ಬೆಂಗಳೂರು: ಭಾರತೀಯ ನೌಕಾ ಸೇನೆಯಲ್ಲಿ ಖಾಲಿ ಇರುವ 910 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಟ್ರೇಡ್ಸ್‌ಮ್ಯಾನ್ ಮತ್ತು ಹಿರಿಯ ಡ್ರಾಫ್ಟ್‌ಮ್ಯಾನ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ ಇಂತಿದೆ.
ಹುದ್ದೆ ವಿವರ: ಭಾರತೀಯ ನೌಕಾ ಸೇನೆಯಲ್ಲಿ ಖಾಲಿ ಇರುವ 910 ವಿವಿಧ ಹುದ್ದೆ ಮಾಹಿತಿ ಇಂತಿದೆ.
- ಚಾರ್ಜ್‌ಮ್ಯಾನ್ (ಮದ್ದುಗುಂಡುಗಳ ಕಾರ್ಯಾಗಾರ) 22
- ಚಾರ್ಜ್‌ಮ್ಯಾನ್ (ಫ್ಯಾಕ್ಟರಿ) 20
- ಹಿರಿಯ ಡ್ರಾಫ್ಟ್‌ಮ್ಯಾನ್ (ಎಲೆಕ್ಟ್ರಿಕಲ್) 142
- ಹಿರಿಯ ಡ್ರಾಫ್ಟ್‌ಮ್ಯಾನ್ (ಮೆಕ್ಯಾನಿಕಲ್) 26
- ಹಿರಿಯ ಡ್ರಾಫ್ಟ್‌ಮ್ಯಾನ್ (ನಿರ್ಮಾಣ) 29
- ಹಿರಿಯ ಡ್ರಾಫ್ಟ್‌ಮ್ಯಾನ್ (ಕಾರ್ಟೊಗ್ರಾಫಿಕ್) 11
- ಹಿರಿಯ ಡ್ರಾಫ್ಟ್‌ಮ್ಯಾನ್ (ಶಸ್ತ್ರಾಸ್ತ್ರ) 50
- ವ್ಯಾಪಾರಿ (ಪೂರ್ವ ನೌಕಾ ಕಮಾಂಡ್) 9
- ಟ್ರೇಡ್ಸ್‌ಮ್ಯಾನ್ (ಪಶ್ಚಿಮ ನೌಕಾ ಕಮಾಂಡ್) 565
- ವ್ಯಾಪಾರಿ (ದಕ್ಷಿಣ ನೌಕಾ ಕಮಾಂಡ್) 36
ವಿದ್ಯಾರ್ಹತೆ ; ಚಾರ್ಜ್‌ಮ್ಯಾನ್ ಹುದ್ದೆಗಳಿಗೆ ಅಭ್ಯರ್ಥಿಗಳು ಕೆಮಿಕಲ್ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. ಹಿರಿಯ ಡ್ರಾಫ್ಟ್‌ಮ್ಯಾನ್ ಹುದ್ದೆ ಮತ್ತು ಟ್ರೇಡ್ಸ್‌ಮ್ಯಾನ್ ಹುದ್ದೆಗೆ ಅಭ್ಯರ್ಥಿ 10ನೇ ತರಗತಿ, ಡಿಪ್ಲೊಮಾ, ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 25 ವರ್ಷ ಪೂರ್ಣಗೊಳಿಸಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರೆ ಅಭ್ಯರ್ಥಿಗಳಿಗೆ 295 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಡಿಸೆಂಬರ್ 18 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್ 31 ಆಗಿದೆ.
ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಅಗತ್ಯ ಮಾಹಿತಿಗಳಿಗೆ ಅಭ್ಯರ್ಥಿಗಳು joinindiannavy.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ:ಹಾಸನ ಜಿಲ್ಲಾ ಪಂಚಾಯತ್ ನೇಮಕಾತಿ; 10 ನೇ ತರಗತಿ ಪಾಸ್ ಆಗಿದ್ರೆ ಅರ್ಜಿ ಸಲ್ಲಿಸಿ