ETV Bharat / bharat

ನೌಕಾಪಡೆಗೆ ಅಗ್ನಿವೀರರ ನೇಮಕ: ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ವಾಯುಪಡೆಯ ಬಳಿಕ ನೌಕಾಪಡೆಗೆ ಅಗ್ನಿಪಥ ಯೋಜನೆಯಡಿ ಅಗ್ನಿವೀರರ ನೇಮಕಕ್ಕೆ ಚಾಲನೆ ನೀಡಲಾಗಿದೆ.

indian-navy-recruit-agniveer-posts
ನೌಕಾಪಡೆಗೆ ಅಗ್ನಿವೀರರ ನೇಮಕ
author img

By

Published : Jul 25, 2022, 10:30 AM IST

ನವದೆಹಲಿ: ಭಾರಿ ವಿರೋಧದ ಮಧ್ಯೆಯೇ ಜಾರಿ ಮಾಡಲಾದ ಅಗ್ನಿಪಥ್​ ಯೋಜನೆಯಡಿ ಭಾರತೀಯ ನೌಕಾಪಡೆಗೆ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಇಂದಿನಿಂದ (ಜುಲೈ 25) ಪ್ರಕ್ರಿಯೆ ಆರಂಭಿಸಲಾಗಿದೆ. ಅರ್ಹ ಅಭ್ಯರ್ಥಿಗಳು joininsiannavy.gov.in ನಲ್ಲಿ ತಮ್ಮ ಅರ್ಜಿಗಳನ್ನು ಗುಜರಾಯಿಸಬಹುದು.

ಯುವಕ- ಯುವತಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನವಾಗಿರಲಿದೆ. ನೌಕಾಪಡೆ 200 ಅಗ್ನಿವೀರರನ್ನು ಭರ್ತಿ ಮಾಡಿಕೊಳ್ಳಲಿದೆ.

ಅರ್ಹತೆಯ ಮಾನದಂಡವೇನು?: ಅರ್ಜಿ ಸಲ್ಲಿಸಲು ಬಯಸಿದವರು ಶಿಕ್ಷಣ ಸಚಿವಾಲಯದಿಂದ ಮಾನ್ಯತೆ ಪಡೆದ ಶಾಲಾ ಕಾಲೇಜಿನಿಂದ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಡಿಸೆಂಬರ್ 1, 1999 ಮತ್ತು ಮೇ 31, 2005 ರ ನಡುವೆ ಜನಿಸಿದವರಾಗಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?: 10 ನೇ ತರಗತಿಯಲ್ಲಿ ಪಡೆದ ಒಟ್ಟು ಶೇಕಡಾವಾರು ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್‌ಲಿಸ್ಟ್ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ನಡೆಸಲಾಗುತ್ತದೆ.

ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷಗೆ ಆಧಾರ್ ಕಾರ್ಡ್ ದಾಖಲೆ ಕಡ್ಡಾಯವಾಗಿರಲಿದೆ. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಲಿಖಿತ ಪರೀಕ್ಷೆಯಲ್ಲಿನ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ. ಮೆರಿಟ್ ಪಟ್ಟಿಯು ನವೆಂಬರ್​ನಲ್ಲಿ ಅಂತಿಮಗೊಳಿಸಲಾಗುತ್ತದೆ.

ಈ ಹಿಂದೆ ಅಂದರೆ ಜೂ. 24ರಂದು ವಾಯುಪಡೆಯು ಅಗ್ನಿವೀರರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಇದಕ್ಕೆ ದಾಖಲೆಯ 7.5 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಇದು ಈವರೆಗೂ ಬಂದ ಅರ್ಜಿಗಳಲ್ಲಿಯೇ ದಾಖಲೆ ಮಾಡಿತ್ತು.

ಇದನ್ನೂ ಓದಿ: ದುಷ್ಟರಿಂದ ಪಿಒಕೆ ಜನರ ರಕ್ಷಣೆಗೆ ಭಾರತ ಸದಾ ಬದ್ಧ: ರಾಜನಾಥ್​ ಸಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.