚರಿಸಿದ ಜೋ ಬೈಡನ್.. ಕಮಲಾ ಹ್ಯಾರಿಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.